More

    ಪರಿಸರ ಸ್ನೇಹಿ ಅನಿಲ ಬಳಕೆಗೆ ಸರ್ಕಾರ ಉತ್ತೇಜನ

    ರಾಯಚೂರು: ಪರಿಸರ ಸ್ನೇಹಿ ಅನಿಲ ಬಳಕೆಗೆ ಉತ್ತೇಜನ ನೀಡಲು ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ಅನಿಲ ಇಂಧನವನ್ನು ಕೈಗಾರಿಕೆ ಮತ್ತು ಮನೆಗಳಿಗೆ ಮನೆಗಳಲ್ಲಿ ಬಳಕೆ ಮಾಡುವ ನಿಟಟಿನಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಪರಿಸರ ಅಕಾರಿ ನಟೇಶ ಹೇಳಿದರು.
    ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ಮಾಲೀನ್ಯ ನಿಯಂತ್ರಣ ಮಂಡಳಿ ಮತ್ತು ಎಜಿಪಿ ಪ್ರಥಮ ಗ್ಯಾಸ್ ವಿತರಣಾ ಕಂಪನಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೈಗಾರಿಕಾ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಮನೆಗಳಿಗೆ ಪೈಪ್‌ಲೈನ್ ಮೂಲಕ ಅನಿಲ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
    ಕೈಗಾರಿಕಾ ಪ್ರದೇಶಗಳಿಗೂ ಅನಿಲ ಬಳಕೆಯ ಸಾಧಕ ಬಾಧಕಗಳ ಕುರಿತು ಸಮಾಲೋಚನೆ ನಡೆಯಬೇಕಾಗಿದೆ. ಇದು ಉದ್ಯಮಗಳಿಗೆ ಹೇಗೆ ಲಾಭದಾಯ ಎಂಬುದರ ಕುರಿತು ಕೈಗಾರಿಕೋದ್ಯಮಿಗಳಿಗೆ ಮನವರಿಕೆ ಮಾಡಿ ಕೊಡುವ ಮೂಲಕ ಪರಿಸರ ಸ್ನೇಹಿ ಅನಿಲ ಬಳಕೆಗೆ ಉತ್ತೇಜನ ನೀಡಬೇಕಾಗಿದೆ ಎಂದು ಹೇಳಿದರು.
    ಎಜಿಪಿ ಪ್ರಥಮ ಗ್ಯಾಸ್ ವಿತರಣಾ ಕಂಪನಿ ಉಪ ಪ್ರಾದೇಶಿಕ ಮುಖ್ಯಸ್ಥ ಜಗದೀಶ ಪರ‌್ಲಿ ಮಾತನಾಡಿ, ಕೈಗಾರಿಕಾ ಸಂಸ್ಥೆಗಳಿಗೆ ನೇರ ಪೈಪ್‌ಲೈನ್ ಮೂಲಕ ಸ್ಥಿರವಾದ ಅಡೆತಡೆಯಿಲ್ಲದ ಅನಿಲ ಪೂರೈಕೆಯನ್ನು ಕಂಪನಿ ಖಾತ್ರಿಗೊಳಿಸುತ್ತದೆ. ಇದು ಕಾರ್ಯಾಚರಣೆ ಮತ್ತು ನಿರ್ವಹನೆಯ ಸವಾಲುಗಳನ್ನು ನಿವಾರಿಸುತ್ತದೆ.
    ಮುಂಬರುವ ದಿನಗಳಲ್ಲಿ ಸರ್ಕಾರ ಇಂತಹ ಕಾರ್ಯಗಳಿಗೆ ಉತ್ತೇಜನ ನೀಡಬೇಕಾಗಿದೆ. ಅನಿಲ ಪೂರೈಕೆಯಲ್ಲಿ ಧನಾತ್ಮಕ ಬದಲಾವಣೆ ಉತ್ತೇಜಿಸುವ ಮೂಲಕ ನಮ್ಮ ಬದ್ಧತೆಯನ್ನು ಮುನ್ನಡೆಸಲು ಕಂಪನಿ ಸದಾ ಮುಂದಿರುತ್ತದೆ ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಕಂಪನಿಯ ಅಕಾರಿಗಳಾದ ಕೃಷ್ಣಮೂರ್ತಿ, ರಮೇಶ, ಜಗದೀಶ ಹಾಗೂ ಜಿಲ್ಲೆಯ ವಿವಿಧ ಕೈಗಾರಿಕೆಗಳ ಮಾಲೀಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts