More

    ಜನಸ್ನೇಹಿಯಾಗುವತ್ತ ಆಡಳಿತ

    ಧಾರವಾಡ: ಜಿಲ್ಲೆಯ ಪ್ರತಿ ಗ್ರಾಮದ ಜನರಿಗೆ ಸರ್ಕಾರದ ಯೋಜನೆಗಳು ತಲುಪುತ್ತಿರುವ ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳ ಕಾರ್ಯ ಕ್ಷಮತೆ ಪರಿಶೀಲಿಸುವುದರೊಂದಿಗೆ ಜಿಲ್ಲಾಡಳಿತವನ್ನು ಜನಸ್ನೇಹಿಗೊಳಿಸಲು ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಂದಾಯ ಹಾಗೂ ಪಿಂಚಣಿ ಸಂಬಂಧಿಸಿ ಜನರು ತಮ್ಮ ಗ್ರಾಮಗಳಿಂದ ತಹಸೀಲ್ದಾರ್ ಕಚೇರಿಗಳಿಗೆ ಆಗಮಿಸುತ್ತಿದ್ದಾರೆ. ಪ್ರತಿ ಗ್ರಾಮಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಗ್ರಾಮ ಮಟ್ಟದಲ್ಲೇ ಅರ್ಜಿಗಳನ್ನು ಸ್ವೀಕರಿಸಿ, ಸೂಕ್ತ ಕ್ರಮ ಕೈಗೊಂಡರೆ ಕಚೇರಿಗೆ ಅಲೆಯುವುದನ್ನು ತಪ್ಪಿಸಬಹುದು ಎಂದರು.

    ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಮಾ. 8ರಂದು ಆಯೋಜಿಸಲಾಗಿದೆ. ಅಂದು ತಾಲೂಕಿನ 7 ಹಳ್ಳಿಗಳಿಗೆ ಭೇಟಿ ನೀಡಿ, ಆಯಾ ಗ್ರಾಮಗಳಿಗೆ ಸೀಮಿತವಾಗಿ ಪಿಂಚಣಿ ಹಾಗೂ ಕಂದಾಯ ಅದಾಲತ್ ನಡೆಸಿ ಜನರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಉಪವಿಭಾಗಾಧಿಕಾರಿ, ತಾಲೂಕು ಪಂಚಾಯಿತಿ ಇಒ, ತಹಸೀಲ್ದಾರ್, ಭೂ ದಾಖಲೆಗಳ ವಿಭಾಗದ ಉಪ ನಿರ್ದೇಶಕ, ಸಹಾಯಕ ನಿರ್ದೇಶಕ, ಆಯಾ ಹೋಬಳಿಯ ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು ಪಿಡಿಒಗಳು ಭಾಗವಹಿಸಲಿದ್ದಾರೆ ಎಂದರು.

    ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಡಾ. ಬಿ. ಗೋಪಾಲಕೃಷ್ಣ , ತಾಪಂ ಇಒ ಎಸ್.ಎಸ್. ಕಾದ್ರೋಳಿ, ತಹಸೀಲ್ದಾರ್ ಸಂತೋಷ ಬಿರಾದಾರ, ಪಂಚಾಯತ್ ಅಭಿವೃದಿಟಛಿ ಅಧಿಕಾರಿ ಮೃತ್ಯುಂಜಯ ಮೆಣಸಿನಕಾಯಿ, ಕಂದಾಯ ನಿರೀಕ್ಷಕ ಮಂಜುನಾಥ ಗೂಳಪ್ಪನವರ, ಗ್ರಾಮಗಳ ಗ್ರಾಮಲೆಕ್ಕಾಧಿಕಾರಿಗಳು, ಇತರರು ಇದ್ದರು.

    ಹಳ್ಳಿಗಳ ಭೇಟಿ ಸಮಯ: ಬೆಳಗ್ಗೆ 11 ಗಂಟೆಗೆ ನಿಗದಿ ಗ್ರಾಪಂ ಆವರಣದಲ್ಲಿ ನಿಗದಿ ಗ್ರಾಮದ ಜನರಿಂದ ಅಹವಾಲು ಸ್ವೀಕರಿಸಿ ಪಿಂಚಣಿ ಹಾಗೂ ಕಂದಾಯ ಅದಾಲತ್ ನಡೆಸುವರು. ಮಧ್ಯಾಹ್ನ 12 ಗಂಟೆಗೆ ಹಳ್ಳಿಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ, ಮಧ್ಯಾಹ್ನ 1 ಗಂಟೆಗೆ ಮುರಕಟ್ಟಿ ಗ್ರಾಮದ ಕರೆಮ್ಮದೇವಿ ದೇವಸ್ಥಾನ ಆವರಣ, ಮಧ್ಯಾಹ್ನ 3 ಗಂಟೆಗೆ ದೇವಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜನರಿಂದ ಅಹವಾಲುಗಳನ್ನು ಸ್ವೀಕರಿಸಿ ಪಿಂಚಣಿ ಹಾಗೂ ಕಂದಾಯ ಅದಾಲತ್ ನಡೆಸುವರು.

    ಮಧ್ಯಾಹ್ನ 3.45ಕ್ಕೆ ಕಲಕೇರಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ರಸ್ತೆ ನಿರ್ವಿುಸುವ ದೂರಿನ ಕುರಿತು ಪರಿಶೀಲಿಸುವರು. ಸಂಜೆ 4 ಗಂಟೆಗೆ ಮುಗದ, ಸಂಜೆ 5 ಗಂಟೆಗೆ ದಡ್ಡಿಕಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪಿಂಚಣಿ ಹಾಗೂ ಕಂದಾಯ ಅದಾಲತ್ ನಡೆಸುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts