More

    ಗೂಡ್ಸ್ ರೈಲಿನಲ್ಲಿ ಬೆಳಗಾವಿಗೆ ಔಷಧ

    ಬೆಳಗಾವಿ: ಲಾಕ್‌ಡೌನ್‌ನಿಂದ ಔಷಧ ಸಿಗದೆ ಸಮಸ್ಯೆ ಎದುರಿಸುತ್ತಿರುವವರಿಗೆ ತಕ್ಷಣ ಸ್ಪಂದಿಸಿರುವ ರೈಲ್ವೆ ಸಚಿವ ಸುರೇಶ ಅಂಗಡಿ, ಮಂಗಳವಾರ ಗೂಡ್ಸ್ ರೈಲಿನಲ್ಲಿ ಪುಣೆಯಿಂದ ಬೆಳಗಾವಿಗೆ ಔಷಧ ತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಬೆಳಗಾವಿ ನಗರದ 5 ವರ್ಷದ ಮಗುವಿಗೆ ಮಹಾರಾಷ್ಟ್ರದ ಪುಣೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ, ಲಾಕ್‌ಡೌನ್‌ನಿಂದಾಗಿ ಪಾಲಕರಿಗೆ ಪುಣೆಯಿಂದ ಔಷಧ ತರಿಸಿಕೊಳ್ಳುವುದು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ರೈಲ್ವೆ ಸಚಿವ ಸುರೇಶ ಅಂಗಡಿ ಅವರ ಗೃಹ ಕಚೇರಿಗೆ ಪಾಲಕರು ತೆರಳಿ ಮನವಿ ಸಲ್ಲಿಸಿದ್ದರು.

    ಕೋರಿಕೆಗೆ ಸ್ಪಂದಿಸಿದ ಸಚಿವರು, ಪುಣೆಯಿಂದ ಬೆಳಗಾವಿಗೆ ಬರುತ್ತಿದ್ದ ಗೂಡ್ಸ್ ರೈಲಿನಲ್ಲಿ ಔಷಧ ಕಳುಹಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಆದೇಶಿಸಿದ್ದರು. ರೈಲ್ವೆ ಅಧಿಕಾರಿಗಳು ತಕ್ಷಣ ಔಷಧ ತರಿಸಿಕೊಂಡು ರೈಲ್ವೆ ಚಾಲಕನಿಗೆ ಔಷಧ ಕೊಟ್ಟು ಬೆಳಗಾವಿಗೆ ತಲುಪಿಸುವಂತೆ ತಿಳಿಸಿದ್ದರು. ಮಂಗಳವಾರ ಸಂಜೆ ಬೆಳಗಾವಿಗೆ ಗೂಡ್ಸ್ ರೈಲು ಆಗಮಿಸಿದ್ದು, ಪಾಲಕರಿಗೆ ಔಷಧ ತಲುಪಿಸಿದೆ. ಸಚಿವರ ಈ ಕಾರ್ಯಕ್ಕೆ ನಗರದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts