More

    ನನ್ನಪ್ಪ ಯಾಕೆ ಫೇಮಸ್ ಅಂತ ಗೂಗಲ್‌ನಲ್ಲಿ ಹುಡುಕಿದ್ದ ಜೋರ್ಡನ್ ಪುತ್ರಿ!

    ನ್ಯೂಯಾರ್ಕ್: ದಿಗ್ಗಜ ಮೈಕೆಲ್ ಜೋರ್ಡನ್ ಅಮೆರಿಕದ ಪ್ರತಿಷ್ಠಿತ ಬಾಸ್ಕೆಟ್‌ಬಾಲ್ ಟೂರ್ನಿ ಎನ್‌ಬಿಎ ಬಗ್ಗೆ ಗೊತ್ತಿರುವ ಕ್ರೀಡಾಪ್ರೇಮಿಗಳಿಗೆ ಚಿರಪರಿಚಿತರು. ವೃತ್ತಿಪರ ಬಾಸ್ಕೆಟ್‌ಬಾಲ್‌ನಲ್ಲಿ ಹಲವಾರು ದಾಖಲೆಗಳ ಒಡೆಯರು. 15 ವರ್ಷಗಳ ಕಾಲ ಚಿಗಾಗೋ ಬುಲ್ಸ್ ಪರ ಆಡಿ 6 ಬಾರಿ ಚಾಂಪಿಯನ್‌ಷಿಪ್ ಗೆಲ್ಲಿಸಿಕೊಟ್ಟ ಸಾಧಕರು. ಆದರೆ ಅಷ್ಟೇ ಸರಳ ವ್ಯಕ್ತಿತ್ವ ಹೊಂದಿರುವವರು. ಎಷ್ಟರ ಮಟ್ಟಿಗೆ ಎಂದರೆ ಅವರು ಮಕ್ಕಳ ಬಳಿಯೂ ತಮ್ಮ ಪ್ರಸಿದ್ಧಿ, ಸಾಧನೆಗಳ ಬಗ್ಗೆ ಹೇಳಿಕೊಂಡವರಲ್ಲ. ಹೀಗಾಗಿ ಅವರ ಪುತ್ರಿ, ತನ್ನ ತಂದೆ ಯಾಕಿಷ್ಟು ಫೇಮಸ್ ಆಗಿದ್ದಾರೆ ಎಂದು ತಿಳಿದುಕೊಳ್ಳಲು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದರಂತೆ!

    ಇದನ್ನೂ ಓದಿ: ಲಾಕ್‌ಡೌನ್‌ನಲ್ಲಿ ಕ್ರೀಡಾಪಟುಗಳಿಂದ ನಳಪಾಕ

    ಈಗ ನಿವೃತ್ತ ಜೀವನ ನಡೆಸುತ್ತಿರುವ 57 ವರ್ಷದ ಮೈಕೆಲ್ ಜೋರ್ಡನ್ ಅವರ ಹಿರಿಯ ಪುತ್ರಿ ಜಾಸ್ಮಿನ್ ಜೋರ್ಡನ್ ಸಾಮಾಜಿಕ ಜಾಲತಾಣದ ಲೈವ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ನಾನು ಶಾಲೆಗೆ ಹೋಗುತ್ತಿರುವಾಗ ನನ್ನ ಸಹಪಾಠಿಗಳು ಮತ್ತು ಟೀಚರ್‌ಗಳು, ನಿನ್ನ ತಂದೆ ನಿಜಕ್ಕೂ ಅಸಾಧಾರಣವಾದವರು ಎಂದು ಹೇಳುತ್ತಿದ್ದರು. ಆದರೆ ನನಗೆ ತಿಳಿದ ಮಟ್ಟಿಗೆ ಅವರೆಂದೂ ನನ್ನ ತಂದೆಯನ್ನು ಭೇಟಿಯಾದವರಲ್ಲ. ಹಾಗಾದರೆ ಅವರಿಗೆ ಹೇಗೆ ನನ್ನ ತಂದೆಯ ಬಗ್ಗೆ ಗೊತ್ತು ಎಂದು ಯೋಚಿಸುತ್ತಿದ್ದೆ. ಕೊನೆಗೊಮ್ಮೆ ಗೂಗಲ್‌ನಲ್ಲಿ ಸರ್ಚ್ ಮಾಡಿ ನನ್ನ ತಂದೆಯ ಪ್ರಸಿದ್ಧಿ, ಸಾಧನೆಗಳ ಬಗ್ಗೆ ತಿಳಿದುಕೊಂಡೆ’ ಎಂದು 27 ವರ್ಷದ ಜಾಸ್ಮಿನ್ ಜೋರ್ಡನ್ ವಿವರಿಸಿದ್ದಾರೆ.

    ಇದನ್ನೂ ಓದಿ: ಮನೀಷ್ ಪಾಂಡೆಗೆ ಐವರು ಗೆಳತಿಯರು! ಯಾರವರು ಗೊತ್ತೇ?

    ಆ ಬಳಿಕ ನಾನು ತಂದೆಯ ಬಳಿ ಈ ಬಗ್ಗೆ ಹೇಳಿದಾಗ ಅವರು ಜೋರಾಗಿ ನಕ್ಕಿದ್ದರು. ನನ್ನ ಮಕ್ಕಳು ಎಲ್ಲರಂತೆ ಸಾಧಾರಣವಾಗಿ ಬದುಕನ್ನು ನಡೆಸಬೇಕು ಎಂಬುದು ತಂದೆಯ ಆಸೆಯಾಗಿತ್ತು. ಅದಕ್ಕಾಗಿ ನಾನವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜಾಸ್ಮಿನ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts