ಸಂಡೂರು: ತಾಯಂದಿರು ಮತ್ತು ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಪೌಷ್ಟಿಕ ಆಹಾರ ಸೇವನೆ ಆಗತ್ಯ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸಿಕೊಡಿ ಇಲ್ಲಿ ಶೇಂಗಾ ಚಿಕ್ಕಿ, ಕಿಚಿಡಿಯಂತಹ ಪೌಷ್ಟಿಕ ಆಹಾರ ಸಿಗುತ್ತದೆ ಎಂದು ಪುರಸಭೆ ಸದಸ್ಯ ನಾಗರಾಜ್ ನಾಯ್ಕ ಹೇಳಿದರು.
ಇದನ್ನೂ ಓದಿ: ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ತಾಲೂಕಿನ ತೋರಣಗಲ್ ರೈಲ್ವೆ ನಿಲ್ದಾಣ ಘೋರ್ಪಡೆನಗರದ ಒಂದನೇ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಯಿಂದ ರಾಷ್ಟ್ರೀಯ ಪೊಷಣ ಮಾಸ ಅಭಿಯಾನದಡಿ ಪೌಷ್ಟಿಕ ಆಹಾರ ಕುರಿತು ಅರಿವಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೆಪ್ಟೆಂಬರ್ ತಿಂಗಳು ಪಂಚ ಸೂತ್ರಗಳು ಹಾಗೂ ಪೌಷ್ಟಿಕ ಆಹಾರ ಕುರಿತು ಅರಿವು, ಆರೋಗ್ಯ ಇಲಾಖೆ ಮೂಡಿಸುತ್ತದೆ. ದೇಹಕ್ಕೆ ಹೆಚ್ಚು ಪ್ರೋಟೀನ್, ಮಿಟಮಿನ್, ಕಾರ್ಬೋಹೈಡ್ರೇಟ್, ಖನಿಜಾಂಶಗಳು ಹಾಗೂ ನಾರು ಮತ್ತು ಕೊಂಬ್ಬಿನಾಂಶ ಅವಶ್ಯ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪೌಷ್ಟಿಕ ಆಹಾರದ ಅವಶ್ಯಕತೆ ಇದೆ. ಗರ್ಭಿಣಿಯರು, ಮಕ್ಕಳ ತಾಯಂದಿರು, ಮಕ್ಕಳಿಗೆ ರಕ್ತಹೀನತೆ ದೂರಮಾಡಲು ಹೆಚ್ಚು ಪೋಷಕಾಂಶ ಇರುವ ಪದಾರ್ಥಗಳನ್ನು ಸೇವಿಸಿ.
ಮಕ್ಕಳ ಉತ್ತಮ ಪೌಷ್ಟಿಕ ಆಹಾರ ಕುರಿತು ಕರಪತ್ರ ಬಿಡುಗಡೆ ಮಾಡಿದರು. ಮಕ್ಕಳಿಗೆ ಅನ್ನ ಪ್ರಾಶನ್ನ ಮತ್ತು ಗರ್ಭಿಣಿಯರಿಗೆ ಸೀಮಂತ ಕಾರ್ಯ ಹಾಗೇ ಮೊಟ್ಟೆಗಳ ವಿತರಣೆ ನಡೆಯಿತು. ಶಾಲೆಯ ಮುಖ್ಯ ಶಿಕ್ಷಕಿ ಮಂಗಮ್ಮ, ಸಹ ಶಿಕ್ಷಕ ಪ್ರಕಾಶ್, ಅಂಗನವಾಡಿ ಕಾರ್ಯಕರ್ತೆ ಮಾಬುನ್ನಿ, ಪೀರಮ್ಮಇದ್ದರು.