More

    ಸರ್ಕಾರಿ ವೈದ್ಯರಿಗೆ ಖಾಸಗಿ ವೃತ್ತಿ ನಿಷೇಧ: ಆಡಳಿತ ಸುಧಾರಣಾ ಆಯೋಗದ ಸಲಹೆ

    ಬೆಂಗಳೂರು: ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಎಲ್ಲ ಇಲಾಖೆಗಳ ಸರ್ಕಾರಿ ವೈದ್ಯರ ಖಾಸಗಿ ವೃತ್ತಿ ನಿಷೇಧ, ಸರ್ಕಾರಿ ಆಸ್ಪತ್ರೆಗಳಲ್ಲೇ ಸಂಜೆ ಹೊರ ರೋಗಿಗಳ ವಿಭಾಗ ಪ್ರಾರಂಭಕ್ಕೆ ಸಲಹೆ ಹಾಗೂ ಶಿಫಾರಸುಗಳನ್ನು ಕರ್ನಾಟಕ ಆಡಳಿತ ಸುಧಾರಣೆ ಆಯೋಗ ಸರ್ಕಾರಕ್ಕೆ ಸಲ್ಲಿಸಿದೆ.

    ಸಿಎಂ ರೇಸ್ ಕೋರ್ಸ್ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್ ಶುಕ್ರವಾರ ಭೇಟಿಯಾಗಿ ಆಯೋಗದ ನಾಲ್ಕು ಮತ್ತು ಐದನೇ ವರದಿಯನ್ನು ಸಲ್ಲಿಸಿದರು.

    ಒಟ್ಟು ಐದು ವರದಿಗಳಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 3630 ಶಿಫಾರಸ್ಸು ಮಾಡಿದ್ದು, ನಾಲ್ಕು ಮತ್ತು ಐದನೇ ವರದಿಯಲ್ಲಿ ಮುಂಚೂಣಿ ಇಲಾಖೆಗಳತ್ತ ಗಮನಹರಿಸಿದೆ. 100 ಹಾಸಿಗೆಗಳ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆ ಕೆಲಸದ ಹೊರೆ ಇಳಿಸಲು ಬಿಎಸ್ಸಿ ನರ್ಸಿಂಗ್ ಕೋರ್ಸ್ ಹಾಗೂ ಪ್ಯಾರಾಮೆಡಿಕಲ್ ಕೋರ್ಸ್ ಆರಂಭಿಸಬಹುದು ಎಂದೂ ಹೇಳಿದೆ.

    ಪ್ರಮುಖ ಅಂಶಗಳು
    * ಎಂಬಿಬಿಎಸ್ ಸೀಟು ಪಡೆಯುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೋಟಾ ಅಡಿಯಲ್ಲಿ ಶೇಕಡಾ 15ರಷ್ಟು ಸೀಟು ಮೀಸಲಿಡುವುದು. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇಕಡಾ 5 ರಿಂದ 10 ಎನ್ಆರ್​ಐ ಕೋಟಾ ಸೃಷ್ಟಿ ಮಾಡಬಹುದು.

    * ಸರ್ಕಾರಿ ಶಾಲೆಗಳಲ್ಲಿ ಅಂಗನವಾಡಿ ಪ್ರಾರಂಭಿಸಿ ಅದೇ ಶಾಲೆಯಲ್ಲೇ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡುವುದು. ವಿದ್ಯಾರ್ಥಿಗಳು ಶಾಲೆಗಳನ್ನು ಬಿಡುವುದು ತಪ್ಪಿಸಲು ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ವಿಲೀನ ವಿಲೀನಗೊಳಿಸುವುದು. 1 ರಿಂದ 12 ನೇ ತರಗತಿವರೆಗೆ ಕ್ಲಸ್ಟರ್ ಶಾಲೆ ಮಾಡಿ ವರ್ಗಾವಣೆ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವುದು ಕಡಿಮೆ ಮಾಡಿದಂತೆಯಾಗುತ್ತದೆ.

    * ಅಪೌಷ್ಟಿಕತೆಯಿಂದ ಬಳಲುತ್ತಿರುವ ತಾಯಿ ಮತ್ತು ಶಿಶು ಮರಣ ಕಡಿಮೆ ಮಾಡಿ ಪೌಷ್ಟಿಕತೆ ಸುಧಾರಿಸಬೇಕು. ಅಪೌಷ್ಟಿಕತೆ ನೀಗಿಸಲು 2 ಬದಲು 5 ಮೊಟ್ಟೆ ನೀಡಬಹುದಾ ಎಂದು ಪರಿಶೀಲಿಸಬಹುದು.

    * ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯವನ್ನು ವಿಭಜಿಸಿ ಎರಡು ಪ್ರತ್ಯೇಕ ನಿರ್ದೇಶನಾಲಯಗಳ ಸೃಜನೆ ಮಾಡುವುದು.

    * ಲೋಕಸೇವಾ ಆಯೋಗದ ಅಧ್ಯಕ್ಷರು ಸೇರಿದಂತೆ ಸದಸ್ಯರ ಸಂಖ್ಯೆಯನ್ನು 14 ರಿಂದ 8 ಕ್ಕೆ ಇಳಿಸಲು ಶಿಫಾರಸು.

    * ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 30 ಕಂದಾಯ ವಿಭಾಗಗಳ ವಿಕೇಂದ್ರೀಕರಣ ಮತ್ತು ಸಮನ್ವಯ ಸಾಧಿಸಲು 30 ಕೆಎಎಸ್ ಅಧಿಕಾರಿಗಳನ್ನು ನೇಮಿಸಬೇಕು.

    * 5 ಲಕ್ಷಕ್ಕಿಂತ ಕಡಿಮೆ ವಹಿವಾಟು ಹೊಂದಿರುವ ಸಂಘಗಳು 5 ವರ್ಷಗಳಿಗೊಮ್ಮೆ ಲೆಕ್ಕಪತ್ರ ಸಲ್ಲಿಸಲು ಚಾರ್ಟರ್ಡ್ ಅಕೌಂಟೆಂಟ್​ರಿಂದ ಲೆಕ್ಕ ಪರಿಶೋಧನೆ ಮಾಡಿಸುವ ಅಗತ್ಯವಿಲ್ಲ‌.

    * ಸಂಪನ್ಮೂಲ ಹೆಚ್ಚಳಕ್ಕೆ ಕಾಯ್ದೆ ತಿದ್ದುಪಡಿ ಮಾಡಿ ಶೇಕಡಾ ಒಂದರಷ್ಟು ಕ್ರೀಡಾ ಸೆಸ್ಸ್ ಹೆಚ್ಚಿಸಬಹುದು. ರಾಜ್ಯ ಸಹಕಾರ ಚುನಾವಣಾ ಪ್ರಾಧಿಕಾರ ರದ್ದು ಮಾಡುವುದು. ಉದ್ಯೋಗ ಸೇವೆ ಇಲಾಖೆಯನ್ನು ಕೌಶಲ್ಯ ಮಿಷನ್ ಜೊತೆ ವಿಲೀನಗೊಳಿಸುವುದು ಹಾಗೂ ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮಸೂದೆ 2020 ಅನ್ನು ಅಂತಿಮಗೊಳಿಸಬಹುದು.

    ಟ್ರಾಫಿಕ್​ ದಂಡದಲ್ಲಿ 50% ರಿಯಾಯಿತಿ! ಪಾವತಿಸುವ ವಿಧಾನ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ…

    ಕರೊನಾ ದೂರವಾದ್ರು ಕೆಲವರು ಈಗಲೂ ಮಾಸ್ಕ್​ ಧರಿಸುತ್ತಿರುವುದಕ್ಕೆ ಇದೇ ಕಾರಣವಂತೆ! ಅಧ್ಯಯನದಲ್ಲಿ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts