More

    ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

    ವಿಜಯವಾಣಿ ಸುದ್ದಿಜಾಲ ಗದಗ
    ನಿರಂತರ ಶ್ರಮ, ಪ್ರಯತ್ನವೊಂದಿದ್ದರೇ ಪ್ರಸಕ್ತ ಸವಾಲಿನ ಬದುಕಿನಲ್ಲಿ ಸಾರ್ವಜನಿಕ ವಲಯದಲ್ಲಿ ಯಶಸ್ಸು ಸಾಧಿಸಬಹುದು ಎನ್ನುವುದಕ್ಕೆ ಶಿಕ ವೃತ್ತಿಯಿಂದ ಗದಗ ಜಿಲ್ಲಾಧಿಕಾರಿ ಆಗಿರುವ ವೈಶಾಲಿ ಎಂ.ಎಲ್​ ಅವರ ಆಡಳಿತಾತ್ಮಕ ವ್ಯಕ್ತಿತ್ವವೇ ಮಾದರಿ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ರಾಜ್ಯಾಧ್ಯಕ್ಷ ಸಿ.ಎಸ್​.ಷಡಕ್ಷರಿ ಹೇಳಿದರು.
    ನಗರದ ರಾಜ್ಯ ಸರ್ಕಾರಿ ನೌಕರ ಭವನದಲ್ಲಿ ಭಾನುವಾರ 2022-23 ನೇ ಸಾಲಿನ ಎಸ್​.ಎಸ್​.ಎಲ್​.ಸಿ ಮತ್ತು ಪಿಯುಸಿ ವಿದ್ಯಾಥಿರ್ಗಳ ಗದಗ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಸರ್ಕಾರಿ ನೌಕರರ ವಾಷಿರ್ಕ ಮಹಾಸಭೆಯ ಉಪಸ್ಥಿತಿ ವಹಿಸಿ ಮಾತನಾಡಿದ ಅವರು, ಸಾಧಿಸುವ ಗುರಿಯ ಹಾದಿಯಲ್ಲಿ ಛಲದಿಂದಾಗಿ ನಿರಂತರ ಶ್ರಮ ಮತ್ತು ಪ್ರಯತ್ನದಿಂದ ಸಾಗಿದರೇ ಯಶಸ್ಸು ಸಾಧಿಸಬಹುದು. ಇಂದು ಮಾನವ ಸಮಸ್ಯೆಗಳ ಆಗರದಲ್ಲಿಯೇ ಬದುಕುತ್ತಿದ್ದಾನೆ. ಸಮಸ್ಯೆ ಇಲ್ಲದ ಮನುಷ್ಯ ಇರಲು ಸಾಧ್ಯವಿಲ್ಲ. ಸಮಸ್ಯೆ ಒಳಗೊಂಡ ಜೀವನ ನಡೆಸುವ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಅದಕ್ಕೆ ಪರಿಹಾರ ಕಂಡುಕೊಂಡು ಬದುಕಿದರೇ ಜೀವನ ಸುಗಮ ಸಾಗುತ್ತದೆ ಎಂದರು.
    ಅದ್ಯತೆ ವಹಿಸಿ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂದ ರಾಜ್ಯ ಉಪಾಧ್ಯ ರವಿ ಗುಂಜೀಕರ, ಸಿ.ಎಸ್​.ಷಡರಿ ಅವರ ನೇತೃತ್ವದಲ್ಲಿ ಸಂಟನೆ ಕ್ರೀಯಾಶಿಲವಾಗಿದೆ. ಈಗಾಗಲೇ ಸಂಟನೇಯ ಹೋರಾಟ ಲದಿಂದಾಗಿ ಸರ್ಕಾರಿ ಸವಲತ್ತುಗಳ 25 ಆದೇಶಗಳನ್ನು ಹೊರಡಿಸಿರುವ ಕೀತಿರ್ಗೆ ಸಿ.ಎಸ್​.ಷಡರಿ ಅವರು ಭಾಜನರಾಗಿದ್ದಾರೆ ಎಂದರು.
    ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​ ಮಾತನಾಡಿ, ಸರ್ಕಾರಿ ನೌಕರರ ಜೀವನ ನೆಮ್ಮದಿ ಮತ್ತು ಸಂತೋಷದಿಂದ ಕೂಡಿರುತ್ತದೆ ಎಂಬುದು ಸಮಾಜದ ನಿರೀೆ ಆಗಿದೆ. ಆದರೇ ಸರ್ಕಾರಿ ನೌಕರರು ಎದುರಿಸುತ್ತಿರುವ ಕರ್ತವ್ಯದ ಒತ್ತಡ ಮತ್ತು ಚೌಕಟ್ಟು ಏನೆಂಬುದು ಅವರ ಅವಲಂಭಿತವಾದ ಪರಿವಾರಕ್ಕೆ ತಿಳಿದಿರುತ್ತದೆ ಎಂದರು.
    ಕಾರ್ಯಕ್ರಮದಲ್ಲಿ 95 ವಿದ್ಯಾಥಿರ್ಗಳಿಗೆ ನಗದು ಮತ್ತು ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಬಸವರಾಜ ಬಳ್ಳಾರಿ, ಮಲ್ಲಿಕಾರ್ಜುನ ಬಳ್ಳಾರಿ, ಎಸ್​. ಬಸವರಾಜು, ಆರ್​. ಮೋಹನ ಕುಮಾರ, ಶರಣು ಗೋಗೇರಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts