ಬೆಂಗಳೂರು ಬಿಟ್ಟು ಹೈದರಾಬಾದ್​ಗೆ ಬನ್ನಿ ಎಂದ ತೆಲಂಗಾಣ ಸಚಿವ; ದಿಟ್ಟ ಉತ್ತರ ಕೊಟ್ಟ ಡಾ.ಕೆ.ಸುಧಾಕರ್

blank

ಬೆಂಗಳೂರು: ಸ್ಟಾರ್ಟಪ್​ ಆರಂಭಿಸಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೇ ಉದ್ಯಮ ನಡೆಸುತ್ತಿರುವ ವ್ಯಕ್ತಿಯೊಬ್ಬ, ಬೆಂಗಳೂರಿನ ಬಗ್ಗೆ ತೀರಾ ಕಳಪೆ ನಗರ ಎನ್ನುವ ರೀತಿಯಲ್ಲಿ ಮಾತನಾಡಿದ್ದು, ಅದಕ್ಕೆ ತೆಲಂಗಾಣದ ಸಚಿವರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲ, ಬೆಂಗಳೂರು ಬಿಟ್ಟು ಹೈದರಾಬಾದ್​ಗೆ ಬನ್ನಿ ಎಂದೂ ಕರೆ ನೀಡಿದ್ದಾರೆ. ಇದನ್ನು ಗಮನಿಸಿದ ಸಚಿವ ಡಾ.ಕೆ. ಸುಧಾಕರ್ ಆ ಸಚಿವರಿಗೆ ದಿಟ್ಟ ಉತ್ತರವನ್ನೇ ನೀಡಿದ್ದಾರೆ.

ಭಾರತದ ಸಿಲಿಕಾನ್ ವ್ಯಾಲಿ ಎನಿಸಿಕೊಂಡಿರುವ ಬೆಂಗಳೂರಿನ ಎಚ್​ಎಸ್​ಆರ್​/ಕೋರಮಂಗಲದಲ್ಲಿ ಸ್ಟಾರ್ಟಪ್​ಗಳಿಂದ ಭಾರಿ ತೆರಿಗೆ ಸಂಗ್ರಹವಾಗುತ್ತಿದ್ದರೂ ಕೆಟ್ಟ ರಸ್ತೆಗಳು, ದಿನಾ ವಿದ್ಯುತ್ ಕಡಿತ, ಅಸಮರ್ಪಕ ನೀರು ಪೂರೈಕೆ, ಬಳಸಲು ಯೋಗ್ಯವಲ್ಲದ ಪಾದಚಾರಿ ರಸ್ತೆಗಳಿವೆ. ಎಷ್ಟೋ ಗ್ರಾಮೀಣ ಪ್ರದೇಶಗಳು ಭಾರತದ ಸಿಲಿಕಾನ್ ವ್ಯಾಲಿಗಿಂತ ಉತ್ತಮ ಮೂಲಸೌಕರ್ಯಗಳನ್ನು ಹೊಂದಿವೆ ಎಂದು ಸ್ಟಾರ್ಟಪ್​ ಒಂದರ ಮಾಲೀಕ ತನ್ನ ಅನಿಸಿಕೆ ಹಂಚಿಕೊಂಡಿದ್ದರು.

ಉದ್ಯಮಿಯ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ತೆಲಂಗಾಣದ ನಗರಾಭಿವೃದ್ಧಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್, ಗಂಟುಮೂಟೆ ಕಟ್ಟಿಕೊಂಡು ಹೈದರಾಬಾದ್​ಗೆ ಬನ್ನಿ. ನಮ್ಮಲ್ಲಿ ಉತ್ತಮ ಮೂಲಸೌಕರ್ಯ ಹಾಗೂ ಸಾಮಾಜಿಕ ಸೌಕರ್ಯವಿದೆ. ನಮ್ಮ ವಿಮಾನನಿಲ್ದಾಣ ಅತ್ಯುತ್ತಮವಾದವುಗಳಲ್ಲಿ ಒಂದು, ಸಿಟಿಯಿಂದ ಹೊರಗೆ ಹೋಗಿ ಬರುವುದು ಗಾಳಿಯಲ್ಲಿ ತೇಲಿದಂತೆ. ಎಲ್ಲಕ್ಕಿಂತ ಹೆಚ್ಚು ನಮ್ಮ ಸರ್ಕಾರ ಇನ್ನೋವೇಷನ್, ಇನ್​ಫ್ರಾಸ್ಟ್ರಕ್ಚರ್​, ಇನ್​ಕ್ಲೂಸಿವ್ ಗ್ರೋಥ್ ಎಂಬ ಮೂರು ಐ ಮಂತ್ರಗಳ ಮೇಲೆ ಕೇಂದ್ರಿತವಾಗಿದೆ ಎಂದು ಹೇಳಿದ್ದಾರೆ.

ಕೆಟಿಆರ್​ ಹೇಳಿಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಕ್ಕ ಉತ್ತರ ನೀಡಿದ್ದು, ಕೆಟಿಆರ್ ಅವರೇ, ನಮ್ಮ ಬೆಂಗಳೂರಿನ ಸ್ಪರ್ಧೆ ಭಾರತದ ಯಾವುದೇ ರಾಜ್ಯ ಅಥವಾ ನಗರಗಳ ಜೊತೆಯಲ್ಲ, ನಮ್ಮ ಸ್ಪರ್ಧೆ ಏನಿದ್ದರೂ ಸಿಲಿಕಾನ್ ವ್ಯಾಲಿಗಳಾದ ಸಿಂಗಾಪುರ, ಟೆಲ್ ಅವೈವ್​ಗಳ ಜೊತೆ. ಬಹಳಷ್ಟು ದೇಶ-ರಾಜ್ಯಗಳ ಜನರಿಗೆ ಬೆಂಗಳೂರು ಆಶ್ರಯ-ಆತಿಥ್ಯ ನೀಡಿದೆ ಎಂಬ ಹೆಮ್ಮೆ ನಮಗಿದೆ ಎಂದು ಹೇಳಿದ್ದಾರೆ. ಬೆಂಗಳೂರನ್ನು ಟೀಕಿಸಿರುವ ಕನ್ನಡಿಗರು ಕೂಡ ಕಾಲೆಳೆಯುವ ಉತ್ತರವನ್ನು ನೀಡಿ ಎದಿರೇಟು ನೀಡಿದ್ದಾರೆ.

ಇನ್ನು ಮ್ಯಾಂಗೋ ವಾರ್!?: ಹಲಾಲ್​-ಜಟ್ಕಾ ಬಳಿಕ ಮಾವಿಗೂ ಬಂತು ಧರ್ಮಸಂಘರ್ಷ..

ಮಸೀದಿಗಳಲ್ಲಿನ ಮೈಕ್​ ವಿರುದ್ಧ ಶ್ರೀರಾಮಸೇನೆ ಗುಡುಗು; ನಿರ್ಬಂಧಿಸದಿದ್ದರೆ ದೇವಸ್ಥಾನಗಳಲ್ಲಿ ಮೈಕ್​ ಹಾಕಿ ಭಜನೆ..

Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…