ಭೋಪಾಲ್: 16 ಕೋಚುಗಳ ಗೂಡ್ಸ್ ರೈಲೊಂದು ಮಧ್ಯಪ್ರದೇಶದ ಅನುಪ್ಪುರ್ ಬಳಿ ಹಳಿತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ಕಲ್ಲಿದ್ದಲು ತುಂಬಿದ್ದ ಟ್ರೈನ್ ಛತ್ತೀಸ್ಗಢದ ಕೊರ್ಬಾದಿಂದ ಬರುತ್ತಿತ್ತು.
ಪ್ರಾಥಮಿಕ ವರದಿಯ ಪ್ರಕಾರ ಅಲಾನ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೇ ಮೇಲಿನ ಹಳಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಅದರಿಂದ ರೈಲು ಹಳಿತಪ್ಪಿದ ಅದರ ಅನೇಕ ಕೋಚ್ಗಳು ನದಿಗೆ ಉರುಳಿವೆ. ಈ ಬಗ್ಗೆ ಅಧಿಕಾರಿಗಳೂ ಕೂಡ ಮಾಹಿತಿ ನೀಡಿದ್ದಾರೆ.
ಈವರೆಗೂ ಯಾವುದೇ ಹಾನಿಯ ಕುರಿತು ವರದಿ ಆಗಿಲ್ಲ ಮತ್ತು ರಕ್ಷಣಾ ಕಾರ್ಯ ಸ್ಥಳದಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನೇಕ ಕೋಚ್ಗಳು ನದಿಗೆ ಉರುಳಿವೆ. ಇನ್ನು ಅನೇಕ ಕೋಚ್ಗಳು ಅಂಟಿಕೊಂಂತೆ ಹಾಗೆಯೇ ನೇತಾಡುತ್ತಿವೆ. ಘಟನೆಯಿಂದ ಟನ್ಗಟ್ಟಲೇ ಕಲ್ಲಿದ್ದಲು ನದಿಗೆ ಸುರಿದು ನಾಶವಾಗಿದೆ.
ಅಂದಹಾಗೆ ಗೂಡ್ಸ್ ಟ್ರೈನ್ ಮಧ್ಯಪ್ರದೇಶದ ಕಾಟ್ನಿ ಪ್ರದೇಶಕ್ಕೆ ತೆರಳುತ್ತಿತ್ತು. (ಏಜೆನ್ಸೀಸ್)
‘ನನ್ನ-ಸುಮಲತಾರ ಅಶ್ಲೀಲ ವಿಡಿಯೋ ಮಾಡಲು ಹೊರಟಿದ್ರು ಕುಮಾರಸ್ವಾಮಿ, ಅಂಥ ಕೊಳಕು ಮನಸು ಅವರದ್ದು’
ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..
ಪ್ರಿಯಕರನ ಮನೆಯಲ್ಲಿ ಯುವತಿ ಶವ ಪತ್ತೆ! ಮೃತಳ ಪೋಷಕರಿಂದ ನಡೆದೇ ಹೋಯ್ತು ಘೋರ ದುರಂತ