More

    ಕೂಡಗಿ ಸ್ಥಾವರದಲ್ಲಿ ಕನ್ನಡ ಕಲರವ

    ಗೊಳಸಂಗಿ: ಭಾಗಶಃ ಪರರಾಜ್ಯದ ಅಧಿಕಾರಿ-ಕಾರ್ಮಿಕರಿಂದಲೇ ತುಂಬಿರುವ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಎನ್‌ಟಿಪಿಸಿಯಲ್ಲಿ 65 ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಮೂರನೇ ಬಾರಿ ಹಾರಾಡಿತು.
    ಸ್ಥಾವರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಜಿಎಂ) ಮ್ಯಾಥ್ಯೂ ವರ್ಗೀಸ್ ನಾಡದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಿದರು.
    ನಂತರ ಮಾತನಾಡಿದ ಅವರು, ಕನ್ನಡ ನೆಲದಲ್ಲಿ ಅದೂ ವಿಜಯಪುರ ಜಿಲ್ಲೆಯಲ್ಲಿ ನಾಲ್ಕು ಸಾವಿರ ಮೆಗಾವಾಟ್ ವಿದ್ಯುತ್ ಸಾಮರ್ಥ್ಯ ಹೊಂದಿದ ಸ್ಥಾವರ ಕಾರ್ಯ ನಿರ್ವಹಿಸುತ್ತಿರುವುದು ಈ ನಾಡಿನ ಹೆಮ್ಮೆಯ ಸಂಗತಿ ಎಂದರು.
    ಯೋಜನೆಯ ಜನರಲ್ ಮ್ಯಾನೇಜರ್ ಬಿ.ಆರ್. ರಾವ್, ಎ್ಎಂ ವಿಭಾಗದ ಜನರಲ್ ಮ್ಯಾನೇಜರ್ ಎಡಿಕೆ ಗುಪ್ತಾ, ಎಚ್‌ಆರ್ ವಿಭಾಗದ ವಿ.ಜಯನಾರಾಯಣನ್, ಡಾ.ಸುರೇಂದ್ರನ್, ಸುಧಾ, ಆರ್ ಆ್ಯಂಡ್ ಆರ್ ವಿಭಾಗದ ಜನರಲ್ ಮ್ಯಾನೇಜರ್ ಎಂ.ಎಚ್. ಮಂಜುನಾಥ, ಸಿಐಎಸ್‌ಎ್ ಸಿಬ್ಬಂದಿ, ಸ್ಥಾವರದ ನೌಕರರು, ಕುಟುಂಬ ವರ್ಗದವರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts