More

    ಕಾಂಗ್ರೆಸ್​ನವರು ಈಗಲಾದರೂ ನಾಟಕ ನಿಲ್ಲಿಸಿದರಲ್ಲ ಎಂಬುದೇ ಖುಷಿ: ಅಸಾದುದ್ದೀನ್​ ಓವೈಸಿ

    ನವದೆಹಲಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಾಳೆಯೇ ಭೂಮಿಪೂಜೆ ನಡೆಯಲಿದ್ದು, ಇಂದು ಕಾಂಗ್ರೆಸ್​ ಹೇಳಿಕೆ ಬಿಡುಗಡೆ ಮಾಡಿತ್ತು. ರಾಮಮಂದಿರ ಭೂಮಿ ಪೂಜೆ ರಾಷ್ಟ್ರೀಯ ಏಕತೆಯ ಹಬ್ಬ ಆಗಲಿ ಎಂದು ಪ್ರಿಯಾಂಕಾ ಗಾಂಧಿ ಸೇರಿ, ಕಾಂಗ್ರೆಸ್​ನ ಹಲವು ನಾಯಕರು ಹಾರೈಸಿದ್ದಾರೆ. ಹಾಗೇ ಪ್ರಿಯಾಂಕಾ ಗಾಂಧಿ ಇದನ್ನು ಟ್ವೀಟ್​ ಮಾಡಿದ್ದರು.

    ಅದರ ಬೆನ್ನಲ್ಲೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ, ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್​ನ ಉಳಿದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಟ್ವೀಟ್​ ಮಾಡಿರುವ ಅವರು, ಕಾಂಗ್ರೆಸ್​​​​​ನವರು ನಾಟಕವನ್ನು ಈಗಲಾದರೂ ನಿಲ್ಲಿಸಿದರಲ್ಲ..! ಈ ಬಗ್ಗೆ ಖುಷಿಯಾಗುತ್ತಿದೆ. ಕಾಂಗ್ರೆಸ್​ ಹಿಂದುತ್ವದ ಉಗ್ರಗಾಮಿತ್ವವನ್ನು ಸ್ವೀಕರಿಸಲು ಬಯಸಿದರೆ ತಪ್ಪೇನೂ ಇಲ್ಲ. ಆದರೆ ಸಹೋದರತ್ವದ ಬೂಟಾಟಿಕೆಯ ಮಾತುಗಳನ್ನೇಕೆ ಆಡಬೇಕು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಮಜನ್ಮಭೂಮಿಯಲ್ಲಿ ಭೂಮಿಪೂಜೆ: ರಾವಣ ದೇಗುಲದ ಅರ್ಚಕರಲ್ಲಿ ಸಂಭ್ರಮ, ಲಡ್ಡು ವಿತರಣೆಗೆ ಸಿದ್ಧತೆ

    ನಮ್ಮ ಬಾಬ್ರಿ ಮಸೀದಿಯ ಧ್ವಂಸದಲ್ಲಿ ನಿಮ್ಮದೂ ಕೊಡುಗೆ ಇದೆ ಎಂದು ನಾಚಿಕೆಯಿಲ್ಲದೆ, ಹೆಮ್ಮೆಯಿಂದ ಈಗಲಾದರೂ ಒಪ್ಪಿಕೊಳ್ಳಿ ಎಂದು ಓವೈಸಿ ಹೇಳಿದ್ದಾರೆ.

    ರಾಮ ಎಲ್ಲರೊಂದಿಗೂ ಇದ್ದಾನೆ. ಆತನಿಗೆ ದೀನಬಂಧು ಎಂಬ ಹೆಸರಿದ್ದು, ಅದು ಸರಳತೆ, ಧೈರ್ಯ, ತ್ಯಾಗ, ಬದ್ಧತೆಯ ಸಂಕೇತವಾಗಿದೆ. ಭಾರತೀಯ ಉಪಖಂಡದ ಸಂಸ್ಕೃತಿಯೊಳಗೆ ರಾಮಾಯಣ, ರಾಮ, ಸೀತೆ ಎಲ್ಲರೂ ಹಾಸುಹೊಕ್ಕಂತೆ ಇದ್ದಾರೆ. ರಾಮಾಯಣದ ಕಥೆ ನಮ್ಮ ಸಂಸ್ಕೃತಿಯನ್ನು ಬೆಳಗುತ್ತಿದ್ದು, ಧಾರ್ಮಿಕ ಆಚರಣೆಗಳಿಗೂ ಕನ್ನಡಿಯಂತಿದೆ ಎಂದು ಪ್ರಿಯಾಂಕಾ ಗಾಂಧಿ ಇಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್​)

    ಸಂದರ್ಶನದಲ್ಲಿ ಗರ್ಲ್‌ಫ್ರೆಂಡೇ ಇಲ್ಲ ಎಂದಿದ್ದ: ಲೈವ್‌ ಷೋನಲ್ಲಿ ಅರೆಬೆತ್ತಲೆ ಹುಡುಗಿಯಿಂದ ಸಿಕ್ಕಿಬಿದ್ದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts