More

    ಕೋಮಾದಲ್ಲಿದೆ ಸರ್ಕಾರ: ಷೇರುಪೇಟೆ ಕುಸಿತಕ್ಕೆ ರಾಹುಲ್ ಗಾಂಧಿ ಪ್ರತಿಕ್ರಿಯೆ

    ಮುಂಬೈ: ಷೇರುಪೇಟೆಯಲ್ಲಿ ಹೂಡಿಕೆದಾರು ಕೇವಲ ಹದಿನೈದೇ ನಿಮಿಷದಲ್ಲಿ 12 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಳೆದುಕೊಂಡ ಬೆನ್ನಲ್ಲೇ, ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಕಾಂಗ್ರೆಸ್ ಕಣ್ಮಣಿ ರಾಹುಲ್ ಗಾಂಧಿ ಟ್ವೀಟ್ ಮೂಲಕ ಗಮನಸೆಳೆದಿದ್ದಾರೆ.

    ಫೆಬ್ರವರಿ 12ರಂದು ಮಾಡಿದ್ದ ಟ್ವೀಟನ್ನು ಮರುಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಕರೋನಾ ವೈರಸ್ ಬಹುದೊಡ್ಡ ಸಮಸ್ಯೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದನ್ನು ನಿರ್ಲಕ್ಷಿಸುವುದು ಪರಿಹಾರವಲ್ಲ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳದೇ ಹೋದರೆ ಭಾರತದ ಆರ್ಥಿಕತೆ ನಾಶವಾಗಲಿದೆ. ಸರ್ಕಾರ ಇನ್ನೂ ಕೋಮಾವಸ್ಥೆಯಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಫೆ.12ರ ಟ್ವೀಟ್​ನಲ್ಲಿ ಅವರು ಹಾರ್ವರ್ಡ್ ವಿವಿಯ ಅಧ್ಯಯನ ವರದಿಯ ಲಿಂಕ್ ಅನ್ನು ಹಂಚಿಕೊಂಡಿದ್ದು, ಕರೋನಾ ವೈರಸ್ ಅತಿಯಾದ ಗಂಭೀರತೆ ಹೊಂದಿರುವ ಬೆದರಿಕೆ. ಇದು ನಮ್ಮ ಜನರಿಗೆ ಮತ್ತು ಅರ್ಥ ವ್ಯವಸ್ಥೆಗೆ ಹಾನಿ ಎಸಗಬಲ್ಲದು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲ್ಲ ಎಂದು ನನಗನಿಸುತ್ತಿದೆ. ಕ್ಲಪ್ತ ಸಮಯಕ್ಕೆ ಸರಿಯಾದ ಕ್ರಮ ಇಲ್ಲಿ ಅವಶ್ಯವಾಗಿದೆ ಎಂದು ರಾಹುಲ್ ಗಾಂಧಿ ಹೇಳಿಕೊಂಡಿದ್ದರು.

    ಷೇರುಪೇಟೆಯಲ್ಲಿ 15 ನಿಮಿಷಗಳ ರಕ್ತಪಾತಕ್ಕೆ ಹೂಡಿಕೆದಾರರು ಕಳೆದುಕೊಂಡದ್ದು ಬರೋಬ್ಬರಿ 12 ಲಕ್ಷ ಕೋಟಿ ರೂಪಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts