More

    VIDEO| ಕಾಡುಗಳ್ಳ ವೀರಪ್ಪನ್​ ಊರಿನಲ್ಲಿ ಕರೊನಾ ಓಡಿಸಲು ಅಖಾಡಕ್ಕಿಳಿದ ದೇವರು: ಅಚ್ಚರಿ ವಿಡಿಯೋ…!

    ಚಾಮರಾಜನಗರ: ಮಹಾಮಾರಿ ಕರೊನಾ ವೈರಸ್​ ಓಡಿಸಲು ಜಾಗತಿಕವಾಗಿ ಸಾಕಷ್ಟು ಸರ್ಕಸ್​ ನಡೆಯುತ್ತಿರುವ ಸಮಯದಲ್ಲಿ, ಚಾಮರಾಜನಗರ ಜಿಲ್ಲೆಯ ಗಂಡಿಯಂಚಿನ ಗ್ರಾಮದಲ್ಲಿ ಕರೊನಾ ವಿರುದ್ಧ ವಿನೂತನ ಹಾಗೂ ವಿಚಿತ್ರ ಅಸ್ತ್ರವನ್ನು ಪ್ರಯೋಗ ಮಾಡುತ್ತಿರುವುದು ಸಿಕ್ಕಾಪಟ್ಟೆ ಸುದ್ದಿಯಾಗಿದೆ.

    ಇದನ್ನೂ ಓದಿ: ಸುಶಾಂತ್​ ಮಾಜಿ ಮ್ಯಾನೇಜರ್​ ದಿಶಾ ಗರ್ಭಿಣಿಯಾಗಿದ್ರಾ? ಬಾಲಿವುಡ್​ ಗಲ್ಲಿಯಲ್ಲಿ ಹರಿದಾಡ್ತಿದೆ ಮತ್ತೊಂದು ಸುದ್ದಿ!

    ಹೌದು, ಕರೊನಾ ತೊಲಗಿಸಲು ಕುಖ್ಯಾತ ಕಾಡುಗಳ್ಳ ವೀರಪ್ಪನ್ ಊರಿನಲ್ಲಿ ಕರೊನಾ ಪೂಜೆ ನಡೆಯುತ್ತಿದೆ. ಹನೂರು ತಾಲ್ಲೂಕಿನ ಗೋಪಿನಾಥಂ ವಿಚಿತ್ರ ಆಚರಣೆಗೆ ಸಾಕ್ಷಿಯಾಗಿದ್ದು, ಕರೊನಾ ಓಡಿಸಲು ಸ್ವತಃ ದೇವರೆ ಅಖಾಡಕ್ಕೆ ಇಳಿದಿದ್ದಾರೆ. ಇದನ್ನು ನಂಬಿಕೆ ಅನ್ನಬೇಕೋ? ಅಥವಾ ಮೂಢನಂಬಿಕೆ ಅನ್ನಬೇಕೋ? ಗೊತ್ತಿಲ್ಲ. ಆದರೆ, ಜನರ ಆಚರಣೆ ಮಾತ್ರ ನೋಡುಗರಿಗೆ ವಿಚಿತ್ರ ಎನಿಸದೇ ಇರದು.

    ಕರೊನಾ ವೈರಸ್ ಊರಿಗೆ ಬರದಂತೆ ತಡೆಯಲು ಮುಂದಾಗಿರುವ ಗ್ರಾಮಸ್ಥರು ಇಡೀ ಊರಿಗೆ ಮಂತ್ರಜಲ ಪ್ರೋಕ್ಷಣೆ ಮಾಡುತ್ತಿದ್ದಾರೆ. ಹೀಗೆ ಮಾಡಲು ಹೇಳಿದ್ದು ಬೇರೆ ಯಾರು ಅಲ್ಲ. ಸ್ವತಃ ದೇವರೇ ಹೇಳಿದ್ದಾಗಿ ಗ್ರಾಮಸ್ಥರು ನಂಬಿದ್ದಾರೆ. ಗೋಪಿನಾಥಂನ ಅರ್ಚಕ ಸುಬ್ರಹ್ಮಣಿ ಗ್ರಾಮಕ್ಕೆಲ್ಲ ಮಂತ್ರಜಲ ಪೋಕ್ಷಣೆ ಮಾಡಿ ತೀರ್ಥ ಪ್ರಸಾದ ವಿತರಣೆ ಮಾಡಿದ್ದಾರೆ. ಗ್ರಾಮದ ಅಧಿದೇವತೆ ಮಾರಿಯಮ್ಮ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಸಂಬಳ ಕೋಡೋಕೆ ಕಾಸಿಲ್ಲ ಎನ್ನುವ ಸರ್ಕಾರಕ್ಕೆ ಇದ್ಯಾಕೆ ಬೇಕು..? ಸಾಮಾನ್ಯರ ಆಕ್ರೋಶಕ್ಕೂ ಕಾರಣವಿಲ್ಲದಿಲ್ಲ…!

    ವಿಶೇಷವೆಂದರೆ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ದೇವರು ಬಂದಂತೆ ಮಾತಾಡಿದ್ದು, ಏನೇ ಕಷ್ಟ ಬಂದರೂ ನಾನು ನಿಮ್ಮನ್ನು ಕಾಪಾಡಿಕೊಳ್ಳುತ್ತೇನೆ. ನೀವು ನಂಬಿ ಅಥವಾ ಬಿಡಿ ಕರೊನಾ ಊರಿಗೆ ಬರದಂತೆ ತಡೆಯುತ್ತೇನೆ. ಊರಿಂದ ಆಚೆಯೇ ಕರೊನಾ ಓಡಿಸುತ್ತೇನೆಂದು ದೇವರು ಬಂದಂತೆ ಮಾತನಾಡಿದ್ದು, ಅವರ ಶಿಫಾರಸಿನಂತೆ ಊರೆಲ್ಲಾ ಮಂತ್ರಜಲ ಪ್ರೋಕ್ಷಣೆ ಮಾಡಲಾಗಿದೆ. ಇದೀಗ ಈ ವಿಡಿಯೋ ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​​)

    ದೇವಸ್ಥಾನಕ್ಕೆ ಹೋಗುವ ಮಾರ್ಗಮಧ್ಯದಲ್ಲೇ ಮೂವರು ಮಕ್ಕಳು ಸಾವು, ಬದುಕುಳಿದ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts