More

    ಬಡವನಹಳ್ಳಿಯಲ್ಲಿ ಗೋಕಟ್ಟೆ ನೆಲಸಮ ; ತಹಸೀಲ್ದಾರ್, ಜಿಲ್ಲಾಧಿಕಾರಿಗೆ ದೂರು ಕೊಟ್ಟರೂ ಕ್ರಮವಿಲ್ಲ

    ದೊಡ್ಡೇರಿ : ಮಧುಗಿರಿ ತಾಲೂಕಿನ ಬಡವನಹಳ್ಳಿಯಲ್ಲಿ ಸರ್ವೇ ನಂ.56ರ ಗೋಕಟ್ಟೆಯನ್ನು ಬಲಾಢ್ಯರು ಶನಿವಾರ ರಾತ್ರೋರಾತ್ರಿ ಜೆಸಿಬಿಂದ ನೆಲಸಮ ಮಾಡಿದ್ದಾರೆ ಎಂದು ಗ್ರಾಮದ ಮುಖಂಡರಾದ ಬಿ.ಎಂ.ಸತೀಶ್, ನಾಗರಾಜ್ ಆರೋಪಿಸಿದ್ದಾರೆ.

    ಹಲವು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಡಿದ್ದ ಕೂಲಿ ಕಾರ್ಮಿಕರಿಗೆ ನಿವೇಶನ ಕೊಡಿಸುತ್ತೇವೆಂದು ಕೆಲ ಮಧ್ಯವರ್ತಿಗಳು ಆಮಿಷ ತೋರಿಸಿ, ನಂತರ ಅವರು ಪ್ರಭಾವ ಬಳಸಿ ಬಡವರು, ಕೂಲಿ ಕಾರ್ಮಿಕರು ಕಟ್ಟಿಕೊಂಡಿರುವ ಗುಡಿಸಲುಗಳನ್ನು ನೆಲಸಮ ಮಾಡಿ ಉಳ್ಳವರಿಗೆ ಮಾರಿಕೊಂಡಿದ್ದಾರೆ. ಅ್ಲದೇ ಈ ಜಾಗದಲ್ಲಿ ಕಟ್ಟಡ ಕಟ್ಟಲು ಪಾಯವನ್ನೂ ಹಾಕಿಕೊಳ್ಳಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

    ಗ್ರಾಮದಲ್ಲಿ ಕೆಲ ಬಲಾಢ್ಯರು ಏಕಾಏಕಿ ಗೋಕಟ್ಟೆಯನ್ನು ತೆರವುಗೊಳಿಸಿ ಸುಮಾರು 5 ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದು, ಈ ಬಗ್ಗೆ ಇಲಾಖೆ ಕಂಡೂ ಕಾಣದಂತೆ ಜಾಣಮೌನ ವಹಿಸಿದೆ ಎನ್ನುತ್ತಾರೆ ಗ್ರಾಮಸ್ಥರು. ಈ ಬಗ್ಗೆ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ಗ್ರಾಮಸ್ಥರು ದೂರು ನೀಡಿದರೂ ಪ್ರಯೋಜನವಾಗ್ಲಿ. ಆದರೆ, ಗ್ರಾಮ ಲೆಕ್ಕಿಗರು ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ಗೋಕಟ್ಟೆ ನೆಲಸಮ ಮಾಡಿರುವವರನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ವಿಫಲವಾಗಿದಾರೆ.

    ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳ ಪರಿಶೀಲಿಸಿ ಬಡವರಿಗೆ ನ್ಯಾಯ ದೊಕಿಸಿಕೊಡಬೇಕೆಂದು ನಿರಾಶ್ರಿತರಾದ ಮಂಜುಳಾ, ಭಾಗ್ಯಮ್ಮ, ರೇಣುಕಮ್ಮ ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗೆ ಅರ್ಜಿ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಿಲ್ಲ ಎನ್ನುತ್ತಾರೆ ನಿವೇಶನ ರಹಿತರು ಮತ್ತು ನಿರಾಶ್ರಿತರಾದ ನಾಗಮಣಿ, ನಾಗರತ್ನಮ್ಮ, ಸೌಮ್ಯಾ.

    1992ನೇ ಸಾಲಿನಲ್ಲಿ ಸ.ನಂ. 52, 55, 56ಗಳಲ್ಲಿ ಕೆಲವರಿಗೆ ಆಶ್ರಯ ಯೋಜನೆಯಲ್ಲಿ ಹಕ್ಕುಪತ್ರ ನೀಡಿರುವ ಬಗ್ಗೆ ಗ್ರಾಪಂ ಕಾರ್ಯಾಲಯದಲ್ಲಿ ಮಾಹಿತಿ ಇ್ಲ. ತಹಸೀಲ್ದಾರ್‌ಗೆ ದಾಖಲೆ ನೀಡುವಂತೆ ಪತ್ರ ಬರೆಯಲಾಗಿದೆ.
    ಶಿಲ್ಪಾ, ಪಿಡಿಒ

    ಗೋಕಟ್ಟೆ ನೆಲಸಮ ಮಾಡಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದು, ಗೋಕಟ್ಟೆ ನೆಲಸಮ ಮಾಡಿ ಪಾಯ, ಮನೆ ಕಟ್ಟಿರುವವರಿಗೆ ತಹಸೀಲ್ದಾರ್ ಮೂಲಕ ನೋಟಿಸ್ ನೀಡಿ, ಕೇಸ್ ದಾಖಲಿಸಲು ವರದಿ ಸಲ್ಲಿಸಲಾಗುವುದು.
    ಚನ್ನಬಸಪ್ಪ, ಕಂದಾಯ ತನಿಖಾಧಿಕಾರಿ. ದೊಡ್ಡೇರಿ ಹೋಬಳಿ.

    ಬಡವನಹಳ್ಳಿಯಲ್ಲಿ ಕೆಲವರು ಗೋಕಟ್ಟೆ ತೆರವುಗೊಳಿಸಿ ಮನೆಗಳ ನಿರ್ಮಾಣಕ್ಕೆ ಮುಂದಾಗಿರುವ ಬಗ್ಗೆ ದೂರು ಕೇಳಿ ಬಂದಿದ್ದು, ಸ್ಥಳ ಪರಿಶೀಲನೆಗೆ ಕಂದಾಯ ಅಧಿಕಾರಿ ಕಳಿಸಲಾಗಿದೆ. ತಪ್ಪಿತಸ್ಥರೆಂದು ಸಾಬೀತಾದರೆ ಕ್ರಮ ಜರುಗಿಸಲಾಗುವುದು.
    ಡಾ. ಜಿ.ವಿಶ್ವನಾಥ್, ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts