More

    ಸರ್ಕಾರದಿಂದಲೇ ಭಯ ಸೃಷ್ಟಿ

    ಉಳ್ಳಾಲ: ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಬಳಿಕ ಮಂಗಳೂರಿನಲ್ಲಿ ಒಂದಲ್ಲ ಒಂದು ರೀತಿಯ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಡಿ.19ರ ಗೊಂದಲದ ಬಳಿಕ ಜನರು ಪರಸ್ಪರ ನಂಬಿಕೆ ಕಳೆದುಕೊಳ್ಳುವ ವಾತಾವರಣವಿದೆ. ಸರ್ಕಾರವೇ ಭಯದ ವಾತಾವರಣ ಸೃಷ್ಟಿಸುತ್ತಿದೆ. ರಾಜ್ಯ, ಜಿಲ್ಲೆಯಲ್ಲಿ ಭಯೋತ್ಪಾದನೆ ಪ್ರೋತ್ಸಾಹಿಸುವ ಸಂಘಟನೆಗಳು ಕಾರ್ಯಾಚರಣೆ ಮಾಡುತ್ತಿವೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    2008ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಚರ್ಚ್ ದಾಳಿ ನಡೆದಿತ್ತು. ಈಗ ಸಿಎಎ ಗಲಾಟೆ, ಬಾಂಬ್ ಪ್ರಕರಣ ನಡೆದಿದೆ. ಯಾವುದೇ ಸಂಘಟನೆ ವಿರುದ್ಧ ಕಠಿಣ ಕ್ರಮಕ್ಕೆ ನನ್ನ ಬೆಂಬಲ ಇದೆ. ಯಾರನ್ನೋ ಮೆಚ್ಚಿಸಲು ನೋಡಬೇಡಿ. ಇದು ಜನರ ಸರ್ಕಾರವೇ ಹೊರತು, ವಿಎಚ್‌ಪಿ, ಆರ್‌ಎಸ್‌ಎಸ್ ಸರ್ಕಾರ ಅಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ, ಕ್ಷೇತ್ರಾಧ್ಯಕ್ಷ ಮೋಹನ್‌ದಾಸ್ ಶೆಟ್ಟಿ ಹರೇಕಳ, ಮುಖಂಡರಾದ ಗಂಗಾಧರ್ ಉಳ್ಳಾಲ್, ಅಬೂಬಕ್ಕರ್ ನಾಟೆಕಲ್, ಸುಶೀಲ್ ನೊರೊನ್ಹ, ಎವರೆಸ್ಟ್ ಮುಸ್ತಫಾ ಸುದ್ದಿಗೋಷ್ಠಿಯಲ್ಲಿದ್ದರು.

     ಜೆಡಿಎಸ್‌ನಿಂದ ಮನೆಮನೆ ಜಾಗೃತಿ: ಪೌರತ್ವ ಕಾಯ್ದೆ ಪರ ಜಾಗೃತಿ ನಡೆಯುತ್ತಿದ್ದು, ಇದೇ ವೇಳೆ ಜೆಡಿಎಸ್ ವತಿಯಿಂದಲೂ ಕಾಯ್ದೆಯ ಸಾಧಕ, ಬಾಧಕಗಳ ಬಗ್ಗೆ, ರಾಜ್ಯದ ಸಮಸ್ಯೆ ಬಗ್ಗೆ ರಾಜ್ಯಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಉಳ್ಳಾಲದಲ್ಲಿ ಆರಂಭಗೊಂಡಿದೆ ಎಂದು ಕುಮಾರಸ್ವಾಮಿ ತಿಳಿಸಿದರು. ಇದಕ್ಕೂ ಮೊದಲು ಉಳ್ಳಾಲದ ಕೋಟೆಪುರಕ್ಕೆ ಭೇಟಿ ನೀಡಿ ಬೆಂಗರೆಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನಾ ಸಮಾವೇಶಕ್ಕೆ ದೋಣಿಗಳ ಮೂಲಕ ಜಲಮಾರ್ಗ ಸಂಚಾರಕ್ಕೆ ಚಾಲನೆ ನೀಡಿದರು. ಬಿ.ಎಂ.ಫಾರೂಕ್, ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್, ಕೋಡಿ ಜುಮಾ ಜುಮಾ ಮಸೀದಿ ಅಧ್ಯಕ್ಷ ಎ.ಆರ್.ಹಮೀದ್, ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಹನೀಫ್ ಸೋಲಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts