More

    ಕರೊನಾ ವಿರುದ್ಧ ಹೋರಾಡುತ್ತಿರುವ ಜರ್ಮನಿ ವೈದ್ಯರು ಬೆತ್ತಲೆ ಸೆಲ್ಫಿ ತೆಗೆದು ಜಾಲತಾಣದಲ್ಲಿ ಹರಿಬಿಟ್ಟಿದ್ದೇಕೆ?

    ಬರ್ಲಿನ್​: ಜರ್ಮನಿಯಲ್ಲಿ ಕರೊನಾ ವೈರಸ್​ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ಸಾಮಾನ್ಯ ಆರೋಗ್ಯ ಕಾರ್ಯಕರ್ತರಿಗೆ ರಕ್ಷಣಾ ಸಾಧನ ಮತ್ತು ಬಟ್ಟೆಯ ಕೊರತೆಯನ್ನು ಸರ್ಕಾರದ ಗಮನಕ್ಕೆ ತರಲು ಅಲ್ಲಿನ ವೈದ್ಯರು ಬೆತ್ತಲೆ ಸೆಲ್ಫಿ ಫೋಟೋವನ್ನು ಹರಿಬಿಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

    ರಕ್ಷಣಾ ಸಲಕರಣೆಗಳ ಕೊರತೆಯನ್ನು ಹಲವು ತಿಂಗಳಿಂದ ಜರ್ಮನಿಯ ಆರೋಗ್ಯ ಸಚಿವರಿಗೆ ತಿಳಿಸುತ್ತಾ ಬಂದಿದ್ದರೂ, ಅದನ್ನು ಕಿವಿಗೆ ಹಾಕಿಕೊಳ್ಳದಿರುವುದರಿಂದ ವೈದ್ಯರು ಬೆತ್ತಲೆ ಪ್ರತಿಭಟನೆಯ ಮೂಲಕ ಸಚಿವರ ಗಮನವನ್ನು ಸೆಳೆದಿದ್ದಾರೆ.

    ಪ್ರಸ್ತುತ ಆರೋಗ್ಯ ಬಿಕ್ಕಟ್ಟಿನಲ್ಲಿ ಪಿಪಿಇ ಇಲ್ಲದೇ ಕೆಲಸಕ್ಕೆ ಹೋಗುವುದು ಬೆತ್ತಲೆ ರೀತಿಯಂತಾಗಿದೆ. ನಗ್ನತೆಯು ರಕ್ಷಣೆಯಿಲ್ಲದೆ ನಾವೆಷ್ಟು ದುರ್ಬಲರಾಗಿದ್ದೇವೆ ಎಂಬುದರ ಸಂಕೇತವಾಗಿದೆ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕರೊನಾ ವೈರಸ್​ ಭೀತಿ ಇಡೀ ವಿಶ್ವಕ್ಕೆ ವ್ಯಾಪಿಸಿದ್ದು, ಎಲ್ಲರೂ ಭಯಗೊಂಡಿದ್ದಾರೆ. ಜರ್ಮನಿಯಲ್ಲಿ ಜನವರಿಯಲ್ಲಿ ಮೊದಲ ಪ್ರಕರಣ ಪತ್ತೆಯಾದಾಗಿನಿಂದ ಪಿಪಿಇ ಕಿಟ್​ಗಳನ್ನು ಪದೇ ಪದೆ ಕೇಳಲಾಗುತ್ತಿದೆ. ಮಾಸ್ಕ್​, ಗಾಗಲ್ಸ್​, ಗ್ಲೋವ್ಸ್​ ಮತ್ತು ಏಪ್ರಾನ್​ಗಳನ್ನು ನೀಡುವಂತೆ ನಿರಂತರವಾಗಿ ಮನವಿ ಮಾಡಲಾಗುತ್ತಿದ್ದರೂ ಅವುಗಳನ್ನು ಪೂರೈಸಿಲ್ಲ. ಇಲ್ಲಿಯವರೆಗೂ ಸಾವಿರಕ್ಕೂ ಹೆಚ್ಚು ಜನರಿಂದ ಸಹಿ ಸಂಗ್ರಹ ಅಭಿಯಾನ ಸಹ ಮಾಡಲಾಗಿದೆ. ಆದರೆ, ಏನೂ ಪ್ರಯೋಜನವಾಗಿಲ್ಲ ಎಂದು ವೈದ್ಯರು ಆರೋಪಿಸಿದ್ದಾರೆ. ಹೀಗಾಗಿ ಸರ್ಕಾರದ ವಿರುದ್ಧ ಬೆತ್ತಲೆ ಸೆಲ್ಫಿ ಫೋಟೋ ಮೂಲಕ ಪ್ರತಿಭಟನೆ ನಡೆಸಿ ಮತ್ತಷ್ಟು ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

    ನಿನ್ನೆ(ಮಂಗಳವಾರ)ಯಷ್ಟೇ ಜರ್ಮನಿಯಲ್ಲಿ 1,018 ಹೊಸ ಕರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಕಳೆದ ಆರು ವಾರಗಳಲ್ಲಿ ದಾಖಲಾದ ಅತಿ ಕಡಿಮೆ ಪ್ರಕರಣಗಳಾಗಿವೆ. ಮಾರ್ಚ್​ 14ರಿಂದ ಹೊಸ ಪ್ರಕರಣಗಳ ಸಂಖ್ಯೆ ಜರ್ಮನಿಯಲ್ಲಿ ಕಡಿಮೆಯಾಗಿದೆ. ಜರ್ಮನಿಯಲ್ಲಿ ಕರೊನಾ ಮೃತರ ಪ್ರಮಾಣ ಶೇ 3.7 ರಷ್ಟಿದ್ದು, ಇಟಲಿ(13.5), ಸ್ಪೇನ್​(11.2) ಮತ್ತು ಬ್ರಿಟನ್​(13.6)ಗೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ. (ಏಜೆನ್ಸೀಸ್​)

    ಕೈಗೆ ಕೋಳ ತೊಡಿಸಿದ್ದಲ್ಲದೇ ಯೋಧನ ಮೇಲೆ ಕ್ರೌರ್ಯ ಮೆರೆದ್ರಾ ಪೊಲೀಸರು?

    ಪುಷ್ಪಗಳಿಂದ ಮನಸೂರೆಗೊಂಡ ಕೇದಾರನಾಥ- ಮೋದಿ ಹೆಸರಲ್ಲಿ ಮೊದಲ ಪೂಜೆ: ಭಕ್ತರಿಗೆ ಸಿಗಲಿದೆಯೇ ದರುಶನ ಭಾಗ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts