More

    ಸರ್ಕಾರಿ ಕಚೇರಿಯಲ್ಲೇ ಕೈ ಕುಯ್ದುಕೊಂಡ ನೌಕರ; ಮೇಲಧಿಕಾರಿಯ ಕಿರುಕುಳ ಆರೋಪ

    ಚಾಮರಾಜನಗರ: ಮೇಲಧಿಕಾರಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನೌಕರನೊಬ್ಬ ಸರ್ಕಾರಿ ಕಚೇರಿಯಲ್ಲೇ ಕೈ ಕುಯ್ದುಕೊಂಡಿದ್ದಾನೆ. ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಖಜಾನೆ ಇಲಾಖೆಯಲ್ಲಿ ಉಪನಿರ್ದೇಶಕಿ ವರಲಕ್ಷ್ಮಿ ತೊಂದರೆ ಕೊಡುತ್ತಿದ್ದಾರೆ ಎಂದು ದಫೇದಾರ್ ಯೂಸೂಫ್ ಗುರುವಾರ ತಮ್ಮ ಎಡಗೈ ಕುಯ್ದುಕೊಂಡಿದ್ದಾನೆ. ಸಿಬ್ಬಂದಿ ಆ್ಯಂಬುಲೆನ್ಸ್‌ ಕರೆಸಿ ಯೂಸೂಫ್​ನನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.

    ಉಪ ನಿರ್ದೇಶಕಿ ವರಲಕ್ಷ್ಮಿ ಅವರು ಪದವಿ ಕಾಲೇಜು ಪ್ರಶ್ನೆಪತ್ರಿಕೆ ಸ್ಟ್ರಾಂಗ್ ರೂಂ ನೋಡಿಕೊಳ್ಳಲು ದಫೇದಾರ್ ಯೂಸೂಫ್​​ನನ್ನು ನಿಯೋಜಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಯೂಸೂಫ್ ‘ನನ್ನ ಮಗಳು ಪದವಿ ಪರೀಕ್ಷೆ ಬರೆಯುತ್ತಿದ್ದು, ಸ್ಟ್ರಾಂಗ್ ರೂಂ ಕರ್ತವ್ಯ ನಿರ್ವಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲೇ ಪ್ರಶ್ನೆಪತ್ರಿಕೆ ಸೋರಿಕೆ ನಡೆದರೂ ನನ್ನ ಮತ್ತು ನನ್ನ ಮಗಳ ಭವಿಷ್ಯ ಹಾಳಾಗುತ್ತದೆ’ ಎಂದು ತಿಳಿಸಿದ್ದಾನೆ.

    ಆದರೆ ಯೂಸೂಫ್​ ವಾದವನ್ನು ಒಪ್ಪದ ವರಲಕ್ಷ್ಮಿ‌, ಕರ್ತವ್ಯಕ್ಕೆ ಹಾಜರಾಗಲೇಬೇಕು ಎಂಬುದಾಗಿ ಯೂಸೂಫ್​ಗೆ ನೋಟಿಸ್ ನೀಡಿದ್ದರು. ಇದರಿಂದ ಬೇಸರಗೊಂಡ ಯೂಸೂಫ್ ಕಚೇರಿಯಲ್ಲೇ ಕೈ ಕುಯ್ದುಕೊಂಡಿದ್ದಾ‌ನೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ತಾಯಿ ಹಾಗೂ ಮಕ್ಕಳಿಬ್ಬರು ‘ಕೆರೆಗೆ ಹಾರ’; ಸಾಲಭಾದೆ ತಾಳಲಾಗದೆ ಆತ್ಮಹತ್ಯೆ

    ಅಯ್ಯೋ, ಮಗಳೇ ಕಾಲೇಜಿಗೆ ಹೋಗವ್ವ ಅಂದಿದ್ದೇ ತಪ್ಪಾಯ್ತಾ? ನಡೆದೇ ಹೋಯ್ತು ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts