More

    ತಿಮ್ಮಾಪುರದಲ್ಲಿ 400 ಹಗೇವು!

    ಗದಗ: ಈ ಗ್ರಾಮದ ತುಂಬಾ ಬರೀ ಹಗೇವುಗಳು. ಅವುಗಳಲ್ಲಿಯೇ ದವಸ-ಧಾನ್ಯಗಳ ಸಂಗ್ರಹಿಸುವ ರೈತರು ತಮಗೆ ಬೇಕು ಎನಿಸಿದಾಗ ತೆಗೆದುಕೊಳ್ಳುತ್ತಾರೆ.

    ಪ್ರಾಚೀನ ಕಾಲದ ಈ ಸಾಂಪ್ರದಾಯಿಕ ಕೃಷಿ ಪದ್ಧತಿ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಇಂದಿಗೂ ಕಾಣಸಿಗುತ್ತದೆ.

    ಗೋದಾಮುಗಳ ನಿರ್ಮಾಣ ಹೆಚ್ಚಾದಂತೆ ಉತ್ತರ ಕರ್ನಾಟಕದಲ್ಲಿ ಧಾನ್ಯ ಸಂರಕ್ಷಿಸುವ ಹಗೇವುಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ತಿಮ್ಮಾಪುರ ಗ್ರಾಮದ ರೈತರು ಧಾನ್ಯಗಳನ್ನು ಭೂಮಿಯೊಳಗೆ ಸಂರಕ್ಷಿಸುವ ವಿಧಾನ ಮುಂದುವರಿಸಿಕೊಂಡು ಬಂದಿದ್ದಾರೆ. ಗ್ರಾಮದಲ್ಲೀಗ 400ಕ್ಕೂ ಹೆಚ್ಚು ಹಗೇವು ಇವೆ. ಈ ಪೈಕಿ 150ಕ್ಕೂ ಹೆಚ್ಚು ಹಗೇವುಗಳು ಈಗಲೂ ಬಳಕೆಯಾಗುತ್ತಿವೆ.

    ಗ್ರಾಮದಲ್ಲಿ 1300 ಮನೆಗಳು ಹಾಗೂ 5000ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಗ್ರಾಮಸ್ಥರು ಪರಸ್ಪರ ಸಹಕಾರ ಮನೋಭಾವದಿಂದ ಖಾಲಿ ಹಗೇವುಗಳಲ್ಲಿ ಧಾನ್ಯಗಳನ್ನು 2-3 ವರ್ಷಗಳವರೆಗೆ ಸಂಗ್ರಹಿಸಿಟ್ಟು, ಬೆಲೆ ಬಂದಾಗ ಮಾರಾಟ ಮಾಡುತ್ತಾರೆ. ನೆಲದಿಂದ 10ರಿಂದ 30 ಅಡಿ ಆಳದಲ್ಲಿ ದೊಡ್ಡ, ಸಣ್ಣ ಹಗೇವುಗಳಿವೆ. ಇವು 30ರಿಂದ 100 ಚೀಲಗಳಷ್ಟು ಧಾನ್ಯ ಸಂಗ್ರಹ ಸಾಮರ್ಥ್ಯ ಹೊಂದಿವೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ಪಶು ಆಸ್ಪತ್ರೆ ಆವರಣದ ಗಾಂವಠಾಣ ಜಾಗದ 1.5ರಿಂದ 2 ಎಕರೆ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಹಗೇವುಗಳಿವೆ. ಇವುಗಳ ರಕ್ಷಣೆಗಾಗಿ ಗ್ರಾಮಸ್ಥರು, ಗಾಂವಠಾಣ ಪ್ರದೇಶವನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ, ಅಲ್ಲಿರುವ ತಿಪ್ಪೆಗುಂಡಿ ತೆರವುಗೊಳಿಸಿ ಕಾಂಪೌಂಡ್ ನಿರ್ವಣಕ್ಕೆ ಮುಂದಾಗಿದ್ದಾರೆ.

    ತಿಮ್ಮಾಪುರ ಭಾಗದಲ್ಲಿ ಬಿಳಿಜೋಳ, ಗೋಧಿ, ಕಡಲೆ ಬೆಳೆಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಬೆಳೆ ಕೈಗೆ ಬಂದಾಗ ಬೆಲೆ ಇರಲ್ಲ. ಬೆಲೆ ಇದ್ದಾಗ ಬೆಳೆ ಇರಲ್ಲ. ಹಾಗಾಗಿ ಬೆಳೆ ಬಂದಾಗ ಹಗೇವುಗಳಲ್ಲಿ ಸಂಗ್ರಹಿಸಲಾಗುತ್ತದೆ. ಒಂದೆರಡು ವರ್ಷದ ನಂತರ ಉತ್ತಮ ಧಾರಣೆ ಬಂದಾಗ ಮಾರುತ್ತೇವೆ.
    | ರುದ್ರಪ್ಪ ಗೌಡರ ತಿಮ್ಮಾಪುರ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts