More

    ಸೇತುಬಂಧ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ

    ವಿಜಯವಾಣಿ ಸುದ್ದಿಜಾಲ ಲಕ್ಷೆ್ಮೕಶ್ವರ

    8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ಮನೆ ಪಾಠ ಬೋಧಿಸುವ ಸೇತುಬಂಧ ಕಾರ್ಯ ಕ್ರಮ ಸೋಮವಾರ ಪ್ರಾರಂಭವಾಗಿದ್ದು, ತಾಲೂಕಿನಲ್ಲಿ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

    ಡಿಎಸ್​ಇಆರ್​ಟಿಯ ಈ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ತಾಲೂಕಿನ ಬಿಇಒ ಆರ್.ಎಸ್. ಬುರಡಿ ಮಾರ್ಗದರ್ಶನದಲ್ಲಿ ಬಿಆರ್​ಸಿ, ಸಿಆರ್​ಸಿ, ಮುಖ್ಯ ಶಿಕ್ಷಕರು, ಸಹಶಿಕ್ಷಕರು ಶ್ರಮಿಸಿದ್ದರಿಂದ ಮಕ್ಕಳು ಉತ್ಸಾಹದಿಂದ ಪಾಠ ಆಲಿಸಿದರು. ಚಂದನ ವಾಹಿನಿಯಲ್ಲಿ ಪ್ರತಿದಿನ ಬೆಳಗ್ಗೆ 9.30ರಿಂದ 5.30ರವರೆಗೆ ವಿವಿಧ ತರಗತಿ ಮತ್ತು ವಿಷಯಗಳ ಕುರಿತಾದ 30 ನಿಮಿಷದ ಪಾಠ ಬೋಧನೆ ಮಾಡಲಾಗುತ್ತದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವೇಳಾಪಟ್ಟಿ ಸಮೇತ ವ್ಯಾಟ್ಸ್​ಆಪ್ ಮೂಲಕ ಹಾಗೂ ಪಾಲಕರಿಗೆ ಕರೆ ಮಾಡಿ ತಿಳಿಸಲಾಗಿತ್ತು. ಜೊತೆಗೆ ಆಯಾ ಗ್ರಾ.ಪಂ.ಗಳಲ್ಲಿ ಢಂಗುರ ಸಾರುವ ಮೂಲಕ ಪ್ರಚಾರ ಮಾಡಲಾಗಿತ್ತು.ಪರಿಣಾಮ ಮೊದಲ ದಿನವೇ ತಾಲೂಕಿನ ನೂರಾರು ಮಕ್ಕಳು ಟಿವಿ, ಮೊಬೈಲ್, ಕಂಪ್ಯೂಟರ್ ಸಹಾಯದಿಂದ ಪಾಠ ಕೇಳಿ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಬಿಆರ್​ಸಿ ಈಶ್ವರ ಮೇಡ್ಲೇರಿ ವಿಜಯವಾಣಿಗೆ ತಿಳಿಸಿದ್ದಾರೆ.

    ಅಭ್ಯಾಸದಿಂದ ದೂರ ಉಳಿದಿದ್ದ ನಮಗೆ ಚಂದನ ಟಿವಿ ಮೂಲಕ ಪಾಠ ಬೋಧಿಸಿದ್ದು ಖುಷಿ ತಂದಿದೆ. ಇದರಿಂದ ಮುಂದೆ ಬರಲಿರುವ ಪರೀಕ್ಷೆ ಸಮಯದಲ್ಲಿ ಒತ್ತಡ ಕಡಿಮೆಯಾಗಲಿದೆ. ಪಾಠ ಕೇಳಲು ಶಿಕ್ಷಕರು ಪ್ರೇರಣೆ ನೀಡಿದ್ದರು ಎಂದು ಮೊದಲ ದಿನದ ಪಾಠ ಕೇಳಿದ ವಿನೂತಾ ಕನವಳ್ಳಿ, ರಾಜು ಲಮಾಣಿ, ವಿಜಯಲಕ್ಷ್ಮೀ ದೊಡ್ಡಮನಿ, ಅಶ್ವಿನಿ ನಡಗೇರ, ಇತರರು ಅನಿಸಿಕೆ ಹಂಚಿಕೊಂಡರು.

    ಕರೊನಾ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಆಸಕ್ತಿ, ಗುಣಮಟ್ಟ ಕಡಿಮೆಯಾಗಬಾರದು. ಅವರ ಅಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಇಲಾಖೆ ಕೈಗೊಂಡ ಕಾರ್ಯಕ್ಕೆ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಲೂಕಿನ ಎಲ್ಲ ಶಿಕ್ಷಕರು ಜವಾಬ್ದಾರಿಯಿಂದ ಮನೆಮನೆಗೆ ತೆರಳಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಮಕ್ಕಳ ಪಾಲಕರ ಆಸಕ್ತಿ ಹರ್ಷ ತಂದಿದೆ. ಶಾಲೆ ಪ್ರಾರಂಭವಾಗುವವರೆಗೂ ನಡೆಯುವ ಈ ಪ್ರಕ್ರಿಯೆಯಲ್ಲಿ ಮಕ್ಕಳು ತಪ್ಪದೇ ಪಾಲ್ಗೊಳ್ಳಬೇಕು. ಅನಿವಾರ್ಯ ಕಾರಣಗಳಿಂದ ಪಾಠ ತಪ್ಪಿಸಿಕೊಂಡಿದ್ದರೆ ಯೂಟ್ಯೂಬ್​ನಲ್ಲಿ ನೋಡಬಹುದು.

    | ಆರ್.ಎಸ್. ಬುರಡಿ ಬಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts