More

    ಕಾಲೇಜುಗಳನ್ನು ಸೆಪ್ಟಂಬರ್​ನಿಂದ ಆರಂಭಿಸಿ, ಸರ್ಕಾರ ನೇಮಿಸಿದ ಸಮಿತಿಯಿಂದಲೇ ಯುಜಿಸಿಗೆ ಶಿಫಾರಸು

    ನವದೆಹಲಿ: ಲಾಕ್​​ಡೌನ್​ ಹಿನ್ನೆಲೆಯಲ್ಲಿ ಮಾ.16ರಿಂದಲೇ ದೇಶಾದ್ಯಂತ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಇದು 2020-21ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಮೇಲೆ ಗಂಭಿರ ಪರಿಣಾಮ ಬೀರಲಿದೆ ಎಂಬುದಂತೂ ಖಚಿತ. ಹೀಗಾಗಿ ಕಾಲೇಜುಗಳಲ್ಲಿ ನೂತನ ಶೈಕ್ಷಣಿಕ ವರ್ಷಾರಂಭವನ್ನು ಜುಲೈ ಮಧ್ಯಾವಧಿಯ ಬದಲು, ಸೆಪ್ಟಂಬರ್​ನಲ್ಲಿ ಆರಂಭಿಸುವಂತೆ ಸರ್ಕಾರ ನೇಮಿಸಿದ ಸಮಿತಿಯೊಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗಕ್ಕೆ (ಯುಜಿಸಿ) ಶಿಫಾರಸು ಮಾಡಿದೆ.

    ಕಾಲೇಜುಗಳನ್ನು ಮುಚ್ಚಿದ್ದರಿಂದ ವಾರ್ಷಿಕ ಹಾಗೂ ಸೆಮಿಸ್ಟರ್​ ಪರೀಕ್ಷೆಗಳನ್ನು ನಡೆಸಲಾಗಿಲ್ಲ. ಆ ಪರೀಕ್ಷೆಗಳನ್ನು ಜುಲೈನಲ್ಲಿ ನಡೆಸುವಂತೆ ಸಮಿತಿ ಸಲಹೆ ನೀಡಿದೆ.

    ಲಾಕ್​ಡೌನ್​ ಕಾರಣದಿಂದ ಪರೀಕ್ಷೆ ಹಾಗೂ ಶೈಕ್ಷಣಿಕ ವರ್ಷಾರಂಭ ಹಾಗೂ ಇತರ ಚಟುವಟಿಕೆಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಹರಿಯಾಣ ಕೇಂದ್ರೀಯ ವಿವಿ ಕುಲಪತಿ ಆರ್​.ಸಿ. ಕುಹಾಡ್​ ಅಧ್ಯಕ್ಷತೆಯಲ್ಲಿ ಏಳು ಸದಸ್ಯರ ಸಮಿತಿಯೊಂದನ್ನು ಯುಜಿಸಿ ರಚಿಸಿತ್ತು.

    ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ ಯುಜಿಸಿ ಪರೀಕ್ಷೆ ಹಾಗೂ ಶೈಕ್ಷಣಿಕ ವರ್ಷಾರಂಭಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಲಿದೆ. ಎಲ್ಲ ಕಾಲೇಜುಗಳು ಇದನ್ನು ಪಾಲಿಸಬೇಕೆಂಬುದು ಕಡ್ಡಾಯವಲ್ಲದಿದ್ದರೂ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕಾಗುತ್ತದೆ ಎಂದು ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

    ಒಂದು ವೇಳೆ ಶೈಕ್ಷಣಿಕ ವರ್ಷಾರಂಭವನ್ನು ವಿಳಂಬಗೊಳಿಸುವುದಾದಲ್ಲಿ ಸರ್ಕಾರ ಸುಪ್ರೀಂ ಕೋಟ್​ರ್ನಿಂದ ವಿಶೇಷ ಅನುಮತಿ ಪಡೆಯಬೇಕಾಗುತ್ತದೆ. ಏಕೆಂದರೆ, ಇಂಜಿನಿಯರಿಂಗ್​ ಕೋರ್ಸ್​ಗಳ ಪ್ರವೇಶವನ್ನು ಆಗಸ್ಟ್​ 15 ಹಾಗೂ ವೈದ್ಯಕೀಯ ಕೋರ್ಸ್​ಗಳ ಪ್ರವೇಶವನ್ನು ಆಗಸ್ಟ್​ 31 ರೊಳಗೆ ಪೂರ್ಣಗೊಳಿಸಬೇಕೆಂದು ಸುಪ್ರೀಂ ಕೋರ್ಟ್​ ಈ ಹಿಂದೆಯೇ ಆದೇಶಿಸಿದೆ.

    ಮೇ ಎರಡನೇ ವಾರದಲ್ಲಿ ಪರೀಕ್ಷೆಗಳು ನಡೆಯೋದು ಬಹುತೇಕ ಖಚಿತ, ನಿರ್ಧಾರ ಪ್ರಕಟಿಸಿದ ವಿಶ್ವವಿದ್ಯಾಲಯ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts