More

    ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರದ ಬದ್ಧ

    ತರೀಕೆರೆ: ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮ ಮತ್ತು ಪಟ್ಟಣ ಪ್ರದೇಶದ ಹಲವು ಬಡಾವಣೆಗಳಲ್ಲಿ ನೆಲೆಸಿರುವ ಅಲ್ಪ ಸಂಖ್ಯಾತರಿಗೆ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರದಿಂದ 5 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
    ಅಜ್ಜಂಪುರ ತಾಲೂಕಿನ ಗೌರಾಪುರ ಗ್ರಾಮದಲ್ಲಿ ಅಲ್ಪ ಸಂಖ್ಯಾತರ ಅಭಿವೃದ್ಧಿ ಇಲಾಖೆಯಿಂದ ಮಂಜೂರಾದ 40 ಲಕ್ಷ ರೂ.ಅನುದಾನದಲ್ಲಿ ಖಬರಸ್ತಾನಕ್ಕೆ ಹೋಗುವ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರ ಎಲ್ಲ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು, ಹಂತ, ಹಂತವಾಗಿ ಕಾರ್ಯಗತಗೊಳಿಸಲಿದೆ. ಈಗಾಗಲೇ ಸರ್ಕಾರದಿಂದ ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಮಂಜೂರಾದ 5 ಕೋಟಿ ರೂ. ಅನುದಾನದಲ್ಲಿ ತರೀಕೆರೆ ತಾಲೂಕಿನ ಸಂತವೇರಿ, ಬಾವಿಕೆರೆ, ತಿಗಡ ಮಾತ್ರವಲ್ಲದೇ, ಅಜ್ಜಂಪುರ ತಾಲೂಕಿನ ಬೇಗೂರು ಮುಸ್ಲಿಂ ಕಾಲನಿ, ಬುಕ್ಕಾಂಬುದಿ, ಮಾಕನಹಳ್ಳಿ ಮತ್ತಿತರ ಕಡೆ ಉಪಯುಕ್ತವಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.
    ಬರ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗಿದ್ದು, ಈಗಾಗಲೇ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗಿದೆ. ರೈತರು ಲಭ್ಯವಿರುವ ನೀರು ಮಿತ ಬಳಕೆ ಮಾಡಿ ಸಲು ಕಾಪಾಡಿಕೊಳ್ಳಬೇಕು. ಜನ ನೀರು ಪೋಲು ಮಾಡದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
    ಕೆಪಿಸಿಸಿ ಸದಸ್ಯ ಜಿ.ನಟರಾಜ್, ಕಾಂಗ್ರೆಸ್ ಮುಖಂಡರಾದ ಗಡೀಹಳ್ಳಿ ಮಂಜುನಾಥ್, ಜೋಗಿ ಪ್ರಕಾಶ್, ಮುಸ್ತಾಕ್, ಮುನ್ನಾವರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts