More

    Google ಸರ್ವರ್ ಡೌನ್‌; ಯೂಟ್ಯೂಬ್, ಜಿ-ಮೇಲ್‌, ಡ್ರೈವ್‌ ಕಾರ್ಯ ಸ್ಥಗಿತ..!

    ನವದೆಹಲಿ: ಸರ್ಚ್ ಇಂಜಿನ್ ದೈತ್ಯ ಗೂಗಲ್ ಸರ್ವರ್ ಡೌನ್ ಆಗಿದೆ. ಗೂಗಲ್ ಒಡೆತನದ ಯೂಟ್ಯೂಬ್, ಜಿ-ಮೇಲ್ ಗೂಗಲ್ ಡ್ರೈವ್​ನ ಸರ್ವರ್ ಡೌನ್ ಆಗಿದ್ದು ಬಳಕೆದಾರರು ಪರದಾಡಿದ್ದಾರೆ.

    ಇದನ್ನೂ ಓದಿ: ಸಾಕು ನಾಯಿ ಮಾಲೀಕರೆ ಎಚ್ಚರ; ನಿಮ್ಮ ಶ್ವಾನ ಎಲ್ಲಂದ್ರಲ್ಲಿ ಮಲವಿಸರ್ಜಿಸಿದ್ರೆ 10,000 ರೂ.ದಂಡ!
    ಯೂಟೂಬ್‌, ಡ್ರೈವ್, ಜಿ-ಮೇಲ್‌, ಡೋ, ಮೀಟ್‌, ಹ್ಯಾಂಗ್‌ಔಟ್ಸ್‌, ಡಾಕ್ಸ್, ಶೀಟ್‌ಗಳಂತಹ ಗೂಗಲ್‌ ಕುಟುಂಬದ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ಸಹ ಸ್ಥಗಿತಗೊಂಡಿವೆ ಎಂದು ವರದಿಯಾಗಿದೆ. ಟೆಕ್ ದೈತ್ಯ ಗೂಗಲ್‌ನ ಸೇವ ಸ್ಥಗಿತವಾದ ಹಿನ್ನೆಲೆ ಸೇವೆಯಲ್ಲಿನ ವ್ಯತ್ಯಯವು ಭಾರತದಲ್ಲಿ 1,500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದೆ.

    ಇದನ್ನೂ ಓದಿ:  ಮೀಸಲಾತಿ ವಿಚಾರದಲ್ಲಿ ಸರ್ಕಾರಕ್ಕೆ ಬಿಗ್ ರಿಲೀಫ್; ಪಂಚಮಸಾಲಿ ಮೀಸಲಾತಿಗಿಲ್ಲ ಅಡ್ಡಿ.. ಮಧ್ಯಂತರ ಆದೇಶ ತೆರವುಗೊಳಿಸಿದ ಹೈಕೋರ್ಟ್
    ಜಿ-ಮೇಲ್‌ ಸೈನ್ ಇನ್ ಪುಟದಲ್ ದೋಷವನ್ನು ತೋರಿಸುವ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟ್ಟರ್‌ನಲ್ಲಿ ಬಳಕೆದಾರರು ತಮ್ಮ ಪೋಸ್ಟ್ ಮಾಡಿದ್ದಾರೆ. ಇದರ ಬಗ್ಗೆ ಗೂಗಲ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. 502 ದೋಷಗಳು ಕಂಡು ಬಂದಿದ್ದು, ಸಾಮಾನ್ಯವಾಗಿ ಸರ್ವರ್ ಪ್ರತಿಕ್ರಿಯಿಸುತ್ತಿಲ್ಲ ಎಂದು ಪೋಸ್ಟ್‌ಗಳು ತಿಳಿಸಿವೆ. ಬಳಕೆದಾರರು ಈ ಸರ್ವರ್‌ ನಿಧಾನಗೊಂಡಿರುವ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿ ಟ್ವೀಟ್ಟರ್‌ನಲ್ಲಿ ಮೀಮ್‌ ಕ್ರಿಯೇಟ್‌ ಮಾಡಿದ್ದಾರೆ.

    ಹೆಣ್ಣು, ಹೊನ್ನು, ಮಣ್ಣು ಸಿಗಬೇಕು ಅಂದ್ರೆ ಪುಣ್ಯ ಬೇಕು; ಆನಂದ್ ಸಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts