ಶ್ರೇಯಸ್ ಮಂಜು ಅಭಿನಯದ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ

Shreyas
Published on

ಏಪ್ರಿಲ್ ಕೊನೆಯ ವಾರದಲ್ಲಿ ಶ್ರೇಯಸ್ ಮಂಜು ಅಭಿನಯದಲ್ಲಿ ಹೊಸ ಚಿತ್ರವನ್ನು ಶುರು ಮಾಡುವುದಾಗಿ ನಿರ್ದೇಶಕ ನಂದಕಿಶೋರ್ ಹೇಳಿಕೊಂಡಿದ್ದರು. ಆದರೆ, ಕರೊನಾ ಎರಡನೇ ಅಲೆಯಿಂದಾಗಿ ಚಿತ್ರದ ಮುಹೂರ್ತ ಮುಂದಕ್ಕೆ ಹೋಗಿದೆ. ಅದಕ್ಕೂ ಮುನ್ನ ಸ್ಕ್ರಿಪ್ಟ್ ಪೂಜೆಯನ್ನಾದರೂ ಮುಗಿಸೋಣ ಎಂದು ತೀರ್ವನಿಸಿದ ಚಿತ್ರತಂಡ, ಇತ್ತೀಚೆಗೆ ಸ್ಕ್ರಿಪ್ಟ್ ಪೂಜೆ ಮುಗಿಸಿದೆ.

ಹೊಸಪೇಟೆ ಬಳಿ ಹುಲಿಗೆಮ್ಮ ದೇವಿ ಸನ್ನಿಧಿಯಲ್ಲಿ ಚಿತ್ರತಂಡದ ಸ್ಕ್ರಿಪ್ಟ್ ಪೂಜೆ ನಡೆದಿದ್ದು, ಈ ಸಂದರ್ಭದಲ್ಲಿ ಶ್ರೇಯಸ್ ಮಂಜು, ನಂದಕಿಶೋರ್, ಗುಜ್ಜಾಲ್ ಪುರುಷೋತ್ತಮ್ ಕೆ. ಮಂಜು, ರಮೇಶ್ ಯಾದವ್ ಮುಂತಾದವರು ಹಾಜರಿದ್ದರು. ಸದ್ಯಕ್ಕೆ ಸ್ಕ್ರಿಪ್ಟ್ ಪೂಜೆ ಮುಗಿಸಿರುವ ಚಿತ್ರತಂಡ, ಸಿನಿಮಾ ಚಟುವಟಿಕೆಗಳಿಗೆ ಅನುಮತಿ ಸಿಗುತ್ತಿದ್ದಂತೆಯೇ ಚಿತ್ರೀಕರಣ ಪ್ರಾರಂಭಿಸಲಿದೆ.

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಶ್ರೇಯಸ್​ಗೆನಾಯಕಿಯಾಗಿ ‘ಏಕ್ ಲವ್ ಯಾ’ ಖ್ಯಾತಿಯ ರೀಷ್ಮಾ ನಾಣಯ್ಯ ನಟಿಸುತ್ತಿದ್ದಾರೆ. ‘ಟಗರು’ಗೆ ಸಹನಿರ್ವಪಕರಾಗಿದ್ದ ಗುಜ್ಜಾಲ್ ಪುರುಷೋತ್ತಮ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ವಪಕರಾಗುತ್ತಿದ್ದಾರೆ. ನಂದಕಿಶೋರ್ ಕಥೆ-ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡಲಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಮತ್ತು ಚಂದನ್ ಶೆಟ್ಟಿ ಸಂಗೀತ ಚಿತ್ರಕ್ಕಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net