More

    ಸರ್ಕಾರಿ ಶಾಲೆಗೆ ಹೊಸ ರೂಪ ಕೊಟ್ಟ ಹಳೇ ವಿದ್ಯಾರ್ಥಿಗಳು ; ಕೊಠಡಿಗೆ ಸುಣ್ಣ-ಬಣ್ಣ, ಕಂಪ್ಯೂಟರ್, ಪ್ರೊಜೆಕ್ಟರ್ ಕೊಡುಗೆ

    ಬೂದಿಕೋಟೆ: ಬಂಗಾರಪೇಟೆ ತಾಲೂಕಿನ ಗಡಿಭಾಗದ ಸರ್ಕಾರಿ ಶಾಲೆಯಲ್ಲಿ ಓದಿದ ಹಳೇ ವಿದ್ಯಾರ್ಥಿಗಳು, ತಾವು ಓದಿದ ಶಾಲೆಗೆ ಹೊಸ ರೂಪ ಕೊಟ್ಟು ಮಕ್ಕಳ ವ್ಯಾಸಂಗಕ್ಕೆ ಸಹಕಾರಿಯಾಗಿದ್ದಾರೆ.

    ಬೂದಿಕೋಟೆ ಹೋಬಳಿಯ ತಮಿಳುನಾಡು ಗಡಿಭಾಗದ ತಮಟವಾಕನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುವಾರು 25 ಮಕ್ಕಳು ವಿದ್ಯಾಭ್ಯಾಸ ವಾಡುತ್ತಿದ್ದು, ಕಲಿಕೆಗೆ ಎರಡು ಕೊಠಡಿಗಳಿವೆೆ. ಈ ಪೈಕಿ ಒಂದು ಕೊಠಡಿ ಬಳಸಲು ಯೋಗ್ಯವಿಲ್ಲದೆ ಶಿಥಿಲಗೊಂಡಿದೆ. ಮತ್ತೊಂದು ಕೊಠಡಿಯನ್ನು 1942ರಲ್ಲಿ ನಿರ್ಮಿಸಿದ್ದು, ಕಟ್ಟಡಕ್ಕೆ ಬಣ್ಣ ಬಳಿದು ದಶಕವೇ ಕಳೆದಿದ್ದು, ಗೋಡೆಗಳು, ಛಾವಣಿಯಲ್ಲಿ ಅಲ್ಲಲ್ಲಿ ಸಿಮೆಂಟ್ ಕಿತ್ತು ಹೋಗಿದೆ.

    ಹಳೇ ವಿದ್ಯಾರ್ಥಿಗಳು ಲಾಕ್‌ಡೌನ್ ಸಮಯದಲ್ಲಿ ಗ್ರಾಮಕ್ಕೆ ಬಂದಾಗ ಶಾಲೆಯ ದುಸ್ಥಿತಿ ಕಂಡು ದುರಸ್ತಿಗೆ ಮುಂದಾಗಿದ್ದಾರೆ. ವಿವಿಧೆಡೆ ಕೆಲಸ ಮಾಡುತ್ತಿರುವ ಹಳೇ ವಿದ್ಯಾರ್ಥಿಗಳು ವಾಟ್ಸ್‌ಆ್ಯಪ್ ಗ್ರೂಪ್ ಮಾಡಿ ಸಹಪಾಠಿಗಳಿಗೆ ಶಾಲೆಯ ೆಟೋ ಕಳುಹಿಸಿದ್ದಾರೆ. ಶಾಲೆ ದುರಸ್ತಿಗೆ ಕೈಲಾದಷ್ಟು ಸಹಾಯ ಮಾಡುವಂತೆ ಮನವಿ ಮಾಡಿ ಹಣ ಸಂಗ್ರಹಿಸಿ ಬಿರುಕು ಬಿಟ್ಟ ಗೋಡೆ ದುರಸ್ತಿ ಮಾಡಿಸಿ ಸುಣ್ಣ-ಬಣ್ಣ ಹಚ್ಚಿದ್ದಾರೆ.

    ಕಂಪ್ಯೂಟರ್, ಪ್ರೊಜೆಕ್ಟರ್ ಕೊಡುಗೆ: ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಸಾವಿರಾರು ರೂ. ವೆಚ್ಚ ವಾಡಿ ಪ್ರೊಜೆಕ್ಟರ್, ಕಂಪ್ಯೂಟರ್, ಯುಪಿಎಸ್ ಇತ್ಯಾದಿ ಕೊಡುಗೆ ನೀಡಿದ್ದಾರೆ.

    ಹಳೇ ವಿದ್ಯಾರ್ಥಿಗಳು ಶಾಲೆ ಅಭಿವೃದ್ಧಿಗೆ ಶ್ರಮಿಸಿದ್ದು, ಆನ್‌ಲೈನ್ ಕ್ಲಾಸ್‌ಗೆ ಅನುಕೂಲವಾಗಲು ಕಂಪ್ಯೂಟರ್, ಪ್ರೊಜೆೆಕ್ಟರ್ ಇನ್ನಿತರ ಪರಿಕರ ನೀಡಿದ್ದಾರೆ. ಶಾಲೆಗೆ ಕೊಠಡಿಯ ಅವಶ್ಯಕತೆಯಿದ್ದು, ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಿಸುವ ಕಾರ್ಯ ಕೈಗೊಳ್ಳಲಾಗುತ್ತದೆ.
    ಬಿ.ಪಿ.ಕೆಂಪಯ್ಯ, ಬಿಇಒ, ಬಂಗಾರಪೇಟೆ

    ಮಕ್ಕಳು ಗ್ರಾಮದಿಂದ ಬೇರೆ ಶಾಲೆಗೆ ಹೋಗಲು ದೂರವಿರುವ ಕಾರಣ ಹಾಗೂ ಮಕ್ಕಳ ವಿಧ್ಯಾಭ್ಯಾಸದ ದೃಷ್ಟಿಯಿಂದ ಕೊಠಡಿ ಸರಿಪಡಿಸಲು ಮುಂದಾದೆವು. ಮಕ್ಕಳಿಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಉತ್ತಮ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಕಂಪ್ಯೂಟರ್ ಇತ್ಯಾದಿಗಳನ್ನು ಶಾಲೆಗೆ ನೀಡಿದ್ದೇವೆ.
    ಮುರುಗೇಶ್, ಹಳೇ ವಿದ್ಯಾರ್ಥಿ, ತಮಟವಾಕನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts