More

    ಹೆಚ್ಚಿದ ಕೊರೊನಾ ಭಯ: ಗೂಗಲ್​ನಿಂದ ಎಸ್​ಒಎಸ್​ ಅಲರ್ಟ್​

    ವಾಷಿಂಗ್ಟನ್​: ಕೊರೊನಾ ವೈರಸ್​ನಿಂದಾಗಿ ಚೀನಾ ಅಕ್ಷರಶಃ ತತ್ತರಿಸಿದ್ದು, ಇತರೆ ದೇಶಗಳಲ್ಲಿಯೂ ಸಹ ಈ ವೈರಸ್​ ಇರುವುದು ಪತ್ತೆಯಾಗಿದೆ. ಪ್ರಪಂಚದ ಜನರು ಕೊರೊನಾ ವೈರಸ್​ನ ದಾಳಿಗೆ ತುತ್ತಾಗದಿರುವಂತೆ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮಗಳನ್ನು ನೀಡುವ ಸಲುವಾಗಿ ಗೂಗಲ್​ ಎಸ್​ಒಎಸ್​ ಅಲರ್ಟ್​ ಜಾರಿಗೆ ತಂದಿದೆ.

    ಗೂಗಲ್​ನಲ್ಲಿ ನೀವು ಕೊರೊನಾ ವೈರಸ್​ ಎಂದು ಸರ್ಚ್​ ಮಾಡಿದಾಕ್ಷಣ ನಿಮಗೆ ಮೊದಲು ಕೊರೊನಾ ವೈರಸ್​ನಿಂದ ಹೇಗೆ ರಕ್ಷಣೆ ಪಡೆಯಬೇಕು, ಯಾವ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಬೇಕು ಎಂದು ತೋರಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ವೈರಸ್​ ದಾಳಿಯನ್ನು ಅಂತಾರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಕರೆದಿದ್ದು, ಗೂಗಲ್​ನ ಜತೆಗೂಡಿ ಈ ಎಸ್​ಒಎಸ್​ ಅಲರ್ಟ್​ ಜಾರಿ ಮಾಡಿದೆ.

    ಕೊರೊನಾ ವೈರಸ್​ ಬಗ್ಗೆ ನೀವು ಸರ್ಚ್​ ಮಾಡಿದಾಗ ವಿಶ್ವ ಆರೋಗ್ಯ ಸಂಸ್ಥೆಯಿಂದ ವೈರಸ್​ ಕುರಿತಾಗಿ ನೀಡಲ್ಪಟ್ಟ ಮಾಹಿತಿ ಮತ್ತು ಎಚ್ಚರಿಕೆಗಳು ಮೊದಲಿಗೆ ಕಾಣಲಿವೆ.

    ಚೀನಾದಲ್ಲಿ ಕೊರೊನಾ ವೈರಸ್​ನಿಂದಾಗಿ ಸಂಭವಿಸಿರುವ ಸಾವು ನೋವುಗಳಿಗೆ ಸ್ಪಂದಿಸಿರುವ ಗೂಗಲ್​, ತಮ್ಮ ಸಂಸ್ಥೆಯ ವತಿಯಿಂದ 2,50,000 ಡಾಲರ್​ ಹಣವನ್ನು ಚೀನಾದ ರೆಡ್​ ಕ್ರಾಸ್​ಗೆ ಪರಿಹಾರ ನಿಧಿಯಾಗಿ ಕೊಟ್ಟಿದೆ.

    ಚೀನಾದಲ್ಲಿ ಇದುವರೆಗೆ 10,000ದಷ್ಟು ಮಂದಿಯಲ್ಲಿ ವೈರಸ್​ ಇರುವುದು ಪತ್ತೆಯಾಗಿದ್ದು ಸಾವಿನ ಸಂಖ್ಯೆ 213ಕ್ಕೆ ಏರಿಕೆಯಾಗಿದೆ. ಚೀನಾ ಹೊರೆತಾಗಿ ಒಟ್ಟು 18 ದೇಶಗಳಲ್ಲಿ ವೈರಸ್​ ಇರುವುದು ಪತ್ತೆಯಾಗಿದೆ. ಭಾರತದ ಕೇರಳದಲ್ಲಿ ನಿನ್ನೆ ಮೊದಲ ವೈರಸ್​ ಪತ್ತೆಯಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts