More

    ಸಂಘಟನೆ ಕಟ್ಟುವಾಗ ಗುರಿ ಮುಖ್ಯ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಒಂದು ಸಂಘಟನೆ ಕಟ್ಟುವಾಗ ಅದರ ಉದ್ದೇಶ ಮತ್ತು ಗುರಿ ಬಹುಮುಖ್ಯ. ಉದ್ದೇಶ ಗಮನದಲ್ಲಿಟ್ಟುಕೊಂಡು ಉತ್ತಮ ಸಂಘಟನೆ ಮಾಡಬೇಕು. ಆ ನಿಟ್ಟಿನಲ್ಲಿ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಕಾರ್ಯ ಶ್ಲಾಘನೀಯ ಎಂದು ಮೇಯರ್ ಈರೇಶ ಅಂಚಟಗೇರಿ ಹೇಳಿದರು.
    ನಗರದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ವತಿಯಿಂದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಪ್ರತಿಷ್ಠಾನದ ವಾರ್ಷಿಕೋತ್ಸವ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಸಂಗೀತ, ನೃತ್ಯ, ಸಾಹಿತ್ಯ ಸಂವಾದ, ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಪ್ರತಿಷ್ಠಾನದ ಗೌರವಾಧ್ಯಕ್ಷ ಕೆ.ಎಚ್.ನಾಯಕ ಮಾತನಾಡಿ, 17 ವರ್ಷದಿಂದ ನಿರಂತರವಾಗಿ ಎಲ್ಲ ಪಾದಾಧಿಕಾರಿಗಳು ಫಲಾಪೇಕ್ಷಯಿಲ್ಲದೆ ಸಮಾಜದ ಅಭಿವೃದ್ದಿ ಪೂರಕ ಕಾರ್ಯಮಾಡುತ್ತಿದ್ದಾರೆ. ಈರೇಶ ಅಂಚಟಗೇರಿ ಅಧಿಕಾರ ಇಲ್ಲದ ಸಂದರ್ಭದಲ್ಲೂ ಪ್ರತಿಷ್ಠಾನ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ ಎಂದರು.
    ಸಾಧಕರಾದ ಶೇಖರ ಕವಳಿ, ಅಶೋಕ ಶೆಟ್ಟರ, ಮಲ್ಲಿಕಾರ್ಜುನ ಪಾಟೀಲ, ರಾಜಶೇಖರಗೌಡ ಕಂಟೆಪ್ಪಗೌಡ್ರ, ಫಿರೋಜ್ ಗುಡೇನಕಟ್ಟಿ, ರಾಜೀವಸಿಂಗ್ ಹಲವಾಯಿ, ಕಿರಣ ಸಿದ್ದಾಪುರ, ರಾಜೇಶ್ವರಿ ಸುಳ್ಯಾ, ಅನುರಾಧಾ ಸವದತ್ತಿ, ರತ್ನಮಾಲಾ ಕಡಪಟ್ಟಿ, ಅನಿಲ ಮೇತ್ರಿ, ಖುಷಿ ಟಿಕಾರೆ, ರಾಜಶೇಖರ ಜಂಗಮಶೆಟ್ಟಿ, ನಿಧಿ ಶೆಟ್ಟಿ, ಅನ್ನಪೂರ್ಣ ಹೊಸಮನಿ ಅವರಿಗೆ ಸನ್ಮಾನಿಸಲಾಯಿತು.
    ಜಯದೇವಿ ಜಂಗಮಶೆಟ್ಟಿ, ಸೈಯದ ಎ.ಎಂ, ಮೇಘಾ ಹುಕ್ಕೇರಿ, ಮಲ್ಲಣ್ಣ ಸಾಧನಿ, ಸುರೇಶ ಬೆಟಗೇರಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಫರಾಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಭು ಹಂಚಿನಾಳ, ಶ್ರೀಧರ ಕುಲಕರ್ಣಿ, ಎಂ.ಆರ್. ಕಬ್ಬೇರ, ಚನ್ನಬಸಪ್ಪ ಗೋಕುಲ, ಬಿ.ಐ. ಮನಗುಂಡಿ, ಸುಜಾತಾ ಸಾಂಬ್ರಾಣಿ, ರೇಣುಕಾ ಗಾಮನಗಟ್ಟಿ, ಇತರರು ಇದ್ದರು.
    ಪ್ರಧಾನಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಶೆಟ್ಟಿ ನಿರೂಪಿಸಿದರು. ಕೃಷ್ಣಮೂರ್ತಿ ಗೂಲ್ಲರ ವಂದಿಸಿದರು. ನಂತರ ಧಾರವಾಡದ ಸಾಂಸ್ಕೃತಿಕ ಲೋಕ ಆರ್ಟ್ ಆ್ಯಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಜಾನಪದ ವೈಭವದ ಸಂಭ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts