More

    ಲಸಿಕೆ ಹಾಕಿಸಿಕೊಳ್ಳಲ್ಲ ಅಂದ್ರೆ ಭಾರತಕ್ಕೆ ಇಲ್ಲ ಅಮೆರಿಕಕ್ಕೆ ಹೋಗಿ : ಫಿಲಿಪೈನ್ಸ್​ ಅಧ್ಯಕ್ಷ

    ಮನಿಲಾ : ಫಿಲಿಪೈನ್ಸ್​ಗೆ ಕರೊನಾ ಎರಡನೇ ಅಲೆ ಅಪ್ಪಳಿಸಿದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಆಘಾತಕಾರಿ ಪರಿಣಾಮವಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಫಿಲಿಪೈನ್ಸ್​ ಅಧ್ಯಕ್ಷ ರೊಡ್ರಿಗೊ ಡ್ಯುಟರ್ಟೆ ಅವರು, ಕರೊನಾ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುವ ನಾಗರೀಕರನ್ನು ಬಂಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ‘ಲಸಿಕೆ ಹಾಕಿಸಿಕೊಳ್ಳದಿದ್ದರೆ ದೇಶ ಬಿಟ್ಟು ಭಾರತಕ್ಕೆ ಇಲ್ಲ ಅಮೆರಿಕಕ್ಕೆ ಹೊರಟು ಹೋಗಿ’ ಎಂದಿದ್ದಾರೆ!

    ಸೋಮವಾರದಂದು ದೇಶದ ಪ್ರಜೆಗಳನ್ನುದ್ದೇಶಿಸಿ ಮಾಡಿದ ತಮ್ಮ ಭಾಷಣದಲ್ಲಿ, “ದೇಶ ಸಂಕಷ್ಟವನ್ನೆದುರಿಸುತ್ತಿದೆ. ರಾಷ್ಟ್ರೀಯ ತುರ್ತು ಪರಿಸ್ಥಿತಿ ಇದೆ. ಎರಡನೇ ಅಲೆ ತಡೆಯಲು ಎಲ್ಲರೂ ಮೂರು ಪಟ್ಟು ಪ್ರಯತ್ನ ಮಾಡಬೇಕಾಗಿದೆ. ಕಠಿಣ ಮುನ್ನೆಚ್ಚರಿಕೆ ವಹಿಸಬೇಕಾಗಿದೆ” ಎಂದು ಡುಟರ್ಟೆ ಹೇಳಿದರು. ಕರೊನಾ ನಿಯಂತ್ರಿಸಲು ಲಸಿಕಾ ಕಾರ್ಯಕ್ರಮ ಬಹಳ ಮುಖ್ಯ ಎಂದ ಡುಟರ್ಟೆ, ಜನರಿಗೆ “ನೀವು ಲಸಿಕೆ ಹಾಕಿಸಿಕೊಳ್ಳಲು ಇಷ್ಟಪಡದಿದ್ದರೆ ನಾನು ನಿಮ್ಮನ್ನು ಬಂಧಿಸುವಂತೆ ಆದೇಶಿಸುತ್ತೇನೆ. ನಂತರ ನಿಮ್ಮ ಪೃಷ್ಟಾಂಗಕ್ಕೆ ಲಸಿಕೆ ಚುಚ್ಚಿಸುತ್ತೇನೆ. ನೀವು ಕೀಟಗಳು. ನೀವು ಹೊರೆಯನ್ನು ಹೆಚ್ಚಿಸುತ್ತಿದ್ದೀರಿ” ಎಂದಿರುವುದಾಗಿ ಎಂಕ್ವೈರರ್.ನೆಟ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಇದನ್ನೂ ಓದಿ: ಗಂಡನ ಕಿರುಕುಳಕ್ಕೆ ಯುವ ವೈದ್ಯೆ ಸಾವು: 2 ವರ್ಷದ ಹಿಂದೆ ನಟನಿಗೆ ಲವ್​ ಲೆಟರ್​ ಬರೆದಿದ್ದ ವಿಸ್ಮಯ!

    “ಯಾರಿಗೂ ಅದು ಇಷ್ಟ ಇಲ್ಲ. ಆದರೆ ನೀವು ಲಸಿಕೆ ಹಾಕಿಸಿಕೊಳ್ಳಲಿಲ್ಲ ಎಂದರೆ ಫಿಲಿಪೈನ್ಸ್​ ಬಿಟ್ಟು ಹೋಗಿ. ಬೇಕಿದ್ದರೆ ಭಾರತಕ್ಕೆ ಹೋಗಿ ಅಥವಾ ಅಮೆರಿಕದಲ್ಲಿ ಎಲ್ಲಿಗಾದರೂ ಹೋಗಿ. ಆದರೆ ಇಲ್ಲಿರುವ ತನಕ ಮತ್ತು ವೈರಸ್​ಅನ್ನು ಸಾಗಿಸಬಹುದಾದ ಮನುಷ್ಯರಾಗಿರುವ ತನಕ, ಲಸಿಕೆ ಹಾಕಿಸಿಕೊಳ್ಳಿ” ಎಂದೂ ಅವರು ಹೇಳಿದ್ದಾರೆ.

    ಆಗ್ನೇಯ ಏಷ್ಯಾದಲ್ಲಿ ಕರೊನಾದಿಂದ ತತ್ತರಿಸಿರುವ ದೇಶಗಳಲ್ಲಿ ಒಂದಾದ ಫಿಲಿಪೈನ್ಸ್​ ಈವರೆಗೆ ಒಂದು ಮಿಲಿಯನ್​ಗೂ ಹೆಚ್ಚು ಪ್ರಕರಣಗಳು ಮತ್ತು 20,000 ಕ್ಕೂ ಹೆಚ್ಚು ಕರೊನಾ ಸಂಬಂಧಿತ ಸಾವುಗಳನ್ನು ಎದುರಿಸಿದೆ. ಆದರೆ ಸ್ಥಳೀಯ ಮಾಧ್ಯಮಗಳಲ್ಲಿ ಉಲ್ಲೇಖಿಸಲಾದ ಅಧ್ಯಯನಗಳ ಪ್ರಕಾರ, ಕರೊನಾ ಲಸಿಕೆ ಸುರಕ್ಷಿತವಲ್ಲ ಎಂಬ ಭಯದಿಂದ ಫಿಲಿಪಿನೋಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಲಸಿಕೆ ಹಾಕಿಸಿಕೊಳ್ಳಲು ಸಿದ್ಧರಿಲ್ಲ ಎನ್ನಲಾಗಿದೆ.

    ಇದನ್ನೂ ಓದಿ: ‘ನನ್ನ ಬಳಿ ಬಗೆಬಗೆ ತಿಂಡಿ ಇವೆ… ಬೇಗ ಬೇಗ ಆರ್ಡರ್‌ ಮಾಡಿ…’ ಸೈಕಲ್‌ ಏರಿ ಹೊರಟ ಸೋನು ಸೂದ್‌

    110 ಮಿಲಿಯನ್ ಜನಸಂಖ್ಯೆಯಲ್ಲಿ 70 ಮಿಲಿಯನ್ ಜನರಿಗೆ ಕರೊನಾ ಲಸಿಕೆ ನೀಡಿ ಹರ್ಡ್ ಇಮ್ಯುನಿಟಿ ಸಾಧಿಸುವ ಗುರಿ ಹೊಂದಿರುವ ಫಿಲಿಪೈನ್ಸ್​ನಲ್ಲಿ ಲಸಿಕಾ ಕಾರ್ಯಕ್ರಮ ಮಂದಗತಿಯಲ್ಲಿ ಸಾಗಿದೆ. ಜೂನ್ 20 ರವರೆಗೆ ಫಿಲಿಪೈನ್ಸ್​ನ 2.1 ಮಿಲಿಯನ್ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಲಸಿಕೆ ಹಾಕಿಸಿಕೊಳ್ಳದ ಜನರು ವೈರಸ್​​ನ ವಾಹಕರಾಗಿ ಓಡಾಡಿ ಇತರ ಜನರಿಗೆ ಸೋಂಕು ಹರಡುವಂತೆ ಮಾಡಬಹುದು ಎಂಬ ಆತಂಕ ವ್ಯಕ್ತಪಡಿಸಿರುವ ಅಧ್ಯಕ್ಷ ಡುಟರ್ಟೆ ಲಸಿಕೆ ನಿರಾಕರಿಸುವ ಜನರನ್ನು ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸುವುದಾಗಿ ಬೆದರಿಕೆ ಹಾಕಿದ್ದಾರೆ. (ಏಜೆನ್ಸೀಸ್)

    ಹೀಗೊಂದು ಅಳಿಲುಸೇವೆ : ಲಸಿಕಾ ಕೇಂದ್ರಕ್ಕೆ ಉಚಿತ ಬಸ್​ ಸೌಲಭ್ಯ!

    ಬಿಟ್ಟುಬಿಡಿ ಎಂದರೂ ಕೇಳದೆ ಮತ್ತಿನಲ್ಲಿದ್ದವನನ್ನು ಯದ್ವಾತದ್ವಾ ಥಳಿಸಿದ್ದ ಪಿಎಸ್​ಐ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts