More

    ಖುಷಿಯಿಂದ ಪ್ರಯಾಣ ಮಾಡೋಣ ಬನ್ನಿ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲು ಹೊಸ ಅವತಾರದಲ್ಲಿ ಹಳಿಗಳ ಮೇಲೆ ಬರಲು ಸಜ್ಜಾಗಿದೆ.

    2018ರಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪ್ರಾರಂಭಿಸಿದ್ದು, 10 ವರ್ಷ ಪೂರೈಸಿದ ನಂತರ ದಕ್ಷಿಣ ಭಾರತದ ಏಕೈಕ ಐಷಾರಾಮಿ ರೈಲನ್ನು 2020ರ ಜನವರಿಯಲ್ಲಿ ಐಆರ್​ಸಿಟಿಸಿಗೆ ಹಸ್ತಾಂ

    ತರಿಸಲಾಯಿತು. ರೈಲಿನ ಮಾಲೀಕತ್ವವು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯದು. ರೈಲ್ವೆ ಸಚಿವಾಲಯ ಅಡಿ ಬರುವ ಐಆರ್​ಸಿಟಿಸಿ ಈ ಐಷಾರಾಮಿ ರೈಲಿನ ಮಾರ್ಕೆಟಿಂಗ್ ಮತ್ತು ಕಾರ್ಯಾಚರಣೆ ನಿರ್ವಹಿಸಲಿದೆ.

    ಪ್ರವಾಸಿಗರು ಸುಖವಾಗಿ ಪ್ರಯಾಣಿಸಲು ರೈಲು ಈಗ ಹೊಸ ವೈಶಿಷ್ಟ್ಯಗಳ ಐಷಾರಾಮಿ ಪೀಠೋಪಕರಣ, ಸೊಗಸಾದ ಪರದೆ, ನವೀಕರಣವಾದ ರೂಮು ಹಾಗೂ ಶೌಚಗೃಹವನ್ನು ಹೊಂದಿದೆ. ಅಂತಾರಾಷ್ಟ್ರೀಯ ಬ್ರ್ಯಾಂಡ್​ಗಳ ಹಾಸಿಗೆಗಳು, ಪ್ರಯಾಣದಲ್ಲಿ ಮನೋರಂಜನೆ ಒದಗಿಸಲು ಎಲ್​ಇಡಿ ಟಿವಿ ಜತೆಗೆ ನೆಟ್​ಫ್ಲಿಕ್ಸ್, ಅಮೆಜಾನ್, ಹಾಟ್​ಸ್ಟಾರ್ ಸಂಪರ್ಕ ಒದಗಿಸಿದೆ. ಪ್ರವಾಸಿಗರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮರಾ ಮತ್ತು ಅಗ್ನಿಶಾಮಕ ಸುರಕ್ಷತೆ ಸಿಗಲಿದೆ.

    ಅನುಭವಿ ಬಾಣಸಿಗರು ಸೂಚಿಸಿರುವ ಅಂತಾರಾಷ್ಟ್ರೀಯ ಮತ್ತು ದೇಶೀಯ ಖಾದ್ಯಗಳ ಮೆನು, ಜತೆಗೆ ಮನೆ ಮದ್ಯ ಮತ್ತು ಬಿಯರ್​ಗಳು ಪ್ಯಾಕೇಜ್​ನಲ್ಲಿ ಸೇರಿದೆ. ಅತಿಥಿಗಳು ಪ್ರಯಾಣದಲ್ಲಿ ಆರಾಮದಾಯಕವಾಗಿರಲು, ರೈಲಿನಲ್ಲಿ ಸ್ಪಾ ಸೌಕರ್ಯ ಇದೆ. ಜತೆಗೆ ವ್ಯಾಯಾಮಕ್ಕಾಗಿ ವಿಶೇಷ ಜಿಮ್ ಯಂತ್ರಗಳನ್ನು ಸಹ ಇರಿಸಲಾಗಿದೆ. ಐಆರ್​ಸಿಟಿಸಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ವಿವಿಧ ಪ್ರವಾಸಿ ಸ್ಥಳಗಳನ್ನು ಒಳಗೊಂಡ 3 ಪ್ರವಾಸಗಳನ್ನು ಆಯೋಜಿಸಲು ಯೋಚಿಸಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ವಿವಿಧ ಸ್ಥಳಗಳನ್ನು ಒಳಗೊಂಡಂತೆ ಬೆಂಗಳೂರಿನಿಂದ ಹೊರಟು ಬೆಂಗಳೂರಿಗೆ ಮರಳುವ ಮೂರು ಪ್ರವಾಸಗಳನ್ನು ವಿಶೇಷವಾಗಿ ಆಯೋಜಿಸಿದೆ.

    ಹೆಮ್ಮೆಯ ಕರ್ನಾಟಕ: 6 ರಾತ್ರಿ / 7 ಹಗಲು. ಈ ಪ್ರವಾಸವು ಬಂಡೀಪುರ ರಾಷ್ಟ್ರೀಯ ಉದ್ಯಾನ, ಮೈಸೂರು, ಹಳೇಬೀಡು, ಚಿಕ್ಕಮಗಳೂರು, ಐಹೊಳೆ, ಪಟ್ಟದಕಲ್, ಹಂಪಿ ಮತ್ತು ಗೋವಾವನ್ನು ಒಳಗೊಂಡಿರುತ್ತದೆ.

    ದಕ್ಷಿಣ ಆಭರಣ: 6 ರಾತ್ರಿ / 7 ಹಗಲು. ಈ ಪ್ರವಾಸವು ಮೈಸೂರು, ಹಂಪಿ, ಮಹಾಬಲಿಪುರಂ, ತಂಜಾವೂರು, ಚೆಟ್ಟಿ ನಾಡ್, ಕುಮಾರಕೋಮ್ ಕೊಚ್ಚಿನ್​ಗಳನ್ನು ಒಳಗೊಂಡಿದೆ.

    ಕರ್ನಾಟಕದ ಒಂದು ಮಿನುಗು ನೋಟ: ಬಂಡಿಪುರ, ಮೈಸೂರು ಮತ್ತು ಹಂಪಿಯನ್ನು ಒಳಗೊಂಡ 3 ರಾತ್ರಿ / 4 ದಿನಗಳ ಪ್ರವಾಸ.

    ಈ ಐಷಾರಾಮಿ ರೈಲು ಪ್ರವಾಸದ ವೆಚ್ಚವು ಎಲ್ಲ ಊಟ ಮತ್ತು ಮನೆ ವೈನ್/ಮದ್ಯ, ಸ್ಥಳೀಯ ಸ್ಥಳಗಳಿಗೆ ಭೇಟಿ ನೀಡಲು ಹವಾನಿಯಂತ್ರಿತ ಬಸ್​ಗಳು, ಪ್ರವಾಸಿ ಮಾರ್ಗದರ್ಶಿ, ಸ್ಮಾರಕಗಳ ಪ್ರವೇಶ ಶುಲ್ಕ ಪ್ರವಾಸಗಳ ವಿವರದಂತಿದೆ. ಭಾರತ ಸರ್ಕಾರದ ಆಶಯದಂತೆ ದೇಶೀಯ ಪ್ರವಾಸೋದ್ಯಮ ಉತ್ತೇಜಿಸಲು, ಐಆರ್​ಸಿಟಿಸಿ ಸಂಸ್ಥೆಯು, ಪ್ರವಾಸಿಗರಿಗೆ ವಿಶೇಷ ವೆಚ್ಚದಲ್ಲಿ ಐಷಾರಾಮಿ ರೈಲು ಪ್ರವಾಸ ಅನುಭವಿಸುವ ಸುವರ್ಣ ಅವಕಾಶ ನೀಡಿದೆ. ಈ ಪ್ರವಾಸಗಳು ಜನವರಿ 2021ರಿಂದ ಆರಂಭಗೊಳ್ಳಲಿದೆ. ಪ್ರವಾಸಿಗರು 6 ರಾತ್ರಿ ಮತ್ತು 7 ದಿನಗಳ ಪ್ರವಾಸದಲ್ಲಿ, 2 ರಾತ್ರಿ ಮತ್ತು 3 ದಿನಗಳ ಪ್ರವಾಸದ ಪ್ರಯಾಣವನ್ನು ಒಬ್ಬ ವ್ಯಕ್ತಿಗೆ ಕೇವಲ 59,999 ರೂ. ತೆರಿಗೆ ಹೊರತುಪಡಿಸಿ ಇದೆ. ಇದಲ್ಲದೆ ದೇಸಿ ಪ್ರವಾಸಿಗರಿಗಾಗಿ ಪೂರ್ಣ ಪ್ರವಾಸಕ್ಕೆ ಒಬ್ಬರಿಗೆ ಪೂರ್ಣ ವೆಚ್ಚ ನೀಡಿದರೆ, ಸಹವರ್ತಿ ಪ್ರಯಾಣಿಕರಿಗೆ ಕೇವಲ ಶೇ. 50 ಒಟ್ಟು ವೆಚ್ಚ ಮಾತ್ರ ಇದೆ.

    ಐಆರ್​ಸಿಟಿಸಿ ವೆಬ್ ತಾಣದಲ್ಲಿ ಟಿಕೆಟ್ ಕಾದಿರಿಸುವ ಭಾರತೀಯ ಪ್ರವಾಸಿಗರಿಗೆ ಭರ್ಜರಿ ಶೇ. 35ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಹೆಚ್ಚಿನ ವಿವರಗಳು, ಕೊಡುಗೆಗಳು ಮತ್ತು ಬುಕಿಂಗ್​ಗಳಿಗಾಗಿ www.goldenchariot.org ಭೇಟಿ ನೀಡಬಹುದು. ಮೊ.ಸಂ. 8287931971, 8595931291ಗೆ ಸಂಪರ್ಕಿಸಬಹುದು ಎಂದು ಪ್ರಾದೇಶಿಕ ವ್ಯವಸ್ಥಾಪಕ ಬಿ. ರಮೇಶ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts