More

    ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ ಗೋವಾ ಸರ್ಕಾರ

    ಪಣಜಿ: ಮುಂಬೈನಲ್ಲಿ ಯಾವಾಗ ಲಾಕ್​ಡೌನ್​​ ಘೋಷಣೆಯಾಗಿ ಚಿತ್ರೀಕರಣ ಚಟುವಟಿಕೆಗಳಿಗೆ ಬ್ರೇಕ್ ಬಿತ್ತೋ, ಆಗ ಹಿಂದಿ ಧಾರಾವಾಹಿ ತಂಡಗಳು ಮೊದಲು ದೌಡಾಯಿಸಿದ್ದು ಗೋವಾಗೆ. ಅಲ್ಲಿನ ರೆಸಾರ್ಟ್​ ಮತ್ತು ಫಾರ್ಮ್​​ಹೌಸ್​ಗಳಲ್ಲಿ ಧಾರಾವಾಹಿಗಳ ಚಿತ್ರೀಕರಣ ಇಷ್ಟು ದಿನ ಅವ್ಯಾಹತವಾಗಿ ಸಾಗುತ್ತಿತ್ತು. ಇದೀಗ ಗೋವಾ ಸರ್ಕಾರ ಸಹ ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್​ ಹಾಕಿದೆ.

    ಇದನ್ನೂ ಓದಿ: ಶ್ರೇಯಸ್ ಮಂಜು ಅಭಿನಯದ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ

    ಕಲರ್ಸ್​, ಸೋನಿ, ಸ್ಟಾರ್​ ಪ್ಲಸ್​, ಜೀ ಮುಂತಾದ ವಾಹಿನಿಗಳಲ್ಲಿ ಪ್ರಸಾರವಾಗುವ ಒಂಬತ್ತು ಧಾರಾವಾಹಿಗಳ ತಂಡಗಳು ಕಳೆದ ಕೆಲವು ದಿನಗಳಿಂದ ಗೋವಾದಲ್ಲಿ ಚಿತ್ರೀಕರಣ ನಡೆಸುತ್ತಿದ್ದವು. ಈ ಎಲ್ಲ ಧಾರಾವಾಹಿಗಳ ಚಿತ್ರೀಕರಣ ಮೊದಲು ಮುಂಬೈ ಸುತ್ತಮುತ್ತ ನಡೆಯುತ್ತಿತ್ತು. ಆದರೆ, ಮುಂಬೈನಲ್ಲಿ ಲಾಕ್​ಡೌನ್​ ಹೇರಿದ ಹಿನ್ನೆಲೆಯಲ್ಲಿ ಈ ಎಲ್ಲ ತಂಡಗಳು ಗೋವಾಗೆ ಶಿಫ್ಟ್​ ಆಗಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡವು.

    ಗುಮ್​ ಹೇ ಕಿಸೀಕಿ ಪ್ಯಾರ್​ ಮೇ, ಆಪ್ಕಿ ನಜ್ರೋನ್​ ನೇ ಸಮ್ಜಾ, ಕುಂಕುಮ್​ ಭಾಗ್ಯ, ಶೌರ್ಯ ಔರ್​ ಅನೋಖಿ ಕೀ ಕಹಾನಿ, ಅಪ್ನಾ ಟೈಮ್​ ಭೀ ಆಯೇಗಾ ಮುಂತಾದ ಧಾರಾವಾಹಿಗಳ ಚಿತ್ರೀಕರಣ ಗೋವಾದ ಹಲವು ಕಡೆ ನಡೆಯುತ್ತಿತ್ತು. ದೊಡ್ಡದೊಡ್ಡ ವಿಲ್ಲ, ರೆಸಾರ್ಟ್​ ಮತ್ತು ಫಾರ್ಮ್​ಹೌಸ್​ಗಳಲ್ಲಿ ಸದ್ದಿಲ್ಲದೆ ಚಿತ್ರೀಕರಣ ನಡೆಯುತ್ತಿದ್ದರಿಂದ ಯಾರೂ ಸಹ ಚಿತ್ರೀಕರಣಕ್ಕೆ ತಡೆ ಒಡ್ಡಿರಲಿಲ್ಲ.

    ಇದನ್ನೂ ಓದಿ: ಪ್ರಿನ್ಸ್​ ಮಹೇಶ್​ಬಾಬು ಜೊತೆಯಾಗುತ್ತಾರಾ ಬ್ಯೂಟಿ ಕ್ವೀನ್ ಜಾಹ್ನವಿ ಕಪೂರ್?

    ಆದರೆ, ಗೋವಾದಲ್ಲಿ ಹೆಚ್ಚುತ್ತಿರುವ ಕರೊನಾ ಪ್ರಕರಣಗಳಿಗೆ ಬ್ರೇಕ್​ ಹಾಕುವುದಕ್ಕೆ ಎಂಟರ್​ಟೈನ್​ಮೆಂಟ್​ ಸೊಸೈಟಿ ಆಆಫ್​ ಗೋವಾ, ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನಿರಾಕರಿಸಿದೆ.  ಇದನ್ನು ಅನುಮೋದಿಸಿರುವ ಗೋವಾ ಸರ್ಕಾರ, ಚಿತ್ರೀಕರಣ ಮಾಡುವಂತಿಲ್ಲ ಎಂದು ಹೇಳಿದೆ. ಈಗ ಎಲ್ಲ ಚಿತ್ರತಂಡದವರು ಚಿತ್ರೀಕರಣವನ್ನು ನಿಲ್ಲಿಸಿದೆ. ಎಲ್ಲ ಧಾರಾವಾಹಿ ತಂಡಗಳ ಹತ್ತಿರವೂ ಒಂದಿಷ್ಟು ದಿನಗಳ ಬ್ಯಾಂಕಿಂಗ್ ಇರುವುದರಿಂದ, ಸದ್ಯ ಯಾವುದೇ ಧಾರಾವಾಹಿ ಸಹ ಅರ್ಧದಲ್ಲೇ ನಿಲ್ಲುವುದಿಲ್ಲ ಎಂದು ಹೇಳಲಾಗುತ್ತಿದೆ.

    ಎರಡು ಭಾಗಗಳಲ್ಲಿ ಪುಷ್ಪ: ‘ಕೆಜಿಎಫ್’ ಮಾರ್ಗದಲ್ಲಿಯೇ ಹೆಜ್ಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts