More

    ಬಿಜೆಪಿ ಟಿಕೆಟ್ ಮಿಸ್, ಕೇಸರಿ v/s ಕೆಂಪು: ಪಕ್ಷೇತರ ಸ್ಪರ್ಧೆಗೆ ನುಗ್ಗಿದ ‘ಗೂಳಿ’ಹಟ್ಟಿ ಶೇಖರ್

    ಚಿತ್ರದುರ್ಗ: ಪ್ರಸಕ್ತ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಆಕಾಂಕ್ಷಿಯಾಗಿದ್ದ ಗೂಳಿಹಟ್ಟಿ ಶೇಖರ್, ತಮಗೆ ಬಿಜೆಪಿ ಟಿಕೆಟ್ ಮಿಸ್ ಆಗಿದ್ದರಿಂದ ಈಗ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಮೂಲಕ ಕೇಸರಿಗೆ ಕೆಂಪಿನಿಂದ ಉತ್ತರ ನೀಡಲು ಸಜ್ಜಾಗಿದ್ದಾರೆ.

    ಟಿಕೆಟ್ ವಂಚಿತರಾಗಿರುವ ಗೂಳಿಹಟ್ಟಿ ಶೇಖರ್, ಬಿಜೆಪಿಯ ಕೇಸರಿ ಶಾಲು ಬಿಟ್ಟು, ಕೆಂಪು ಬಣ್ಣದ ಶಾಲಿನ ಮೊರೆ ಹೋಗಿದ್ದು, ಪಕ್ಷದ ವಿರುದ್ಧ ತಮ್ಮ ಕೆಂಗಣ್ಣು ಬೀರಿದ್ದಾರೆ. ಅಲ್ಲದೆ ಕೆಂಪು ಸಮಾನತೆ ಸಾರುವ ರಕ್ತದ ಸಂಕೇತ ಎಂದು ಪ್ರಚಾರಕ್ಕೆ ತೊಡಗಿದ್ದಾರೆ.

    ಇದನ್ನೂ ಓದಿ: ಸಹೋದರನ ಬಳಿಕ ಸಹೋದರಿಯೂ ನಂದಿನಿ ಪರ ಬ್ಯಾಟಿಂಗ್; ನಂದಿನಿ ನಮ್ಮದು ಎಂದ ಪ್ರಿಯಾಂಕ

    ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದ ಗೂಳಿಹಟ್ಟಿ, ಈ ಸಲ ಕೆಂಪು ಶಾಲು ಧರಿಸಿ ಕೂಲಿ ಕಾರ್ಮಿಕರು, ಶ್ರಮಿಕರ ಮತಬೇಟೆಗೆ ಯೋಜನೆ ಹಾಕಿಕೊಂಡಿದ್ದಾರೆ. ಅದಕ್ಕಾಗಿ ಕ್ಷೇತ್ರದಲ್ಲಿ ಭಾರಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಲಿಂಗಮೂರ್ತಿಯನ್ನು ಸೋಲಿಸುವುದೇ ನನ್ನ ಗುರಿ ಎಂದಿದ್ದಾರೆ. ಇಂದು ಹೆಗ್ಗೆರೆ ಗ್ರಾಮದೇವತೆ ಕೆಂಪರಾಜೇಶ್ವರಿ ಅಮ್ಮನವರ ದರ್ಶನ ಪಡೆದು ಅವರು ಪ್ರಚಾರ ಆರಂಭಿಸಿದ್ದಾರೆ.

    ಇದನ್ನೂ ಓದಿ: ನನ್ನ ಕಣ್ಣೀರಿಗೆ ಕಾರಣರಾದವರನ್ನೇ ಕಣ್ಣೀರು ಹಾಕಿಸುವಂತೆ ಮಾಡಿದ್ರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ: ಎಚ್​.ಡಿ.ದೇವೇಗೌಡ

    ಹೊಸದುರ್ಗ ಕ್ಷೇತ್ರದಲ್ಲಿ ತನ್ನದೇ ಮತ ಬ್ಯಾಂಕ್ ಹೊಂದಿರುವ ಗೂಳಿಹಟ್ಟಿ ಶೇಖರ್, 2008ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು. 2013ರಲ್ಲಿಯೂ ಪಕ್ಷೇತರರಾಗಿ ಸ್ಪರ್ಧಿಸಿ 30 ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದರು. ಆಮೇಲೆ ಅವರಿಗೆ 2018ರಲ್ಲಿ ಬಿಜೆಪಿ ಟಿಕೆಟ್ ನೀಡಿದ್ದು, ಗೆಲುವನ್ನೂ ಕಂಡಿದ್ದರು. ಆದರೆ ಆಗ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಲಿಂಗಮೂರ್ತಿಗೆ ಈ ಬಿಜೆಪಿ ಟಿಕೆಟ್ ನೀಡಿದ್ದು, ಗೂಳಿಹಟ್ಟಿ ತಿರುಗಿಬಿದ್ದಿದ್ದಾರೆ.

    ಇದನ್ನೂ ಓದಿ: ಹವಾಮಾನ ಮುನ್ಸೂಚನೆ: ಈ ಜಿಲ್ಲೆಗಳಲ್ಲಿ ಐದು ದಿನ ಗುಡುಗು ಮಿಂಚು ಸಹಿತ ಮಳೆ

    ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಆಪ್ತರಾಗಿರು ಲಿಂಗಮೂರ್ತಿ ವಿರುದ್ಧ ಬಂಡೆದ್ದು ತೊಡೆತಟ್ಟಿರುವ ಗೂಳಿಹಟ್ಟಿ ಶೇಖರ್, ಇಂದು ಕೆಂಪು ಟವಲ್ ಹಾಕಿಕೊಂಡು ಹೆಗ್ಗೆರೆ, ಸೊಪ್ಪಿನಗುಡ್ಡ, ಓಬಳಾಪುರ, ಲಾಂಬಾಣಿಹಟ್ಟಿ, ವೆಂಗಳಾಪುರ, ಕಡವಿಗೆರೆ ಗ್ರಾಮಗಳಲ್ಲಿ ಪ್ರಚಾರ ನಡೆಸಿದ್ದಾರೆ.

    ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts