More

    50ಸಾವಿರದ ಗಡಿ ದಾಟಿದ ಚಿನ್ನದ ದರ..ಮುಂದಿನ ವಾರ ಇನ್ನೂ ಹೆಚ್ಚಾಗುವ ನಿರೀಕ್ಷೆ

    ನವದೆಹಲಿ: ಲಾಕ್​ಡೌನ್​ ಮುಗಿದಿದ್ದೆ ತಡ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ಹೆಚ್ಚುತ್ತಲೇ ಇದೆ.

    ಇಂದು ದೆಹಲಿ ಬುಲಿಯನ್​ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 50,000 ರೂ.ಗಡಿ ದಾಟಿ ಐತಿಹಾಸಿಕ ದಾಖಲೆ ಬರೆದಿದೆ. 10 ಗ್ರಾಂ ಚಿನ್ನದ ಬೆಲೆ 50,405 ರೂ.ಗೆ ಏರುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ.

    ಕರೊನಾ ಲಾಕ್​ಡೌನ್​ನಿಂದ ಆರ್ಥಿಕ ಕುಸಿತದ ಭಯ ಇಡೀ ವಿಶ್ವಕ್ಕೇ ಆವರಿಸಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ, ಅಮೆರಿಕ ಆರ್ಥಿಕತೆಯ ದುರ್ಬಲತೆಯೊಂದಿಗೆ, ಕರೊನಾ ವೈರಸ್​ನ ಎರಡನೇ ಅಲೆ ಯಾವಾಗ ಬೇಕಾದರೂ ಅಪ್ಪಳಿಸಿ, ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎಂಬ ಭೀತಿ ಹೂಡಿಕೆದಾರರನ್ನು ಚಿನ್ನದತ್ತ ಸೆಳೆಯುತ್ತಿದೆ. ಸದ್ಯಕ್ಕೆ ಹೂಡಿಕೆ ಮಾಡಲು ಬಂಗಾರವೇ ಉತ್ತಮ ಎಂಬ ನಂಬಿಕೆ ಮೂಡಿದೆ. ಇದೇ ಕಾರಣಕ್ಕೆ ಚಿನ್ನದ ದರ ಗಗನಕ್ಕೇರುತ್ತಿದೆ ಎಂದು ಸರಕು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಕೇವಲ ಇಷ್ಟೇ ಅಲ್ಲ…ಚಿನ್ನದ ಬೆಲೆ ಇನ್ನೂ ಹೆಚ್ಚಾಗಬಹುದು. ದೆಹಲಿಯಲ್ಲಿ ದರ 51,000ಕ್ಕೆ ಏರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

    ಮಲ್ಟಿ ಕಮಾಡಿಟಿ ಎಕ್ಸ್​ಚೇಂಜ್​​ನಲ್ಲಿ ಮುಂದಿನ ವಾರ ಚಿನ್ನದ ದರ 10 ಗ್ರಾಂ.ಗೆ 49,000 ಏರುವ ಸಾಧ್ಯತೆ ಇದೆ. ಆ ಸಮಯದಲ್ಲಿ ದೆಹಲಿಯಲ್ಲಿ 10 ಗ್ರಾಂ. ಚಿನ್ನದ ಬೆಲೆ 51 ಸಾವಿರಕ್ಕೆ ತಲುಪುತ್ತದೆ ಎಂಬುದು ನಮ್ಮ ನಿರೀಕ್ಷೆ ಎಂದು ಏಂಜೆಲ್​ ಬ್ರೋಕಿಂಗ್​ ಉಪಾಧ್ಯಕ್ಷ ಅನೂಜ್​ ಗುಪ್ತಾ ಹೇಳಿದ್ದಾರೆ. (ಏಜೆನ್ಸೀಸ್​)

    ಭಾರತ, ಚೀನಾ, ದಕ್ಷಿಣ ಆಫ್ರಿಕಾಕ್ಕೆ ಸಂಬಂಧಪಟ್ಟ ಆತಂಕಕಾರಿ ಸುದ್ದಿ ಇದು; ಅಧ್ಯಯನವೊಂದರ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts