More

    ಸಾವಯವ ಕೃಷಿ ಉತ್ತೇಜನಕ್ಕೆ ಪೂರಕ ಯೋಜನೆ

    ಗಂಗಾವತಿ: ಸಾವಯವ ಕೃಷಿ ಉತ್ತೇಜನಕ್ಕೆ ಪೂರಕವಾದ ಯೋಜನೆಗಳನ್ನು ಗೋಶಾಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಪ್ರಾತ್ಯಕ್ಷಿಕೆ ಮೂಲಕ ಆಸಕ್ತರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಾಲೂಕಿನ ಆನೆಗೊಂದಿ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯದ ಗೋಶಾಲೆ ವ್ಯವಸ್ಥಾಪಕ ರಾಜಣ್ಣ ಸ್ವಾಮಿ ಹೇಳಿದರು.

    ಆನೆಗೊಂದಿಯ ಶ್ರೀ ದುರ್ಗಾಮಾತಾ ಗೋಶಾಲೆಯಲ್ಲಿ ಸರ್ಕಾರಿ ಕೃಷಿ ಕಾಲೇಜಿನ ಎನ್ನೆಸ್ಸೆಸ್ ಘಟಕ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ ಎರೆಹುಳು ಗೊಬ್ಬರ ತಯಾರಿಕೆ ಮತ್ತು ಗೋವಿನ ಪ್ರಾಮುಖ್ಯತೆ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
    ರಾಸಾಯನಿಕ ಮುಕ್ತ ಬೆಳೆಗಳತ್ತ ಯುವಪೀಳಿಗೆ ಆಸಕ್ತಿ ವಹಿಸಬೇಕಿದ್ದು, ಗೋವು ಮತ್ತು ಉತ್ಪನ್ನಗಳ ಬಳಕೆ ಮೂಲಕ ಪೌಷ್ಟಿಕಯುಕ್ತ ಬೆಳೆ ಪಡೆಯಲು ಸಾಧ್ಯ. ರಾಜ್ಯದಲ್ಲಿ ಮಾದರಿ ಗೋಶಾಲೆಯನ್ನಾಗಿ ಮಾಡುವ ಗುರಿಯಿದೆ ಎಂದರು.

    ಕೃಷಿ ಕಾಲೇಜಿನ ಪ್ರಾಧ್ಯಾಪಕ ಡಾ.ಕಿರಣಕುಮಾರ ಮಾತನಾಡಿ, ಸಾವಯವ ಗೊಬ್ಬರಕ್ಕೆ ರಾಜ್ಯದಲ್ಲಿ ಬಹು ಬೇಡಿಕೆಯಿದ್ದು, ಎರೆಹುಳ್ಳು ಗೊಬ್ಬರ ಬಳಕೆಯಿಂದ ಕೃಷಿ ವೆಚ್ಚ ಕಡಿಮೆ ಮಾಡಲು ಸಾಧ್ಯ. ತಯಾರಿಸಿದ ಗೊಬ್ಬರಕ್ಕೂ ಕೆವಿಕೆಯಿಂದ ಮಾರುಕಟ್ಟೆ ವ್ಯವಸ್ಥೆಯಿದೆ ಎಂದು ತಿಳಿಸಿದರು.

    ಎರೆ ಹುಳು ತೊಟ್ಟಿಗಳ ನಿರ್ಮಾಣದ ಮೂಲಕ ಗೊಬ್ಬರ ತಯಾರಿಕೆ ಬಗ್ಗೆ ಮಾಹಿತಿ ನೀಡಲಾಯಿತು. ಗೋವುಗಳ ವಿವಿಧ ತಳಿಗಳು ಮತ್ತು ಉಪಯುಕ್ತತೆ ಕುರಿತು ಪ್ರಗತಿಪರ ರೈತರು ಅಭಿಪ್ರಾಯ ಹಂಚಿಕೊಂಡರು. ಸಂಘದ ಜಿಲ್ಲಾ ಸಂಯೋಜಕ ಮಂಜುನಾಥ ಹೊಸ್ಕೇರಾ, ಪ್ರಗತಿಪರ ರೈತರಾದ ಚಿಲಕೂರಿ ರಾಮಕೃಷ್ಣ, ವೆಂಕಟನಾರಾಯಣ, ಎನ್ನೆಸ್ಸೆಸ್ ಪ್ರತಿನಿಧಿಗಳಾದ ಪ್ರವೀಣ ಚೌವ್ಹಾಣ್ ಸಾಹಿಲ್, ಅಕ್ಷತಾ ದೇವರೆಡ್ಡಿ, ಶಿವಯೋಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts