More

    ದೇವರ ಕೊಠಡಿ ಇದ್ರೆ ಚೆನ್ನಾಗಿತ್ತು! ಸಚಿವರೆದುರು ಡಿಮಾಂಡ್

    ಶಿವಮೊಗ್ಗ: ಮನೆ ಚೆನ್ನಾಗಿದೆ. ಆದರೆ ದೇವರ ಮನೆಯೇ ಇಲ್ಲ ಎಂದು ಬಹುತೇಕ ಫಲಾನುಭವಿಗಳು ಬೇಸರಿಸಿದರು.ಇನ್ನೊಬ್ಬರು ಮನೆ ಇನ್ನೂ ಸ್ವಲ್ಪ ದೊಡ್ಡದಿರಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮತ್ತೊಬ್ಬರು ವಸ್ತುಗಳನ್ನು ಇಡಲು ಶೆಲ್ಫ್ ಮಾಡಿಸಿಕೊಡಿ ಎಂದು ಬೇಡಿಕೆ ಇಟ್ಟರು.
    ಇವು… ನಗರ ಹೊರವಲಯದ ಗೋವಿಂದಾಪುರದಲ್ಲಿ ಆಶ್ರಯ ಮಾದರಿ ಮನೆ ವೀಕ್ಷಣೆ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಫಲಾನುಭವಿಗಳಿಂದ ಬಂದ ಬಗೆಬಗೆಯ ಬೇಡಿಕೆಗಳು.
    ಅಪಾರ್ಟ್‌ಮೆಂಟ್ ಮಾದರಿ ವಸತಿ ಯೋಜನೆ ಇದಾಗಿರುವುದರಿಂದ ಜಾತಿಗಳಿಗೆ ಪ್ರತ್ಯೇಕವಾಗಿ ವಸತಿ ವ್ಯವಸ್ಥೆ ಮಾಡಬೇಕೆಂಬ ವಿಚಿತ್ರ ಬೇಡಿಕೆಯೂ ಕೇಳಿಬಂತು. ಮನೆ ಚೆನ್ನಾಗಿದೆ. ಆದರೆ ನಗರದಿಂದ ತುಂಬ ದೂರವಾಯ್ತು ಎಂದು ಫಲಾನುಭವಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
    ಫಲಾನುಭವಿಗಳ ಬೇಡಿಕೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಒಂದೇ ಮಾದರಿಯಲ್ಲಿ ಮನೆಗಳ ನಿರ್ಮಿಸುವುದರಿಂದ ಎಲ್ಲರ ಬೇಡಿಕೆ ಪೂರೈಸುವುದು ಕಷ್ಟ. ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡುತ್ತೇವೆ. 300 ಅಂಗವಿಕಲ ಫಲಾನುಭವಿಗಳಿದ್ದಾರೆ. ಅವರಿಗೆ ಹಾಗೂ ವಯೋವೃದ್ಧರು ಇರುವ ಕುಟುಂಬಗಳಿಗೆ ನೆಲ ಅಂತಸ್ತಿನಲ್ಲಿ ಮನೆ ಒದಗಿಸಬೇಕಾಗುತ್ತದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts