More

    ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

    ಅಳವಂಡಿ: ಸಂಘಗಳ ಅಭಿವೃದ್ಧಿಯಲ್ಲಿ ನಂಬಿಕೆ, ಸಹಕಾರ ಮುಖ್ಯ ಪಾತ್ರ ವಹಿಸುತ್ತದೆ ಎಂದು ರಾಬಕೊವಿ ಹಾಲು ಒಕ್ಕೂಟದ ಬಳ್ಳಾರಿ ನಿರ್ದೇಶಕ ವೆಂಕನಗೌಡ ಹಿರೇಗೌಡರ ತಿಳಿಸಿದರು.


    ಸಮೀಪದ ಮೈನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಪ್ರತಿಯೊಬ್ಬರ ಶ್ರಮ ಎಲ್ಲರ ಏಳಿಗೆಗೆ ಕಾರಣವಾಗುತ್ತದೆ. ಸಂಘಗಳ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯವಿದೆ. ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.


    ಕೆಎಂಎಫ್ ಗ್ರಾಮ ಘಟಕದ ಅಧ್ಯಕ್ಷ ಅಜಯಗೌಡ ಪಾಟೀಲ್ ಮಾತನಾಡಿ, ಸಹಕಾರ ಸಂಘಗಳು ಸ್ಥಾಪನೆಯಾಗಬೇಕಾದರೆ ಸರ್ವರ ಸಹಕಾರ ಅಗತ್ಯವಾಗಿದೆ. ಕೆಲ ತೊಂದರೆಯಿಂದ ಮುಚ್ಚಿದ್ದ ಹಾಲು ಉತ್ಪಾದಕರ ಸಂಘ ಎಲ್ಲ ಸದಸ್ಯರ ಸಹಕಾರ ಹಾಗೂ ಸರ್ಕಾರದ ಪ್ರೋತ್ಸಾಹದಿಂದ 2 ಲಕ್ಷ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು.


    ಸಂಘದ ಸದಸ್ಯರಿಗೆ ಹಾಲಿನ ಕ್ಯಾನ್ ವಿತರಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ಎಚ್.ಎಲ್.ಹಿರೇಗೌಡ್ರ, ಪ್ರಮುಖರಾದ ಶಿವಣ್ಣ ಹ್ಯಾಟಿ, ದೇವಣ್ಣ ಕತ್ತಿ, ಸಂಗಪ್ಪ ಬಾಸಿಂಗದಾರ, ಶಂಕ್ರಪ್ಪ ಬಗನಾಳ, ಕೊಟ್ರಪ್ಪ ಬಳಗೇರಿ, ಷಣ್ಮುಖರಡ್ಡಿ ಕಿನ್ನಾಳ, ಆಂಜನೇಯ, ಈರಣ್ಣ, ಈಶಪ್ಪ ಹಳ್ಳಿ, ವಿದ್ಯಾಧರಗೌಡ, ಉಮೇಶ, ನಿಂಗಪ್ಪ ಸಿದ್ದಲಿಂಗಯ್ಯ, ಶೇಖರಯ್ಯ, ರೇವಣಸಿದ್ದಪ್ಪ, ಯಂಕಮ್ಮ, ಲಲಿತವ್ವ, ಪಾರಮ್ಮ, ಗಂಗಮ್ಮ, ಕೊಟ್ರೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts