More

    VIDEO | ‘ಅಫ್ಘಾನಿಸ್ತಾನಕ್ಕೆ ಹೋಗಿಬಿಡಿ, ಅಲ್ಲಿ ಪೆಟ್ರೋಲ್​ ಬೆಲೆ ಕಡಿಮೆ ಇದೆ’ ಎಂದ ಬಿಜೆಪಿ ನಾಯಕ!

    ಭೋಪಾಲ್: ಇಂಧನ ಬೆಲೆ ಏರಿಕೆ ಬಗೆಗಿನ ಸುದ್ದಿಗಾರರ ಪ್ರಶ್ನೆಗೆ ಕೋಪಗೊಂಡಿರುವ ಬಿಜೆಪಿ ನಾಯಕರೊಬ್ಬರು, “ನೀವು ಅಫ್ಘಾನಿಸ್ತಾನಕ್ಕೆ ಹೋಗಿಬಿಡಿ! ಅಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 50 ರೂಪಾಯಿ ಇದೆ” ಎಂದಿರುವ ಪ್ರಸಂಗ ನಡೆದಿದೆ. ಈ ಬಗೆಗಿನ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

    ಮಧ್ಯಪ್ರದೇಶದ ಕಟ್ನಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಾಮರತನ್ ಪಾಯಲ್​ ಅವರು ಈ ಮಾತು ಹೇಳಿದ್ದಾರೆ. ಸುದ್ದಿಗಾರರೊಬ್ಬರು, “ಪೆಟ್ರೋಲ್​ ಡೀಸೆಲ್​ ಬೆಲೆ ಏರಿಕೆ ಮಿತಿ ಮೀರಿದೆಯಲ್ಲಾ?” ಎಂದು ಕೇಳಿದಂತೆ, “ತಾಲಿಬಾನ್​​ ನಡೆಸುತ್ತಿರುವ ಅಫ್ಘಾನಿಸ್ತಾನಕ್ಕೆ ಹೋಗಿಬಿಡಿ. ಅಲ್ಲಿ ಪೆಟ್ರೋಲ್ ಲೀಟರ್​​ಗೆ 50 ರೂಪಾಯಿಗೆ ಸಿಗುತ್ತೆ… ಆದರೆ ಬಳಸುವವರು ಯಾರೂ ಇಲ್ಲ. ಅಲ್ಲಿ ಹಾಕಿಸಿಕೊಂಡು ಬನ್ನಿ” ಎಂದಿರುವ ಪಾಯಲ್​​, ಭಾರತದಲ್ಲಿ ಸುರಕ್ಷತೆಯಾದರೂ ಇದೆ. ಅದರ ಬಗ್ಗೆ ಯೋಚಿಸಿ ಎಂದಿದ್ದಾರೆ.

    ಜೊತೆಗೆ, “ಕರೊನಾ ಮೂರನೇ ಅಲೆ ನಮ್ಮನ್ನು ಅಪ್ಪಳಿಸುವ ಪರಿಸ್ಥಿತಿ ಇದೆ… ನೀವು ಪತ್ರಕರ್ತರಾಗಿ ಪೆಟ್ರೋಲ್​ ಬೆಲೆಯ ಬಗ್ಗೆ ಮಾತನಾಡುತ್ತಿದ್ದೀರಾ..” ಎಂದು ಪಾಯಲ್​​ ಕುಟುಕಿದ್ದಾರೆ. ಈ ಬಗ್ಗೆ ಹಲವಾರು ನೆಟ್ಟಿಗರು ಮೀಮ್​ಗಳೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಮರತನ್ ಪಾಯಲ್ ಮತ್ತು ಅವರನ್ನು ಸುತ್ತುವರಿದಿದ್ದ ಬೆಂಬಲಿಗರು ಕರೊನಾ ಮುನ್ನೆಚ್ಚರಿಕೆ ಕ್ರಮವಾದ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲದಿರುವುದು, ಮಾಸ್ಕ್​ ಹಾಕಿಲ್ಲದಿರುವುದು ವಿಡಿಯೋದಲ್ಲಿ ಗೋಚರಿಸುತ್ತದೆ. ಇದು ಭಾರೀ ವಿಪರ್ಯಾಸ ಎಂದು ಮತ್ತೆ ಕೆಲವರು ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts