More

    ಹಲ್ಲು, ವಸಡು ಸ್ವಚ್ಛವಾಗಿದ್ದರೆ ಉತ್ತಮ ಆರೋಗ್ಯ

    ಚಿಕ್ಕಮಗಳೂರು: ಹಲ್ಲು ಮತ್ತು ವಸಡು ಸ್ವಚ್ಛವಾಗಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಏಕೆಂದರೆ ದಂತಪಂಕ್ತಿ ಚೆನ್ನಾಗಿದ್ದರೆ ಮುಖದ ಸೌಂದರ್ಯ ಹೆಚ್ಚುತ್ತದೆ. ಜತೆಗೆ ಆಹಾರವನ್ನು ಸರಿಯಾಗಿ ಅಗಿದು ತಿನ್ನಬಹುದು ಎಂದು ದಂತವೈದ್ಯ ಡಾ. ಎ.ಎನ್.ನಿಶಾಂತ್ ಹೇಳಿದರು.

    ನಗರ ಹೊರವಲಯದ ಹಿರೇಕೊಳಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಸವೇಶ್ವರ ಡೆಂಟಲ್ ಸ್ಟುಡಿಯೋ ಮತ್ತು ಚಿಕ್ಕಮಗಳೂರು ಇನ್ನರ್‌ವ್ಹೀಲ್ ಕ್ಲಬ್‌ನಿಂದ ಆಯೋಜಿಸಿದ್ದ ದಂತ ತಪಾಸಣಾ ಉಚಿತ ಶಿಬಿರದಲ್ಲಿ ಮಾತನಾಡಿದರು.
    ಮನುಷ್ಯನ ದೇಹದಲ್ಲಿ ದಂತಪಂಕ್ತಿಗೆ ವಿಶೇಷ ಸ್ಥಾನವಿದೆ. ಬಹಳಷ್ಟು ಜನರಿಗೆ ಹಲ್ಲುಗಳ ಸಮಸ್ಯೆ ಸಾಮಾನ್ಯ. ಆದರೆ ಅದನ್ನು ನಿರ್ಲಕ್ಷಿಸಿದರೆ ದೊಡ್ಡ ತೊಂದರೆ ಎದುರಿಸುತ್ತಾರೆ ಎಂದು ಹೇಳಿದರು.
    ಪ್ರತಿದಿನ ವಸಡು ಮತ್ತು ಹಲ್ಲುಗಳನ್ನು ಸರಿಯಾಗಿ ಸ್ವಚ್ಛವಾಗಿಸಬೇಕು. 5 ನಿಮಿಷ ಮೇಲೆ-ಕೆಳಗೆ ಬ್ರಶ್ ಮಾಡಬೇಕು. ಅಡ್ಡ ಉಜ್ಜಿದರೆ ಹಲ್ಲುಗಳು ಸವೆಯುತ್ತವೆ. ಸೇವಿಸಿದ ಆಹಾರದ ಕಣಗಳು ಬ್ರಶ್ ಮಾಡುವುದರಿಂದ ಹೊರ ತೆಗೆಯಬಹುದು. ಆದರೆ ಅತಿಸೂಕ್ಷ್ಮ ಬ್ಯಾಕ್ಟೀರಿಯಾಗಳು ವಸಡಿನ ಸಂದುಗಳಲ್ಲಿ ಸೇರಿಕೊಂಡಿರುತ್ತದೆ. ಏನನ್ನಾದರೂ ತಿಂದ ಮೇಲೆ ಅರ್ಧ ನಿಮಿಷ ಬಾಯಿಮುಕ್ಕಳಿಸಿ ಉಗಿಯುವುದರಿಂದ ಬ್ಯಾಕ್ಟೀರಿಯಾಗಳಿಂದ ರಕ್ಷಣೆ ಪಡೆಯಬಹುದು ಎಂದು ಮಾಹಿತಿ ನೀಡಿದರು.
    ವಸಡು ಹಲ್ಲಿನ ವ್ಯತ್ಯಾಸ, ಹಲ್ಲು ಉಬ್ಬು, ವಕ್ರದಂತ, ವಸಡಿನ ಸಮಸ್ಯೆ ಬಹಳಷ್ಟು ಜನರಲ್ಲಿರುತ್ತದೆ. ಹಲ್ಲಿನ ಸುತ್ತ ಮೂಳೆ ಮತ್ತು ವಸಡಿನ ಪ್ರಮಾಣ ಸರಿಯಾಗಿ ಇಲ್ಲದಿದ್ದರೆ ತೊಂದರೆ ನಿಶ್ಚಿತ. ಮೂಳೆ ದಪ್ಪವಾಗಿದ್ದರೆ, ವಕ್ರ ಇದ್ದರೆ ಹಲ್ಲುಜ್ಜುವಾಗ ಎಲ್ಲ ಕಡೆ ಬ್ಲಶ್ ತಲುಪಲು ಸಾಧ್ಯವಾಗುವುದಿಲ್ಲ. ಆಗಲೇ ದಂತ ಸಮಸ್ಯೆ ಪ್ರಾರಂಭವಾಗುತ್ತದೆ ಎಂದು ಹೇಳಿದರು.
    ದಂತ ತಜ್ಞೆ ಡಾ. ರಾಶಿ ನಿಶಾಂತ್ ಮಾತನಾಡಿ, ಬಾಯಿಯ ದುರ್ಗಂಧ, ಹಲ್ಲಿನ ಮೇಲೆ ಕಪ್ಪುಚುಕ್ಕೆ, ವಕ್ರವಾಗಿ ಬೆಳೆದಿರುವ ಹಲ್ಲುಗಳನ್ನು ಸರಿಪಡಿಸಲು ಸಾಧ್ಯವಿದೆ. ಆರಂಭದಲ್ಲೇ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದರೆ ಮುಂಬರುವ ಸಮಸ್ಯೆಗಳಿಂದ ಪಾರಾಗಬಹುದು ಎಂದರು.
    ಇನ್ನರ್‌ವ್ಹೀಲ್ ಅಸೋಸಿಯೇಷನ್ ಕೌನ್ಸಿಲ್ ಸದಸ್ಯೆ ಕವಿತಾ ನಿಯಾತ್ ದಂತ ತಪಾಸಣಾ ಶಿಬಿರ ಉದ್ಘಾಟಿಸಿದರು. ಚಿಕ್ಕಮಗಳೂರು ಇನ್ನರ್‌ವ್ಹೀಲ್ ಅಧ್ಯಕ್ಷೆ ಅಶ್ವಿನಿ ಕಿರಣ್, ಕಾರ್ಯದರ್ಶಿ ಶರ್ಮಿಳಾ ಶಶಿಧರ್, ಖಜಾಚಿ ದೀಪಾ ಸಂಜಯ್, ರೂಪಾ ರವಿ, ನಿಖಿತಾ ಜೈನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts