More

    ‘ವೊಡಾಫೋನ್​ ಐಡಿಯಾ’ ಮೇಲೆ ಸರ್ಚಿಂಗ್​ ದೈತ್ಯ ‘ಗೂಗಲ್​​’ ಕಣ್ಣು; ಶೀಘ್ರವೇ ನಿರ್ಧಾರ ಪ್ರಕಟ?

    ನವದೆಹಲಿ: ಇತ್ತೀಚೆಗೆ ಫೇಸ್​ಬುಕ್,​ ರಿಲಯನ್ಸ್​ ಜಿಯೋ ಕಂಪನಿಯ ಶೇ.9.99 ಷೇರನ್ನು 5.7 ಬಿಲಿಯನ್​ ಡಾಲರ್​ (43,574 ಕೋಟಿ ರೂ.) ನೀಡಿ ಖರೀದಿ ಮಾಡಿತ್ತು. ಇದೀಗ ಸರ್ಚಿಂಗ್​ ದೈತ್ಯ ಗೂಗಲ್​ ಕೂಡ ಅದೇ ನಿಟ್ಟಿನಲ್ಲಿ ಸಾಗುವ ಬಗ್ಗೆ ಯೋಚನೆ ಮಾಡುತ್ತಿದೆ.

    ಜಾಗತಿಕ ತಂತ್ರಜ್ಞಾನದ ದೈತ್ಯನೆನಿಸಿಕೊಂಡಿರುವ ಗೂಗಲ್​ ವಡಾಫೋನ್​ ಐಡಿಯಾ ಟೆಲಿಕಾಂ ಕಂಪನಿಯ ಶೇ.5ರಷ್ಟು ಷೇರನ್ನು ಖರೀದಿ ಮಾಡಲು ನಿರ್ಧರಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

    ಇದನ್ನೂ ಓದಿ: ರಾಜಕೀಯ ಮುಖಂಡನ ಮಗನ ಮದುವೇಲಿ ನರ್ತಕಿಯಿಂದ ಭರ್ಜರಿ ಡ್ಯಾನ್ಸ್​; ಪೊಲೀಸರು ಮಾಡಿದ್ದೇನು?

    ವೊಡಾಫೋನ್​ ಐಡಿಯಾದ ಮಾರುಕಟ್ಟೆ ಮೌಲ್ಯ ಇಂದು (ಗುರುವಾರ) 16,724 ಕೋಟಿ ರೂ.ದಾಖಲಾಗಿದೆ. ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ವಡಾಫೋನ್​ ಐಡಿಯಾ ಮತ್ತು ಭಾರ್ತಿ ಏರ್​ಟೆಲ್​ಗೆ ಪ್ರತಿಸ್ಫರ್ಧಿಯಾಗಿ ಮುಕೇಶ್​ ಅಂಬಾನಿ ಒಡೆತನದ ರಿಲಯನ್ಸ್​ನಿಂದ ಜಿಯೋ ಲಗ್ಗೆ ಇಟ್ಟಿತ್ತು. ಕಡಿಮೆ ಬೆಲೆಯಲ್ಲಿ ಡೇಟಾ ಸೌಲಭ್ಯ ನೀಡಿ ಸಂಚಲನ ಮೂಡಿಸಿತ್ತು. ಈಗ ಜಿಯೋದಲ್ಲಿ ಫೇಸ್​ಬುಕ್​ ಹೂಡಿಕೆ ಮಾಡಿದ ಬೆನ್ನಲ್ಲೇ, ಗೂಗಲ್ ಕೂಡ ಅದೇ ನಿಟ್ಟಿನಲ್ಲಿ ಹೆಜ್ಜೆ ಇಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: 2500ರ ಗಡಿದಾಟಿದ ಕರೊನಾ ಸೋಂಕಿತರ ಸಂಖ್ಯೆ; ಒಂದೇ ದಿನದಲ್ಲಿ 53ಮಂದಿ ಡಿಸ್​ಚಾರ್ಜ್​

    ಗೂಗಲ್​ ವಲಯದಲ್ಲಿಯೇ ಕೆಲಸ ಮಾಡುವವರೇ ಈ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಯುಕೆಯ ಟೆಲಿಕಾಂ ಕಂಪನಿ ಮತ್ತು ಭಾರತದ ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಯ ಪಾಲುದಾರಿಕೆಯಲ್ಲಿ ಇರುವ ವೊಡಾ ಫೋನ್​ ಐಡಿಯಾ ಸದ್ಯ ತೀವ್ರವಾದ ಆರ್ಥಿಕ ಕುಸಿತ ಅನುಭವಿಸುತ್ತಿದೆ. ಇದೇ ಬೆನ್ನಲ್ಲೇ ಗೂಗಲ್ ಶೇ.5 ಷೇರು ಖರೀದಿಗೆ ಮುಂದಾಗಿದೆ. ಇದರ ಪ್ರಕ್ರಿಯೆಗಳು ಇನ್ನೂ ಪ್ರಾರಂಭಿಕ ಹಂತದಲ್ಲಿ ಇವೆ. ಶೀಘ್ರದಲ್ಲಿಯೇ ಈ ಬಗ್ಗೆ ನಿರ್ಧಾರ ಪ್ರಕಟಗೊಳ್ಳಬಹುದು ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts