More

    ಗೋಕರ್ಣ ಕೋಟಿ ತೀರ್ಥ ಸ್ವಚ್ಛತೆ ವಿಳಂಬ ಸಾಧ್ಯತೆ

    ಗೋಕರ್ಣ: ಇಲ್ಲಿಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ. ಜಿಪಂ ಅಧಿಕಾರಿಗಳ ಜೊತೆ ವಿವಿಧ ಸ್ಥಳಗಳನ್ನು ಪರಿಶೀಲಿಸಿದರು.

    ನಿರ್ಧಾರ ಇಲ್ಲ: ನಿತ್ಯ ಸಾವಿರಾರು ಯಾತ್ರಿಕರು ತೀರ್ಥ ಸ್ನಾನ ಕೈಗೊಳ್ಳುವ ಪುರಾಣ ಪ್ರಸಿದ್ಧ ಕೋಟಿತೀರ್ಥವನ್ನು ವೀಕ್ಷಿಸಿ ಅದರ ಸ್ವಚ್ಛತೆ ಬಗ್ಗೆ ರ್ಚಚಿಸಿದರು. ಇಲ್ಲಿಗೆ ಭೇಟಿ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಕೆಲಸ ನಿರ್ವಹಿಸಲು ಆದೇಶಿಸಿ 1 ಕೋಟಿ ರೂ. ಮಂಜೂರು ಮಾಡಿದ್ದರು. ಆದರೆ, ಯೋಜನಾ ಕಾಮಗಾರಿಯ ನಿರ್ವಹಣೆಯನ್ನು ಹೇಗೆ ಮಾಡಬೇಕು ಎನ್ನುವ ಬಗ್ಗೆ ಇನ್ನೂ ನಿರ್ಧಾರ ಆಗದೇ ಇರುವ ಹಿನ್ನೆಲೆಯಲ್ಲಿ ಈ ತೀರ್ಥದ ಸ್ವಚ್ಛತೆ ಕೆಲಸ ಇನ್ನಷ್ಟು ವಿಳಂಬ ಆಗುವ ಸಾಧ್ಯತೆಗಳಿವೆ.

    ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇದನ್ನು ಜಾರಿಗೆ ತರಲು ಸ್ಥಳೀಯವಾಗಿ ಇರುವ ತೊಂದರೆಗಳನ್ನು ಪಂಚಾಯಿತಿ ವತಿಯಿಂದ ಸಿಇಒ ಅವರಿಗೆ ವಿವರಿಸಲಾಯಿತು. ಈ ಭಾಗದಲ್ಲಿ ಕಾರ್ವಿುಕರ ತೀವ್ರ ಕೊರತೆಯಿದೆ. ಜತೆಗೆ ಕೋಟಿತೀರ್ಥದ ಹೂಳನ್ನು ಕಿಲೋ ಮೀಟರ್ ದೂರಕ್ಕೆ ಸಾಗಿಸಬೇಕಾಗಿದೆ. ಕಾರಣ ಉದ್ಯೋಗ ಖಾತ್ರಿ ಹೊರತಾದ ಯೋಜನೆಯಲ್ಲಿ ಕೋಟಿತೀರ್ಥ ಸ್ವಚ್ಛತೆಗೆ ಅವಕಾಶ ಒದಗಿಸುವಂತೆ ವಿನಂತಿಸಲಾಯಿತು.

    ಕೋಟಿತೀರ್ಥದ ನೀರನ್ನು ಹೊರಸಾಗಿಸಿ ಸಮುದ್ರಕ್ಕೆ ಮುಟ್ಟಿಸುವ ಮುಖ್ಯ ಹಳ್ಳದ ಸಂಪೂರ್ಣ ಅಭಿವೃದ್ಧಿ ಬಗ್ಗೆ ಈಗಾಗಲೆ ಸಿದ್ಧ ಪಡಿಸಲಾದ ಏಳೂವರೆ ಕೋಟಿ ರೂ. ಯೋಜನೆಯ ನೀಲಿ ನಕ್ಷೆಯನ್ನು ಸಿಇಒ ಅವರಿಗೆ ತೋರಿಸಲಾಯಿತು. ಪಂಚಾಯಿತಿಯ ಕಸ ಸಂಸ್ಕರಣಾ ಘಟಕ, ಸಮುದ್ರ ತೀರದ ಸಂಗಮ ಪ್ರದೇಶ, ವಾಹನಗಳ ರ್ಪಾಂಗ್ ಸ್ಥಳಗಳನ್ನು ಸಿಇಒ ವೀಕ್ಷಿಸಿದರು. ತಾಪಂ ಇಒ ಸಿ.ಟಿ. ನಾಯ್ಕ, ಗ್ರಾಪಂ ಆಡಳಿತಾಧಿಕಾರಿ ಆರ್.ಜಿ. ಗುನಗಿ, ತಾಪಂ ಸದಸ್ಯ ಮಹೇಶ ಶೆಟ್ಟಿ, ಇಂಜಿನಿಯರಿಂಗ್ ವಿಭಾಗದ ಕಿರಣ ಚೇಳ್ಕರ, ರಾಘವೇಂದ್ರ, ಪಿಡಿಒ ವಿನಯಕುಮಾರ, ಕಾರ್ಯದರ್ಶಿ ಶ್ರೀಧರ ಬೋಮ್ಕರ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts