More

    ಸ್ಯಾಂಡಲ್​ವುಡ್​ ಸ್ಟಾರ್ಸ್​ ಅಬ್ಬರಕ್ಕೆ ಮಣಿದ ಸರ್ಕಾರ …

    ಬೆಂಗಳೂರು: ಅಂತೂ ಕರ್ನಾಟಕ ಸರ್ಕಾರ ಕನ್ನಡ ಚಲನಚಿತ್ರದ ಮನವಿಯನವನು ಪುರಸ್ಕರಿಸಿದೆ. ಕರೊನಾ ಎರಡನೆಯ ಅಲೆ ಕಾರಣ ಮುಂದೊಡ್ಡಿ ಫೆಬ್ರವರಿ 28ರವರೆಗೆ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಮಾತ್ರ ಸೀಟು ಭರ್ತಿಗೆ ಅನುಮತಿ ನೀಡಿತ್ತು. ಇದರ ವಿರುದ್ಧ ಬುಧವಾರ ಬೆಳಿಗ್ಗೆಯಿಂದಲೇ ಹಲವು ಕಲಾವಿದರು ಮತ್ತು ತಂತ್ರಜ್ಞರು ಆದೇಶವನ್ನು ಹಿಂದಕ್ಕೆ ಪಡೆಯಲು ಸರ್ಕಾರವನ್ನು ಒತ್ತಾಯಿಸಿದ್ದರು. ಕೊನೆಗೆ, ಸಂಜೆ ಬೇರೆ ದಾರಿ ಇಲ್ಲದೆ ಸರ್ಕಾರವು ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡುವ ಮೂಲಕ ಕನ್ನಡ ಚಿತ್ರರಂಗದ ಮನವಿಯನ್ನು ಪುರಸ್ಕರಿಸಿದೆ.

    ಇದನ್ನೂ ಓದಿ: ಮಧ್ಯರಾತ್ರಿ ಕಿರುತೆರೆ ನಟಿಯನ್ನು ಕೆಣಕಿ ಜೈಲು ಪಾಲಾದ ನಾಲ್ವರು ದುಷ್ಕರ್ಮಿಗಳು..!

    ಇಂಥದ್ದೊಂದು ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದು ಧ್ರುವ ಸರ್ಜಾ. ಸರ್ಕಾರದ ಈ ಹೊಸ ಆದೇಶದಿಂದ ಧ್ರುವ ಅಭಿನಯದ ‘ಪೊಗರು’ ಚಿತ್ರಕ್ಕೆ ದೊಡ್ಡ ಸಮಸ್ಯೆ ಎದುರಾಗಿದೆ. ಈ ತಿಂಗಳ 19ರಂದು ಬಿಡುಗಡೆಗೆ ಈ ಚಿತ್ರ ಸಜ್ಜಾಗಿದ್ದು, ಮೊದಲ ಒಂದಿಷ್ಟು ದಿನಗಳ ಕಾಲ ಹೌಸ್‌ಫುಲ್ ಆಗುವ ಸಾಮರ್ಥ್ಯವಿದ್ದರೂ, ಶೇ. 50ರಷ್ಟು ಹಾಜರಾತಿಗೆ ಮಾತ್ರ ಚಿತ್ರ ಪ್ರದರ್ಶಿಸುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಸಹಜವಾಗಿಯೇ, ಚಿತ್ರಕ್ಕೆ ಬರಬಹುದಾದ ಆದಾಯದಲ್ಲಿ ಇಳಿಕೆಯಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರವು ಬೇರೆ ಯಾವುದೇ ಕ್ಷೇತ್ರಕ್ಕೂ ಹಾಕದ ಷರತ್ತುಗಳನ್ನು ಚಿತ್ರರಂಗಕ್ಕೆ ಮಾತ್ರ ವಿಧಿಸುತ್ತಿರುವುದು ಸಹಜವಾಗಿಯೇ ಚಿತ್ರರಂಗದ ಮಂದಿಯ ಆಕ್ರೋಶಕ್ಕೆ ಕಾರಣವಾಗಿತ್ತು.

    ಈ ನಿಟ್ಟಿನಲ್ಲಿ ಧ್ರುವ ಸರ್ಜಾ, ಬುಧವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದರು. ‘ಮಾರ್ಕೆಟ್‌ನಲ್ಲಿ ಗಿಜಿಗಿಜಿ ಜನ, ಬಸ್‌ನಲ್ಲೂ ಫುಲ್ ರಶ್, ಚಿತ್ರಮಂದಿರಕ್ಕೆ ಏಕೆ 50 ಪರ್ಸೆಂಟ್ ನಿರ್ಬಂಧ …’ ಎಂದು ಖಾಲಿ ಚಿತ್ರಮಂದಿರದ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಇದಾಗುತ್ತಿದ್ದಂತೆಯೇ ಪುನೀತ್ ರಾಜಕುಮಾರ್, ಶಿವರಾಜಕುಮಾರ್, ಶ್ರೀಮುರಳಿ, ಧನಂಜಯ್, ಪುಷ್ಕರ್ ಮಲ್ಲಿಕಾರ್ಜುನಯ್ಯ, ‘ಜೋಗಿ’ ಪ್ರೇಮ್ ಸೇರಿದಂತೆ ಹಲವರು ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಹಾಜರಾತಿಗೆ ಅನುಮತಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಕೆಲವರು ವಿಡಿಯೋಗಳ ಮೂಲಕ ಈ ಮನವಿ ಮಾಡಿದರೆ, ಇನ್ನೂ ಕೆಲವರು ತಮ್ಮ ಮನಸ್ಸಿನ ಮಾತನ್ನು ಪೋಸ್ಟ್ ಮಾಡುವ ಮೂಲಕ ಆಗ್ರಹಿಸಿದ್ದರು.

    ‘ಎಲ್ಲರಿಗೂ ಶೇ. 100ರಷ್ಟು ಹಾಜರಾತಿಗೆ ಅನುಮತಿ ಕೊಟ್ಟಿರುವಾಗ ನಮಗೆ ಮಾತ್ರ 50 ಪರ್ಸೆಂಟ್ ಯಾಕೆ? ನಮಗೂ ಶೇ. 100ರಷ್ಟು ಹಾಜರಾತಿ ಬೇಕೇಬೇಕು. ಚಿತ್ರರಂಗಕ್ಕಾಗಿ ನಾವೆಲ್ಲಾ ಜತೆಯಾಗಿದ್ದೀವಿ. ಸರ್ಕಾರದ ಈ ನಿರ್ಧಾರ ಬದಲಾಗಲೇಬೇಕು’ ಎಂದು ಶಿವರಾಜಕುಮಾರ್ ಆಗ್ರಹಿಸಿದ್ದಾರೆ. ಚಿತ್ರೀಕರಣ ಸ್ಥಳದಿಂದಲೇ ಮಾತನಾಡಿರುವ ಶ್ರೀಮುರಳಿ, ‘ಒಂದು ಕಣ್ಣಿಗೆ ಬಣ್ಣೆ, ಒಂದು ಕಣ್ಣಿಗೆ ಸುಣ್ಣ. ಇದ್ಯಾವ ನ್ಯಾಯ ಹೇಳಿ? ಎಲ್ಲರಿಗೂ 100 ಪರ್ಸೆಂಟ್ ಕೊಟ್ಟುಬಿಟ್ಟು ನಮ್ಮ ಚಿತ್ರರಂಗಕ್ಕೆ ಮಾತ್ರ 50 ಪರ್ಸೆಂಟ್ ಯಾಕೆ? ಇದರಿಂದ ಬಹಳ ಬೇಸರ ಇದೆ. ಬಹಳಷ್ಟು ಸಂಸಾರ ಚಿತ್ರರಂಗವನ್ನು ನಂಬಿ ಬದುಕುತ್ತಿವೆ. ದಯವಿಟ್ಟು ಈ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಂಡು, ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ಕೊಡಿ’ ಎಂದು ಹೇಳಿದ್ದರು.

    ಇದನ್ನೂ ಓದಿ: ನೇಹಾ ಶೆಟ್ಟಿ ಅಭಿನಯದ ತೆಲುಗು ಸಿನಿಮಾ ಶುರು

    ಖಾಸಗೀ ಸಮಾರಂಭಗಳಲ್ಲಿ, ದೇವಸ್ಥಾನಗಳಲ್ಲಿ, ಮಾರ್ಕೆಟ್ ಮತ್ತು ಸಾರ್ವಜನಿಕ ಸಾರಿಗೆಗಳಲ್ಲಿ ಅಷ್ಟೊಂದು ಜನ ಸೇರಬಹುದಾದರೆ, ಚಿತ್ರಮಂದಿರಗಳಲ್ಲಿ ಮಾತ್ರ ಯಾಕೆ ಜನ ಒಟ್ಟಿಗೆ ಕೂತು ಚಿತ್ರಗಳನ್ನು ನೋಡುವಂತಿಲ್ಲ ಎಂದು ಪುನೀತ್ ರಾಜಕುಮಾರ್ ಪ್ರಶ್ನಿಸಿದ್ದಾರೆ. ಚಿತ್ರರಂಗ ಎಂದರೆ ಬರೀ ಮನರಂಜನೆಯಲ್ಲ, ಅದು ಹಲವರಿಗೆ ಹೊಟ್ಟೆಪಾಡು ಎನ್ನುವುದು ನಾವು ಯಾಕೆ ಮರೆಯುತ್ತಿದ್ದೀವಿ ಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ. ಇನ್ನು, ನಟ ಧನಂಜಯ್ ಅವರು ಬಸವಣ್ಣನವರ ವಚನವೊಂದನ್ನು ಉದಾಹಿರಿಸುತ್ತಾ, ‘ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯ? ಊರೆಲ್ಲಾ ಜನಜಂಗುಳಿ ತುಂಬಿ ತುಳುಕುತಿರಲು ಚಿತ್ರಮಂದಿರದೊಳಗೆ ಮಾತ್ರ ಕರೊನಾಗೆ ಅಂಜಿದೊಡೆಂತಯ್ಯ?’ ಎಂದು ಪ್ರಶ್ನಿಸಿದ್ದರು.

    ಥಿಯೇಟರ್ ಮಾಲೀಕರಿಂದ ಕಲೆಕ್ಷನ್ ಮಾಡಲು ಈ ಆದೇಶ: ಎಚ್​ಡಿಕೆ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts