More

    ಸರ್ಕಾರಿ ಕಟ್ಟಡಗಳಿಗೆ ಇಲಾಖೆಗಳ ಸ್ಥಳಾಂತರಕ್ಕೆ ಒತ್ತಾಯ

    ಗಂಗಾವತಿ: ಸಿಟಿ ಮಾರುಕಟ್ಟೆ ಆರಂಭದ ಜತೆಗೆ ಖಾಸಗಿ ಕಟ್ಟಡದಲ್ಲಿರುವ ಕೆಲ ಇಲಾಖೆ ಕಟ್ಟಡಗಳನ್ನು ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಶಾಸಕ ಗಾಲಿ ಜನಾರ್ದನರೆಡ್ಡಿಗೆ ಸೋಮವಾರ ಮನವಿ ಸಲ್ಲಿಸಿದರು.

    ಇದನ್ನೂ ಓದಿ:ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ, ವೆಪನ್ಸ್ ಕೊರತೆ; ಪರಂ​ ರಿಯಾಕ್ಷನ್​

    ಶಾಸಕರ ಗೃಹಕಚೇರಿಗೆ ತೆರಳಿದ ಜಿಲ್ಲಾ ಸಮಿತಿ ಸದಸ್ಯರು, ದುಬಾರಿ ಬಾಡಿಗೆಯಲ್ಲಿರುವ ಸರ್ಕಾರಿ ಕಚೇರಿಗಳನ್ನು ಖಾಲಿಬಿದ್ದಿರುವ ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸಲು ಒತ್ತಾಯಿಸಿದರು.

    ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ಅಬಕಾರಿ, ಕಾರ್ಮಿಕ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ, ಅಲ್ಪಸಂಖ್ಯಾತರ, ಹಿಂದುಳಿದವರ್ಗಗಳ, ಸಿಟಿಒ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿ ಹಲವು ಇಲಾಖಾ ಕಚೇರಿಗಳು ದುಬಾರಿ ಬಾಡಿಗೆ ಖಾಸಗಿ ಕಟ್ಟಡದಲ್ಲಿವೆ.

    ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದು, ಹಲವು ವರ್ಷಗಳಿಂದ ಖಾಲಿ ಬಿದ್ದಿರುವ ಹಳೇ ತಹಸೀಲ್ ಮತ್ತು ಪಶುಸಂಗೋಪನೆ ಇಲಾಖೆ ಕಚೇರಿಗಳ ಕಟ್ಟಡಕ್ಕೆ ಸ್ಥಳಾಂತರಿಸಬೇಕು.

    20ವರ್ಷಗಳ ಹಿಂದೆ ನಿರ್ಮಾಣಗೊಂಡ ಗುಂಡಮ್ಮಕ್ಯಾಂಪ್‌ನಲ್ಲಿರುವ ಸಿಟಿ ಮಾರುಕಟ್ಟೆ ಪಾಳು ಬಿದ್ದಿದ್ದು, ಇದುವರಿಗೂ ಆರಂಭವಾಗಿಲ್ಲ. ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದರು. ಪದಾಧಿಕಾರಿಗಳಾದ ಜಡಿಯಪ್ಪ ಹಂಚಿನಾಳ, ಕಷ್ಣ ಮೆಟ್ರಿ, ದುರುಗೇಶ ಹೊಸಳ್ಳಿ, ವಾಸು ನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts