More

    ಸರ್ಕಾರಿ ಆಸ್ಪತ್ರೆಗಳೇ ರೋಗಗ್ರಸ್ತ

    ಗಜೇಂದ್ರಗಡ: ಪಟ್ಟಣದ ಸರ್ಕಾರಿ ಆಸ್ಪತ್ರೆ ಸಮಸ್ಯೆಗಳ ಗೂಡಾಗಿದ್ದರೂ, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ತುರ್ತು ಚಿಕಿತ್ಸೆಗೆ ತೆರಳುವ ರೋಗಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಶಶಿಧರ ಹೂಗಾರ ಬೇಸರ ವ್ಯಕ್ತಪಡಿಸಿದರು.

    ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ದೂರುಗಳಿವೆ. ಕಣ್ಣು, ಕಿವಿ ಸೇರಿ ಇತರ ಕೆಲ ರೋಗಗಳ ಸಂಬಂಧಿತ ಚಿಕಿತ್ಸೆಗೆ ಸೂಕ್ತ ವೈದ್ಯರಿಲ್ಲ. ಇಬ್ಬರು ಬಿಎಎಂಸ್, ಎಂಬಿಬಿಎಸ್ ಒಬ್ಬ ವೈದ್ಯರು ಮಾತ್ರ ಇದ್ದಾರೆ. ಪರಿಣಾಮ ರೋಗಿಗಳ ಚಿಕಿತ್ಸೆ ಸಿಗದಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

    ಗಜೇಂದ್ರಗಡ ರೈತ ಸಂಪರ್ಕ ಕೇಂದ್ರದ ಸಮಸ್ಯೆಯ ಬಗ್ಗೆಯೂ ಶಶಿಧರ ಗಮನ ಸೆಳೆದರು. ಸಿಬ್ಬಂದಿ ಕೊರತೆ ಇದೆ. ರೈತರಿಗೆ ಪಟ್ಟಣದಲ್ಲಿಯೇ ಗೊಬ್ಬರ ಸಿಗುವ ವ್ಯವಸ್ಥೆ ಮಾಡಬೇಕು. ರೇಷ್ಮೆ ಬೆಳೆಗಾರರಿಗೆ ಸರ್ಕಾರ ನೀಡಿದ ಪ್ರೋತ್ಸಾಹ ಧನ ಸರಿಯಾಗಿ ತಲುಪಿಲ್ಲ. ಶಾಲೆ-ಕಾಲೇಜ್​ಗಳು ಆರಂಭವಾಗಿದ್ದರೂ, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬೇಡಿಕೆ ಇದ್ದರೆ ಮಾತ್ರ ಬಸ್ ಸಂಚಾರ ಆರಂಭಿಸುವುದಾಗಿ ಹೇಳುತ್ತಿರುವುದು ಸರಿಯಲ್ಲ ಎಂದ ಶಶಿಧರ, ಇದೇ ತರನಾಗಿ ಇನ್ನಿತರ ಪ್ರಮುಖ ಸಂಗತಿಗಳನ್ನು ಸಭೆಯ ಗಮನಕ್ಕೆ ತಂದರು.

    ಜಿಪಂ ಮತ್ತು ತಾಪಂ ಒಪ್ಪಂದದಿಂದ ನಡೆಯುತ್ತಿರುವ ಕಾಮಗಾರಿಗಳು ಸಕಾಲದಲ್ಲಿ ಪೂರ್ಣವಾಗುತ್ತಿಲ್ಲ. ಕಾಮಗಾರಿಗಳನ್ನು ಸೂಕ್ತವಾಗಿ ಪರಿಶೀಲಿಸಿದ ಬಳಿಕವೇ ಕಾಮಗಾರಿ ಬಿಲ್ ಮಾಡಬೇಕು ಎಂದು ಶಶಿಧರ ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ, ಅಧ್ಯಕ್ಷೆ ಜಯಶ್ರೀ ಪಾಟೀಲ, ನನ್ನ ಕ್ಷೇತ್ರದಲ್ಲಿ ಜಿಪಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರ್ ಉಪ ವಿಭಾಗದಿಂದ ಯಾವುದೇ ಕಾಮಗಾರಿಗಳು ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹುಲಿಗೆವ್ವ ಶಿರೋಳ, ಸದಸ್ಯರಾದ ರತ್ನವ್ವ ಪೂಜಾರ, ಹುತ್ತಪ್ಪ ಮಾದರ, ಇಒ ಸಂತೋಷಕುಮಾರ ಪಾಟೀಲ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts