More

    ಡಾ. ವಿಷ್ಣುವರ್ಧನ್​ ಸ್ಮಾರಕದಿಂದ ಬರುವ ಆದಾಯ ರಾಜ್ಯ ಸರ್ಕಾರದ ಬೊಕ್ಕಸಕ್ಕೆ …

    ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಇಂದು ಇಲ್ಲಿ ಡಾ. ವಿಷ್ಣುವರ್ಧನ್​ ಅವರ ಸ್ಮಾರಕವಾದ ‘ಸಾಹಸ ಸ್ಮಾರಕ’ದಿಂದ ಬರುವ ಆದಾಯವು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತದೆ ಎಂದು ನಟ ಹಾಗೂ ವಿಷ್ಣುವರ್ಧನ್​ ಅವರ ಅಳಿಯ ಅನಿರುದ್ಧ್​ ಹೇಳಿದ್ದಾರೆ.

    ಇದನ್ನೂ ಓದಿ: ಡಾ. ವಿಷ್ಣುವರ್ಧನ್ ಅವ್ರು ‘ಕರ್ನಾಟಕ ರತ್ನ’ ಅಲ್ಲವೇ? ಸಿಎಂಗೆ ಅಭಿಮಾನಿಗಳ ಪ್ರಶ್ನೆ …

    2009ರ ಡಿಸೆಂಬರ್​ 30ರಂದು ಡಾ. ವಿಷ್ಣುವರ್ಧನ್​ ನಿಧನರಾದರು. ಅವರ ನೆನಪಲ್ಲಿ ಸ್ಮಾರಕ್ಕೆ ಕಟ್ಟಬೇಉ ಎಂದು ಅವರ ಅಭಿಮಾನಿಗಳ ಆಸೆಯಾಯಿತು. ಕಾರಣಾಂತರಗಳಿಂದ, 13 ವರ್ಷ ತಡವಾದರೂ ಇದೀಗ ಮೈಸೂರು ಮತ್ತು ನಂಜನಗೂಡು ಮಾರ್ಗ ಮಧ್ಯೆ ಇರುವ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಾಣವಾಗಿದೆ.

    ಸ್ಮಾರಕದ ಉದ್ಘಾಟನೆಯ ನಂತರ ಮಾತನಾಡಿದ ಅನಿರುದ್ಧ್​, ‘ವಿಷ್ಣುವರ್ಧನ್​ ಅವರ ಪ್ರತಿಮೆಯ ಪಕ್ಕದಲ್ಲಿ ಎರಡು ಸಿಂಹಗಳು ಇರುತ್ತವೆ. ಈ ಸ್ಮಾರಕ ವೃತ್ತಾಕರದಲ್ಲಿದೆ. ಅಮರ ಜೀವಿಗಳಿಗೆ ಪುಷ್ಪ ಚಕ್ರ ಅರ್ಪಿಸುತ್ತಾರೆ. ಹಾಗಾಗಿ, ಸ್ಮಾರಕವು ವೃತ್ತಾಕಾರದಲ್ಲಿ ಇರಬೇಕು ಎಂದು ತೀರ್ಮಾನ ಮಾಡಿದೆವು. ಈ ಸ್ಮಾರಕದ ಸುತ್ತಲೂ ವೃತ್ತಾಕಾರದ ಸುತ್ತಲೂ ವಿವಿಧ ಬಗೆಯ ಪುಷ್ಪ ಸಸಿಗಳನ್ನ ನೆಡಲಾಗಿದೆ. ಅವರು ಬೆಳೆದು ನಿಂತ ಮೇಲೆ, ಮೇಲಿನಿಂದ ಸ್ಮಾರಕವು ಪುಷ್ಪ ಚಕ್ರದಂತೆ ಕಾಣಿಸುತ್ತದೆ’ ಎಂದರು.

    ಇದನ್ನೂ ಓದಿ: ಅಭಿಮಾನ್ ಸ್ಟುಡಿಯೋದಲ್ಲಿರುವ ಡಾ. ವಿಷ್ಣುವರ್ಧನ್​ ಪುಣ್ಯಭೂಮಿ ತೆರವು ಮಾಡೋದಕ್ಕೆ ಬಿಡುವುದಿಲ್ಲ ಎಂದು ಅನಿರುದ್ಧ

    ಈ ಸ್ಮಾರಕದ ಬಳಿ ಫಿಲ್ಮ್​ ಅಂಡ್​ ಟೆಲಿವಿಷನ್​ ಇನ್​ಸ್ಟಿಟ್ಯೂಟ್​ ಆಗಬೇಕು ಎಂದ ಅವರು, ‘ಅದು ಅಪ್ಪಾವ್ರ ಹೆಸರಲ್ಲಿ ಆಗಬೇಕು ಅಂತ ತೀರ್ಮಾನ ಮೊದಲೇ ತೀರ್ಮಾನವಾಗಿತ್ತು. ಅದರಂತೆ ಸ್ಮಾರಕ ನಿರ್ಮಾಣವಾಗಿ ಉಳಿದ ಜಾಗದಲ್ಲಿ ಈ ಇನ್​ಸ್ಟಿಟ್ಯೂಟ್​ ನಿರ್ಮಾಣವಾಗಲಿದೆ. ಈ ಸ್ಮಾರಕದಲ್ಲಿ ವಿಷ್ಣು ಅವರ ಪ್ರತಿಮೆ, ಫೋಟೋ ಗ್ಯಾಲರಿ, ಆಡಿಟೋರಿಯಂ ಮತ್ತು ಸಿನಿಮಾ ಥಿಯೇಟರ್ ಇರಲಿದೆ. ಇಲ್ಲಿ ಚಿತ್ರೋತ್ಸವ, ನಾಟಕೋತ್ಸವ, ಶಿಬಿರ ಮಾಡುವ ಯೋಚನೆ ಇದೆ. ಈ ಸ್ಮಾರಕದ ನಿರ್ವಹಣೆ ರಾಜ್ಯ ಸರ್ಕಾರ ನೋಡಿಕೊಳ್ಳಲಿದ್ದು, ಇದರಿಂದ ಬರುವ ಆದಾಯ ಸಹ ಸರ್ಕಾರದ ಬೊಕ್ಕಸಕ್ಕೆ ಹೋಗಲಿದೆ’ ಎಂದು ಅವರು ಹೇಳಿದರು.

    ಡಾ: ವಿಷ್ಣು ಸ್ಮಾರಕ ಉದ್ಘಾಟನೆ; ಇದು ಹೋರಾಟವಲ್ಲ, ತಪಸ್ಸು ಎಂದ ಡಾ. ಭಾರತಿ ವಿಷ್ಣುವರ್ಧನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts