More

    ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸುವಂತೆ ಒಕ್ಕೂಟದ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ ಆಗ್ರಹ

    ಕೊಟ್ಟೂರು: ಬ್ರಿಟಿಷರು ಸ್ವಾತಂತ್ರ್ಯ ಹೋರಾಟ ನೋಡಿದಂತೆ, ಮೋದಿ ಸರ್ಕಾರ ರೈತರನ್ನು ನೋಡುತ್ತಿದೆ ಎಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕಿನಲ್ಲಿ ಅತಿವೃಷ್ಟಿಯಿಂದ ನಷ್ಣಕ್ಕೊಳಗಾದ ಈರುಳ್ಳಿ ಬೆಳೆಗಾರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್ ಜಿ.ಅನಿಲ್ ಕುಮಾರ್‌ಗೆ ಮನವಿ ಸಲ್ಲಿಸುವ ಮುನ್ನ ಮಾತನಾಡಿದರು. ಬ್ರಿಟಿಷರು ರೈತರ ತೆರಿಗೆ ಹೆಚ್ಚಿಸಿದಾಗ ಅವರ ವಿರುದ್ಧ ಹಳ್ಳಿಯಲ್ಲೂ ದಂಗೆ ಎದ್ದಿದ್ದರು. ಇದೇ ಮಾದರಿಯಲ್ಲಿ ರೈತ ವಿರೋಧಿ ಮೋದಿ ಸರ್ಕಾರದ ವಿರುದ್ಧ ರೈತರು ಹಳ್ಳಿ ಹಳ್ಳಿಯಲ್ಲೂ ದಂಗೆ ಏಳುವ ಕಾಲ ದೂರವಿಲ್ಲ. ಮೋದಿ ಸರ್ಕಾರದ ರೈತ ದಮನ ನೀತಿ ವಿರುದ್ಧ ಶೀಘ್ರ ಹರಪನಹಳ್ಳಿಯಲ್ಲಿ ರೈತ ಹೋರಾಟ ಹಮ್ಮಿಕೊಳ್ಳಲಾಗುವುದು. ರಾಜ್ಯದ 12 ಜಿಲ್ಲೆಗಳಲ್ಲಿ ಅಧಿಕವಾಗಿ ಈರುಳ್ಳಿ ಬೆಳೆಯುತ್ತಿದ್ದಾರೆ. ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು. ಈರುಳ್ಳಿ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪ್ರತಿ ತಾಲೂಕಿನಲ್ಲಿ ಈರುಳ್ಳಿ ಸಂಗ್ರಹ ಕೇಂದ್ರ ನಿರ್ಮಾಣವಾಗಬೇಕು. ಕೇಂದ್ರ ಸರ್ಕಾರ ಈರುಳ್ಳಿ ಅಮದು ನೀತಿ ಕಠಿಣ ಗೊಳಿಸಿ ರಫ್ತು ನೀತಿ ಸಡಿಲಗೊಳಿಸುವುದು ಸೇರಿ ನಾನಾ ಹೋರಾಟ ಮಾಡುವುದಾಗಿ ತಿಳಿಸಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ, ಈರುಳ್ಳಿ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಬಿ.ಭದ್ರಗೌಡ, ಪ್ರಧಾನ ಕಾರ್ಯದರ್ಶಿ ಕರಡಿ ಶಾಂತಕುಮಾರ್. ಎಲ್. ನಾರನಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts