More

    ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ವಿತರಣೆ

    ಗೊಳಸಂಗಿ: ಪರೀಕ್ಷಾಪೂರ್ವ ಸಿದ್ಧತಾ ರಜೆ ಅವಧಿಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ 21 ದಿನಗಳ ಆಹಾರ ಪದಾರ್ಥ ವಿತರಣೆಗೆ ಬುಧವಾರ ಚಾಲನೆ ನೀಡಲಾಯಿತು.
    ಸ್ಥಳೀಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿರುವ 275 ಮಕ್ಕಳ ಪೈಕಿ 150 ವಿದ್ಯಾರ್ಥಿಗಳಿಗೆ, ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ 351 ಮಕ್ಕಳ ಪೈಕಿ 257 ವಿದ್ಯಾರ್ಥಿನಿಯರಿಗೆ ಆಹಾರ ಧಾನ್ಯ ವಿತರಿಸಲಾಯಿತು. ಗ್ರಾಮದ ಒಂದು ಶಾಲೆಯಲ್ಲಿ ಆಹಾರ ಧಾನ್ಯ ಖಾಲಿಯಾದ ಪರಿಣಾಮ ವಿತರಣೆಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು.

    ಪ್ರೌಢಶಾಲೆಯಲ್ಲಿ ಇಂದು ಚಾಲನೆ

    ಇಲ್ಲಿನ ರಾಮಸ್ವಾಮಿ ದಳವಾಯಿ ಪ್ರೌಢಶಾಲೆಯಲ್ಲಿ 8 ಮತ್ತು 9 ನೇ ತರಗತಿ ಮಕ್ಕಳಿಗೆ ಏ.2, 3 ಹಾಗೂ 4 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಆಹಾರಧಾನ್ಯ ವಿತರಣೆ ಮಾಡಲಾಗುವುದೆಂದು ಮುಖ್ಯಶಿಕ್ಷಕ ಎಸ್.ಎಂ. ತಾವರಖೇಡ ತಿಳಿಸಿದ್ದಾರೆ.

    ಯಾರಿಗೆ ಎಷ್ಟು ಆಹಾರ ಧಾನ್ಯ?

    2019-20ನೇ ಸಾಳಿನಲ್ಲಿ ಆಯಾ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ ದಿನಕ್ಕೆ 100 ಗ್ರಾಂನಂತೆ 21 ದಿನಕ್ಕೆ 2.100 ಕೆಜಿ., ದಿನವೊಂದಕ್ಕೆ ಪ್ರತಿ ವಿದ್ಯಾರ್ಥಿಗೆ 50 ಗ್ರಾಂ.ನಂತೆ 21 ದಿನಕ್ಕೆ 1.50 ಗ್ರಾಂ.ನಂತೆ ವಿತರಣೆ ಮಾಡಲಾಗುತ್ತಿದೆ.
    ಇನ್ನು 6 ರಿಂದ 10ನೇ ತರಗತಿ ಮಕ್ಕಳಿಗೆ ದಿನಕ್ಕೆ 150 ಗ್ರಾಂ ನಂತೆ 21ದಿನಕ್ಕೆ 3.150 ಕೆಜಿ ಅಕ್ಕಿ ಹಾಗೂ ದಿನಕ್ಕೆ 75 ಗ್ರಾ.ನಂತೆ 21 ದಿನಕ್ಕೆ 1.575 ಕೆಜಿ ತೊಗರಿಬೇಳೆ ವಿತರಿಸಲಾಗುವುದು.

    ಎಲ್‌ಪಿಎಸ್‌ಗಳಿಗೆ ಬಾರದ ಆಹಾರ ಧಾನ್ಯ

    ಗೊಳಸಂಗಿ ಗ್ರಾಮದ ಮಾದರಿ ಪ್ರಾಥಮಿಕ ಶಾಲೆ (ಎಂಪಿಎಸ್) ಹಾಗೂ ಕಿರಿಯ ಪ್ರಾಥಮಿಕ ಶಾಲೆ (ಎಲ್‌ಪಿಎಸ್) ಗಳಿಗೆ ರಜಾ ಅವಧಿ ಆಹಾರ ಧಾನ್ಯ ವಿತರಣೆ ಮಾಡಲಾಗಿದ್ದರೂ ಸ್ಥಳೀಯ ಮಾದರಿ ಬಡಾವಣೆ, ಗೊಳಸಂಗಿ ತಾಂಡಾ, ಎನ್‌ಟಿಪಿಸಿ ರಸ್ತೆಯ ಮಹಾಂತವನದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಆಹಾರ ಧಾನ್ಯ ನೀಡಿರುವುದಿಲ್ಲ.
    ಸಮೀಪದ ಬುದ್ನಿ, ಮುಕಾರ್ತಿಹಾಳ, ಬೀರಲದಿನ್ನಿ ಗ್ರಾಮಗಳ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಾರ್ಚ್ ತಿಂಗಳ ಶಾಲಾ ಅವಧಿಯಲ್ಲೇ ಬಿಸಿಯೂಟ ಸ್ಥಗಿತಗೊಂಡಿದೆ. ಕರೊನಾ ರಜಾ ಅವಧಿಯ 21ದಿನದ ಆಹಾದ ಧಾನ್ಯವಂತೂ ಬಂದೇ ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts