More

    ಗೊಳಸಂಗಿಯಲ್ಲಿ ಮತ್ತೊಂದು ಪಾಸಿಟಿವ್

    ಗೊಳಸಂಗಿ: ಗ್ರಾಮದಲ್ಲಿ ಮೂವರಿಗೆ ತಾಕಿದ ಸೋಂಕಿನ ಭಯ ಮರೆಯುವ ಮುನ್ನವೇ ಬುಧವಾರ ಸಂಜೆ ಮತ್ತೊಂದು ಪಾಸಿಟಿವ್ ಪ್ರಕರಣದೃಢಪಟ್ಟಿದೆ.
    54 ವಯಸ್ಸಿನ ಆಶಾ ಕಾರ್ಯಕರ್ತೆಗೆ ಕರೊನಾ ಸೋಂಕು ದೃಢಪಟ್ಟಿರುವುದನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಖಚಿತಪಡಿಸಿದೆ. ಜು.9 ರಂದು 19 ಆಶಾ ಕಾರ್ಯಕರ್ತೆಯರು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸೇರಿ 46 ಜನರ ಗಂಟಲು ದ್ರವ ಪರೀಕ್ಷೆಗೆ ರವಾನಿಸಲಾಗಿತ್ತು. ಸೋಂಕಿತ ಆಶಾ ಪುತ್ರಿಯೊಬ್ಬಳು ಅಂಗವಿಕಲೆಯಾಗಿದ್ದು ಆಕೆಯ ಸಂರಕ್ಷಣೆಯನ್ನು ತಾಯಿಯೇ ಮಾಡಬೇಕಾಗಿದೆ. ಓರ್ವ ಮಗನೂ ಸೇರಿ ಎಲ್ಲರನ್ನೂ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಡಿ.ನಂದಿನಿ ತಿಳಿಸಿದ್ದಾರೆ.

    ಸೋಂಕಿತರ ಗಲ್ಲಿಯಲ್ಲಿ ಸಂತೆ !

    ಗ್ರಾಮದ ಸೋಂಕಿತ ಆಶಾ ಕಾರ್ಯಕರ್ತೆ ವಾಸಿಸುತ್ತಿರುವ ಬನಶಂಕರಿ ದೇವಸ್ಥಾನದ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ವಾರದ ಸಂತೆ ನಿರಾತಂಕವಾಗಿ ನಡೆಯಿತು. ಬೆಳಗ್ಗೆ 10 ಗಂಟೆ ನಂತರ ಸಂತೆ ಆವರಣಕ್ಕೆ ಬಂದ ಗ್ರಾಮಲೆಕ್ಕಾಧಿಕಾರಿ, ಗ್ರಾಪಂ ಸಿಬ್ಬಂದಿ ನಿರಾತಂಕವಾಗಿ ನಡೆಯುತ್ತಿದ್ದ ಸಂತೆಯನ್ನು ಬಂದ್ ಮಾಡಿಸಿದರು. ಮಧ್ಯಾಹ್ನದ ಬಳಿಕ ಮತ್ತೆ ಬಹಾರಪೇಟೆಯಲ್ಲಿ ವಾರದ ಸಂತೆ ಪುನರಾರಂಭಗೊಂಡಿತು. ಸೋಮವಾರದಿಂದ ಶನಿವಾರದವರೆಗೆ ಗ್ರಾಪಂ ಕರೆ ನೀಡಿದ್ದ ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ಬಹುತೇಕ ವ್ಯಾಪಾರಿಗಳು ಸ್ಪಂದನೆ ಮಾಡದೆ ತಮ್ಮ ವಹಿವಾಟು ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts