More

    ಜಿಪಿಎಲ್: ಎಲೈಟ್ ಕ್ರಿಕೆಟ್ ಕ್ಲಬ್ ಚಾಂಪಿಯನ್

    ಮಡಿಕೇರಿ: ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.


    ಭಾನುವಾರ ನಡೆದ ಫೈನಲ್ ಪಂದ್ಯಾಟದಲ್ಲಿ ಟಾಸ್ ಗೆದ್ದ ಕಾಫಿ ಕ್ರಿಕೆಟರ್ಸ್‌ ತಂಡ ಕ್ಷೇತ್ರ ರಕ್ಷಣೆಯನ್ನು ಆಯ್ಕೆಮಾಡಿಕೊಂಡರು. ನಂತರ ಬ್ಯಾಟ್ ಮಾಡಿದ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ನಿಗದಿತ ೧೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೯೪ ರನ್‌ಗಳಿಸಿತು. ತಂಡದ ಪರವಾಗಿ ತಳೂರು ವಿಕ್ಕಿ ೩೨(೧೭) ಮೂರು ಸಿಕ್ಸರ್ ಮತ್ತು ೨ ಬೌಂಡರಿಗಳಿಸಿದರು. ಕಾಫಿ ಕ್ರಿಕೆಟರ್ಸ್‌ ತಂಡದ ಮಿಥುನ್ ಕುದುಕುಳಿ ಮತ್ತು ಅನಿಲ್ ಕುಡೇಕಲ್ಲು ತಲಾ ೨ ವಿಕೆಟ್ ಪಡೆದರು. ಪೊನ್ನಚನ ಮೌರ್ಯ ೧ ವಿಕೆಟ್ ಪಡೆದರು.


    ನಂತರ ಚೇಸಿಂಗ್ ಆರಂಭಿಸಿದ ಕಾಫಿ ಕ್ರಿಕೆಟರ್ಸ್‌ ತಂಡ ನಿಗದಿತ ೧೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೬೮ ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಸ್ಟಾರ್ ಐಕನ್ ಆಟಗಾರ ಅನಿಲ್ ಕುಡೇಕಲ್ಲು ವಿಕೆಟ್ ಕಳೆದುಕೊಂಡ ನಂತರ ತಂಡ ಸಂಕಷ್ಟಕ್ಜೆ ಸಿಲುಕಿಕೊಂಡಿತು. ರೋಹನ್ ೧೭ ರನ್‌ಗಳಿಸಿ ಏಕಾಂಗಿ ಹೋರಾಟ ವ್ಯಕ್ತಪಡಿಸಿದರು. ಎಲೈಟ್ ತಂಡದ ಪರ ಲೋಕೇಶ್ ಮತ್ತು ವಿಕ್ಕಿ ತಳೂರು ೨ ವಿಕೆಟ್ ಪಡೆದರು. ಅವಿನ್ ಮತ್ತು ಗಣಿತ್ ತಲಾ ಒಂದು ವಿಕೆಟ್ ಪಡೆದರು. ಫೈನಲ್ ಪಂದ್ಯಾಟದ ಪಂದ್ಯಪುರುಷೋತ್ತಮ ಪ್ರಶಸ್ತಿಯನ್ನು ತಳೂರು ವಿಕ್ಕಿ ಪಡೆದರು.


    ಇದಕ್ಕೂ ಮುನ್ನ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯಾಟ ಕಾಫಿ ಕ್ರಿಕೆಟರ್ಸ್‌ ಮತ್ತು ಎಂ.ಸಿ.ಬಿ ತಂಡಗಳ ನಡುವೆ ನಡೆಯಿತು. ಟಾಸ್ ಗೆದ್ದ ಎಂ.ಸಿ.ಬಿ ತಂಡ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಕಾಫಿ ಕ್ರಿಕೆಟರ್ಸ್‌ ತಂಡ ನಿಗದಿತ ೧೦ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೧೦೦ ರನ್ ಗಳಿಸಿತು. ತಂಡದ ಪರವಾಗಿ ಅನಿಲ್ ಕುಡೆಕಲ್ಲು ೬೨(೨೭) ರನ್‌ಗಳಿಸಿದರು. ರೋಹನ್ ೨೪ ರನ್‌ಗಳಿಸಿ ಸಾಥ್ ನೀಡಿದರು. ಎಂ.ಸಿ.ಬಿ ಪರವಾಗಿ ಕೋಳಿಬೈಲು ಕುಶ್ವಂತ್ ೨ ವಿಕೆಟ್, ಕೊಂಬಾರನ ಹರ್ಷ ೧ ವಿಕೆಟ್ ಪಡೆದರು.


    ನಂತರ ಬ್ಯಾಟ್ ಮಾಡಿದ ಎಂ.ಸಿ.ಬಿ ೧೦ ಓವರ್‌ಗೆ ೯ ವಿಕೆಟ್ ಕಳೆದುಕೊಂಡು ೭೧ ರನ್ ಗಳಿಸಳಷ್ಟೇ ಶಕ್ತವಾಯಿತು. ನಾಯಕ ಕೋಳಿಬೈಲು ಕುಶ್ವಂತ್ ಅತ್ಯಧಿಕ ೨೯ ರನ್ ಗಳಿಸಿದರು. ಕಾಫಿ ಕ್ರಿಕೆಟರ್ಸ್‌ ಪರವಾಗಿ ಜೆ.ಪಿ.ಮಾವಾಜಿ ನಾಲ್ಕು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಸಿ.ವಿವನ್ ೩ ವಿಕೆಟ್, ಅನಿಲ್ ಕುಡೇಕಲ್ಲು, ಪೊನ್ನಚನ ಮೌರ್ಯ ತಲಾ ಒಂದು ವಿಕೆಟ್ ಪಡೆದರು. ಈ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಅನಿಲ್ ಕುಡೇಕಲ್ಲು ಪಡೆದುಕೊಂಡರು.

    ಬಹುಮಾನ ವಿತರಣೆ: ಪ್ರಥಮ ಸ್ಥಾನ ಪಡೆದ ಎಲೈಟ್ ಕ್ರಿಕೆಟ್ ಕ್ಲಬ್ ತಂಡಕ್ಕೆ ೧ ಲಕ್ಷ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಕಾಫಿ ಕ್ರಿಕೆಟರ್ಸ್‌ ತಂಡಕ್ಕೆ ೫೦ ಸಾವಿರ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು. ತೃತೀಯ ಸ್ಥಾನವನ್ನು ಮಡಿಕೇರಿ ಚಾಂಪಿಯನ್ ಭಾವ(ಎಂಸಿಬಿ) ಪಡೆದರೆ, ಟೀಂ ಭಗವತಿ ತಂಡ ಚರ್ತುಥ ಬಹುಮಾನ ಸ್ವೀಕರಿಸಿದರು. ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ಕಾಫಿ ಕ್ರಿಕೆಟರ್ಸ್‌ ತಂಡದ ಅನಿಲ್ ಕುಡೆಕಲ್ಲು, ಬೆಸ್ಟ್ ಬ್ಯಾಟ್ಸ್‌ಮ್ಯಾನ್ ಹಾಗೂ ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಾ್ತಿಯನ್ನು ಎಲೈಟ್ ಕ್ರಿಕಟ್ ಕ್ಲಬ್ ನ ವಿಕ್ಕಿ, ಬೆಸ್ಟ್ ಬೌಲರ್ ಕಾಫಿ ಕ್ರಿಕೆಟರ್ಸ್‌ ತಂಡ ಜೆ.ಜಿ.ಮಾವಾಜಿ, ಬೆಸ್ಟ್ ಕ್ಯಾಚ್ ವಿವನ್, ಬೆಸ್ಟ್ ಕೀಪರ್ ಮಿಥುನ್, ಎಮರ್ಜಿಂಗ್ ಪ್ಲೇಯರ್ ನಯನ್ ಚೆರಿಯಮನೆ ಪಡೆದುಕೊಂಡರೆ, ಫೇರ್ ಪ್ಲೇ ಪ್ರಶಸ್ತಿಯನ್ನು ಕೆಜಿಎಸ್ ಸ್ಟ್ರೈಕರ್ಸ್‌ ತಂಡ ಪಡೆದುಕೊಂಡಿತ್ತು.

    ಸಮಾರೋಪ ಸಮಾರಂಭ: ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಕೊಡಗು ಗೌಡ ಫೆಡರೇಷನ್ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಂಬೇಕಲ್ ನವೀನ್ ಕುಶಾಲಪ್ಪ, ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಪತ್ರಕರ್ತ ಅನಂತಶಯನ ಇತರರು ಪಾಲ್ಗೊಂಡಿದ್ದರು. ವಿಜೇತ ತಂಡದ ಆಟಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಇದಕ್ಕೂ ಮೊದಲು ನಡೆದ ಫೈನಲ್ ಪಂದ್ಯಾಟದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಮುಖರಾದ ಶರತ್ ಕುಶಾಲಪ್ಪ ಚೊಕ್ಕಾಡಿ, ಕೊಡಗು ಗೌಡ ಯುವ ವೇದಿಕೆ ಗೌರವಾಧ್ಯಕ್ಷ ಪೊನ್ನಚ್ಚನ ಮಧು ಸೋಮಣ್ಣ, ನಿಕಟ ಪೂರ್ವ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಪ್ರಮುಖರಾದ ಕುಕ್ಕನೂರು ಚಂದ್ರಶೇಖರ್, ಚಿಲ್ಲನ ಗಣಿಪ್ರಸಾದ್, ಕುಶ್ವಂತ್ ಕೋಳಿಬೈಲು ಇತರರು ಪಾಲ್ಗೊಂಡು ಕ್ರೀಡಾಪಟುಗಳಿಗೆ ಶುಭಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts