More

    ಭಾರತದಲ್ಲಿ ಕೋವಿಡ್ ಅಟ್ಟಹಾಸ: ಗೂಗಲ್, ಮೈಕ್ರೋಸಾಫ್ಟ್ ಸಿಇಓಗಳ ಕಂಬನಿ, ಹೃದಯ ವಿದ್ರಾವಕ ಎಂದ ಸತ್ಯಾ ನಾದೆಲ್ಲ

    ಕ್ಯಾಲಿಪೋರ್ನಿಯಾ: ಭಾರತದಲ್ಲಿ ಉಂಟಾಗಿರುವ ಕೋವಿಡ್ ಭೀಕರ ಸಮಸ್ಯೆಗೆ ಜಾಗತಿಕ ಟೆಕ್ ದೈತ್ಯರಾದ ಗೂಗಲ್ ಸಿಇಒ ಸುಂದರ್ ಪಿಚೈ ಹಾಗೂ ಮೈಕ್ರೋಸಾಫ್ಟ್ ಸಿಇಓ ಸತ್ಯಾ ನಾದೆಲ್ಲ ಅವರು ಸ್ಪಂದಿಸಿ ಟ್ವೀಟ್ ಮಾಡಿದ್ದಾರೆ. ಭಾರತಕ್ಕೆ ಉಂಟಾಗಿರುವ ಈ ಸಂದಿಗ್ದ ಪರಿಸ್ಥಿತಿಯಲ್ಲಿ ನಾವು ಭಾರತಕ್ಕೆ ಅಗತ್ಯ ಸಹಾಯ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ.

    ಸುಂದರ್ ಪಿಚೈ ಅವರು ಟ್ವೀಟ್ ಮಾಡಿ, ಕೋವಿಡ್ ಎರಡನೇ ಅಲೆ ಭಾರತದಲ್ಲಿ ದ್ವಂಸಕಾರಿ ಪರಿಣಾಮವನ್ನುಂಟು ಮಾಡಿದೆ ಎಂಬುದನ್ನು ನೋಡಿ ಆತಂಕವಾಗಿದೆ. ಚಿಂತಿಸಬೇಡಿ, ನಾವು ನಿಮ್ಮೊಂದಿಗಿದ್ದೇವೆ. ಗೂಗಲ್ ಕಡೆಯಿಂದ 135 ಕೋಟಿ ರೂಪಾಯಿ ನೆರವನ್ನು ನೀಡುತ್ತಿದ್ದೇವೆ. ಯೂನಿಸೆಫ್ ಮೂಲಕ ಇದು ಅಗತ್ಯವಿರುವವರಿಗೆ ಬಳಕೆಯಾಗಲಿದೆ. ಗೂಗಲ್ ಕಡೆಯಿಂದ ಕೋವಿಡ್ ನಿಯಂತ್ರಿಸಲು ಹಾಗೂ ಅರಿವು ಮೂಡಿಸಲು ಏನೆಲ್ಲಾ ಮಾಡಬೇಕೋ ಅದನ್ನು ಮಾಡಲಾಗುತ್ತದೆ ಎಂದು ಭಾರತಕ್ಕೆ ದೈರ್ಯ ನೀಡಿದ್ದಾರೆ.

    ಇನ್ನು ಮೈಕ್ರೋಸಾಫ್ಟ್ ಸಿಇಓ ಸತ್ಯಾ ನಾದೆಲ್ಲ ಅವರು, ಪ್ರಸ್ತುತ ಭಾರತದ ಕೋವಿಡ್ ಪರಿಸ್ಥಿತಿ ನೋಡಿದರೆ ಹೃದಯ ವಿದ್ರಾವಕ ಎನಿಸುತ್ತದೆ. ಅಮೆರಿಕ ಭಾರತಕ್ಕೆ ಅಗತ್ಯ ಸಹಾಯ ಸಹಕಾರ ನೀಡುವುದಕ್ಕೆ ಮುಂದೆ ಬಂದಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಕೋವಿಡ್ ತಡೆಗಟ್ಟಲು ಹಾಗೂ ಈ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಮೈಕ್ರೊಸಾಫ್ಟ್ ಕಡೆಯಿಂದ ಎಲ್ಲ ಅಗತ್ಯ ಸಹಾಯ ಸಹಕಾರವನ್ನು ನೀಡುವುದಾಗಿ ಟ್ವೀಟ್ ಮಾಡಿ ಘೋಷಿಸಿದ್ದಾರೆ.

    ಇನ್ನು ಭಾರತದಲ್ಲಿ ಕೋವಿಡ್ ಎರಡನೇ ಅಲೆ ಜೋರಾಗಿದೆ. ಭಾನುವಾರ ಸುಮಾರು 3.5 ಲಕ್ಷ ಸೋಂಕಿತ ಪ್ರಕರಣಗಳು ವರದಿಯಾಗಿವೆ. 2800 ಜನ ಮಾರಕ ಸೋಂಕಿಗೆ ಮೃತಪಟ್ಟಿದ್ದಾರೆ.

    ಕಾಂಡೋಮ್ ಗುಣಮಟ್ಟ ಪರೀಕ್ಷೆಗಿಳಿದ ನಟಿ ರಾಕುಲ್ ಪ್ರೀತ್!

    ಮಾರಣಹೋಮಕ್ಕೆ ಸಿದ್ಧರಾಗಿದ್ದ ನಕ್ಸಲರು! ರೈಲು ಹಳಿ ಸ್ಫೋಟ; ಹೌರಾ- ಮುಂಬೈ ಸ್ತಬ್ಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts