More

    ಪ್ರಮಾಣವಚನಕ್ಕಿಲ್ಲ ಸರ್ಕಾರದ ಅನುಮತಿ: ರಾಜಕೀಯ ಹುನ್ನಾರ ಎಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

    ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್​ ಕಮಿಟಿ(ಕೆಪಿಸಿಸಿ) ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಡಿ ಕೆ ಶಿವಕುಮಾರ್ ಅವರ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನಿರಾಕರಿಸಿದೆ. ಜೂನ್ ಏಳರಂದು ಪ್ರಮಾಣವಚನ ಸ್ವೀಕರಿಸುವುದಕ್ಕೆ ಡಿ.ಕೆ.ಶಿವಕುಮಾರ್ ಸಿದ್ಧತೆ ನಡೆಸಿಕೊಂಡಿದ್ದರು. ಈಗ ಸರ್ಕಾರ ಅನುಮತಿ ನಿರಾಕರಿಸಿದ ಪರಿಣಾಮ ಡಿ.ಕೆ.ಶಿವಕುಮಾರ್ ಅಸಮಾಧಾನಗೊಂಡಿದ್ದು, ಸುದ್ದಿಗೋಷ್ಠಿ ನಡೆಸಿ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.

    ಇದನ್ನೂ ಓದಿ:  ಕಳ್ಳನಲ್ಲ, ಆದರೂ ಬೈಕ್ ಕಳವು ಮಾಡಿದ: 2 ವಾರ ಬಳಿಕ ಬೈಕ್ ಮಾಲೀಕನಿಗೂ ಶಾಕ್ ನೀಡಿದ್ದ​!

    ಸುದ್ದಿಗೋಷ್ಠಿಯಲ್ಲಿ ಡಿ.ಕೆ.ಶಿವಕುಮಾರ್ ಹೇಳಿದ್ದಿಷ್ಟು:- ಮಾರ್ಚ್​ ಏಳರಂದು ಪ್ರಮಾಣ ವಚನಕ್ಕೆ ರಾಜ್ಯ ಸರ್ಕಾರ‌ ಅವಕಾಶ ಕೊಡದೇ ಇರುವುದು ರಾಜಕೀಯ ಹುನ್ನಾರ. ಮಾ.11ರಂದು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಆ ಗಂಟೆಯಿಂದಲೇ ಜವಾಬ್ದಾರಿ ನಿರ್ವಹಿಸಿದ್ದೇನೆ. ಇಡೀ ನಮ್ಮ‌ಪಕ್ಷಕ್ಕೆ ಮಾರ್ಗದರ್ಶನ ಕೊಟ್ಟಿದ್ದೇನೆ. ಏಳರಂದು ಕಾರ್ಯಕ್ರಮ‌ ಆಯೋಜಿಸುವುದಕ್ಕಾಗಿ ಅನುಮತಿ ಕೋರಿ ಸಿಎಂ ಮತ್ತು ಡಿಜಿಗೆ ಮನವಿ ಮಾಡಿದ್ದೆ. ಎಂಟರ ವರೆಗೆ ರಾಜಕೀಯ ಸಭೆ ಮಾಡದಂತೆ ಕೇಂದ್ರದ ಮಾರ್ಗಸೂಚಿಯಲ್ಲಿ ಸೂಚಿಸಿದ್ದಾರೆ. ನಾವೆಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. 150 ಜನರಿಗೆ ಅನುಮತಿ ಕೇಳಿದ್ದೆವು. ನೂರೈವತ್ತು ಜನರಿಗೆ ಸೇರಲು ಅವಕಾಶ ಕೊಡುತ್ತಿಲ್ಲ. ಇದರ ಹಿಂದೆ ರಾಜಕೀಯ ಹುನ್ನಾರ ಇದೆ.

    ಇದನ್ನೂ ಓದಿ: ಹನ್ನೊಂದು ತಿಂಗಳ ಮಗು ಬಕೆಟ್​ಗೆ ಬಿದ್ದು ಸಾವು..

    ಐದು ನೂರು ವೀಕ್ಷಕರು ಪ್ರವಾಸ ಮಾಡಿ ತಯಾರಿ ಮಾಡಿದ್ದಾರೆ. ಸಿದ್ಧತೆಯನ್ನು ಕಾರ್ಯಕರ್ತರು ಮುಂದುವರಿಸುತ್ತಾರೆ. ಸರ್ಕಾರ ಅನುಮತಿ ಕೊಟ್ಟ ಮೇಲೆ ಕಾರ್ಯಕ್ರಮ‌ಮಾಡಲಾಗುತ್ತದೆ. ರದ್ದುಮಾಡುತ್ತಿಲ್ಲ. ಸರಳ ರೀತಿಯಲ್ಲಿ ಕಾರ್ಯಕ್ರಮ ಮಾಡಲು ವಿನೂತನವಾಗಿ ಯೋಜಿಸಿದ್ದೆವು. ಏಳು ಸಾವಿರದ ಎಂಟು ನೂರು ಕಡೆ ಒಂದೇ ಸಮಯದಲ್ಲಿ ವಂದೇ ಮಾತರಂ ನಿಂದ ಪ್ರಾರಂಭ ಮಾಡಿ, ಸಂವಿಧಾನದ ಪ್ರಯಾಂಬಲ್ ಓದುವುದು, ಭಾರತದ ಬಾವುಟ, ಕಾಂಗ್ರೆಸ್ ಬಾವುಟ ಹಾರಿಸಲಾಗುತ್ತದೆ. ಪ್ರತಿ ಪಂಚಾಯಿತಿ, ಪ್ರತಿ ವಾರ್ಡಲ್ಲಿ ಕಾರ್ಯಕ್ರಮ ಮಾಡಲು ಉದ್ದೇಶಿಸಲಾಗಿದೆ. ಕಾರ್ಯಕ್ರಮಕ್ಕೆ ಪ್ರತಿಜ್ಞಾ ಎಂದು ಹೆಸರಿಸಿದ್ದೇವೆ.

    ಬಂಕರ್ ಸೇರಿದ ಅಮೆರಿಕ ಅಧ್ಯಕ್ಷ ಟ್ರಂಪ್: ಹೆಚ್ಚಿದ ಹಿಂಸಾಚಾರ 40 ನಗರಗಳಲ್ಲಿ ಕರ್ಫ್ಯೂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts