More

    ಸ್ವಯಂವರ ಪಾರ್ವತಿ ಯಾಗಕ್ಕೆ ಉತ್ತಮ ಸ್ಪಂದನೆ

    ಬಳ್ಳಾರಿ : ಇಲ್ಲಿನ ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದಲ್ಲಿ ವಿಜಯವಾಣಿ-ದಿಗ್ವಿಜಯ 24*7 ಸುದ್ದಿವಾಹಿನಿ ಹಾಗೂ ಕನ್ನಡ ಮ್ಯಾಟ್ರಿಮೊನಿ ಸಹಯೋಗದಲ್ಲಿ ಶನಿವಾರ ನಡೆದ ಸ್ವಯಂವರ ಪಾರ್ವತಿ ಯಾಗಕ್ಕೆ ಉತ್ತಮ ಸ್ಪಂದನೆ ದೊರಕಿತು.

    ಜಿಲ್ಲೆಯ ವಿವಿಧ ಭಾಗಗಳಿಂದ ಪಾಲಕರು ಆಗಮಿಸಿ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ನಮ್ಮ ಮಕ್ಕಳ ಆಯ್ಕೆಗೆ ಅನುಸಾರವಾಗಿ ವಧು-ವರರ ಆಯ್ಕೆಯ ಕಸರತ್ತು ನಡೆಯಿತು.

    ಬೆಳಗ್ಗೆ 9 ಗಂಟೆಯಿಂದ ಸ್ವಯಂವರ ಪಾರ್ವತಿಯಾಗದಲ್ಲಿ ಪಾಲ್ಗೊಂಡ ಪಾಲಕರು, ವಧು-ವರರು ನೋಂದಣಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಾವಗಳಿಗಳು ಕಂಡು ಬಂದವು. ಸ್ವಯಂವರ ಪಾರ್ವತಿಯಾಗದಲ್ಲಿ ಪಾಲ್ಗೊಂಡಿದ್ದವರು ಜಾತಕವನ್ನು ತರುವ ಮೂಲಕ ಭಾವಿ ವಧು-ವರರು, ಅವರ ಪಾಲಕರು ಹೊಸ ಸಂಬಂಧವನ್ನು ಹುಡುಕುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದರು.

    ಮಕ್ಕಳ ಕಂಕಣಭಾಗ್ಯ ಕೂಡಿಬರಲಿ ಎಂದು ಪಾಲಕರು ಸ್ವಯಂವರ ಮಂತ್ರ ಪಠಿಸುವ ಮೂಲಕ ಗಮನ ಸೆಳೆದರು. ಈ ಯಾಗದಿಂದ
    ಪೂರ್ವಜನ್ಮದ ದೋಷಗಳು, ಮದುವೆ ವಿಳಂಬ, ಸಂಸಾರದಲ್ಲಿ ನೆಮ್ಮದಿ ಇಲ್ಲದಿರುವವರು ಸಮಸ್ಯೆ ಪರಿಹಾರಗೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡರು.

    ಪ್ರಧಾನ ಅರ್ಚಕ ಬಿ.ಲಕ್ಷ್ಮಿನಾರಾಯಣ ಅವರ ನೇತೃತ್ವದಲ್ಲಿ ಬೆಳಗ್ಗೆ 9 ಗಂಟೆಗೆ ಪ್ರಥಮ ವಂದಿತ ಗಣೇಶನ ಪೂಜೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಪುಣ್ಯಾಹ ವಾಚನ, ನವಗ್ರಹ ಶಾಂತಿ, ಸ್ವಯಂವರ ಪಾರ್ವತಿ ಮಂತ್ರ ಪಠಣ ಹಾಗೂ ವಿಧ್ಯುಕ್ತ ಹೋಮಕ್ಕೆ ಸುವಸ್ತುಗಳ ಅರ್ಪಣೆ ಕಾರ್ಯ ಜರುಗಿದವು. ಮಧ್ಯಾಹ್ನ 12.30ರ ಸುಮಾರಿಗೆ ಪೂರ್ಣಾಹುತಿ, ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.

    ಜಿಲ್ಲೆಯ ಕಂಪ್ಲಿ, ಸಂಡೂರು, ಕುರುಗೋಡು ಸೇರಿದಂತೆ ಹೊಸಪೇಟೆ, ಕೊಪ್ಪಳ ಭಾಗದಿಂದಲೂ ವಧು-ವರರು ಹಾಗೂ ಪಾಲಕರು ಆಗಮಿಸಿದ್ದರು. ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ರೈತ ಮುಖಂಡ ಪುರುಷೋತ್ತಮಗೌಡ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಬಸವರಾಜ್, ಉಪಾಧ್ಯಕ್ಷ ಎಂ.ವಾಮದೇವ, ಕಾರ್ಯದರ್ಶಿ ವೈ.ಡಿ.ಯರಣ್ಣ, ದೇವಸ್ಥಾನದ ಅರ್ಚಕ ವಿನೋದ್ ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts