More

    ಕೊಡುವ ದಾನ ಸತ್ಕಾರ್ಯಗಳಿಗೆ ಸಲ್ಲಬೇಕು

    ತಾಳಿಕೋಟಿ/ಮುದ್ದೇಬಿಹಾಳ: ಸಮಾಜ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ. ತಮ್ಮಲ್ಲಿರುವ ಸಂಪತ್ತಿನ ಅಲ್ಪ ಭಾಗವನ್ನು ಬಡವರಿಗೆ ಉಪಯೋಗವಾಗುವ ಕಾರ್ಯ ಮಾಡುವ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಕುಂಟೋಜಿ ಚೆನ್ನವೀರ ದೇವರು ಪ್ರೇರಣೆಯಾಗಿದ್ದಾರೆ ಎಂದು ಮುದ್ದೇಬಿಹಾಳ ಅಹಿಲ್ಯಾಬಾಯಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್. ಮದರಿ ಹೇಳಿದರು.

    ತಾಳಿಕೋಟಿ ಪಟ್ಟಣದ ವೀರಶೈವ ವಿದ್ಯಾವರ್ಧಕ ಕಾಲೇಜು ಆವರಣದಲ್ಲಿ ಭಾನುವಾರ ಕುಮಾರೇಶ್ವರ ಜೀವನ ವಿಕಾಸ ೌಂಡೇಶನ್, ದೇವಿಕಾ ಸುಬ್ಬರಾವ್ ೌಂಡೇಶನ್, ಮಲ್ಲಿಕಾರ್ಜುನ ಮದರಿ ಅಭಿಮಾನಿ ಬಳಗ ಹಾಗೂ ವಿಜಯವಾಣಿ- ದಿಗ್ವಿಜಯ ಸುದ್ದಿವಾಹಿನಿ ಸಹಯೋಗ ಹಾಗೂ ಸಾಧನಾ ಮಹಿಳಾ ಒಕ್ಕೂಟ, ಕುಂಟೋಜಿ ಯಶಸ್ವಿನಿ ಮಹಿಳಾ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಮಾನವೀಯ ನೆರಳು ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಕುಂಟೋಜಿ ಶ್ರೀಗಳು ಸಾಮಾಜಿಕ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತಿರುವುದು ನಮಗೆ ಸಾಮಾಜಿಕವಾಗಿ ಸೇವೆ ಸಲ್ಲಿಸಲು ಮತ್ತಷ್ಟು ಉತ್ಸಾಹ ಮೂಡಿದೆ ಎಂದರು. ಜಿ.ಪಂ. ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಬೇರೆ ಬೇರೆ ಪಕ್ಷಗಳು ಈಗ ಸೇವೆಯ ಸುಗ್ಗಿಕಾಲ. ರಾಜಕಾರಣಿಗಳು ಸ್ವಲ್ಪ ಕೊಟ್ಟು ಹೆಚ್ಚು ಪಡೆದುಕೊಳ್ಳುವ ಗುಣವಳ್ಳವರು ಎಂದು ಹೇಳಿದರು.

    ಕಲ್ಲದೇವನಹಳ್ಳಿ ಸಾಹಿತಿ ಅಮರೇಶ ಜಾಲಿಬೆಂಚಿ ಮಾತನಾಡಿ, ಮಾನವೀಯತೆಯ ನೆರಳಿನಲ್ಲಿ ನಾವೆಲ್ಲ ಬದುಕಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಕೂಡಿಸುವ ಕೆಲಸ ಮಾಡುವುದು ಕಡಿಮೆಯಾಗಿದೆ. ಮಾನವೀಯತೆ ಜೀವಂತವಾಗಿದೆ ಎಂಬುದು ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಧರ್ಮಗಳ ಮಧ್ಯೆ ತೊಡಕನ್ನುಂಟು ಮಾಡುವ ಕಾರ್ಯನಡೆದಿದೆ. ಅದನ್ನು ನಿಲ್ಲಿಸಬೇಕು ಎಂದು ಹೇಳಿದರು. ನೇತತ್ವ ವಹಿಸಿದ್ದ ಡಾ. ಕುಂಟೋಜಿ ಚೆನ್ನವೀರ ದೇವರು, ದಿವ್ಯ ಸಾನಿಧ್ಯ ವಹಿಸಿದ್ದ ಸಿಂದಗಿ ಪ್ರಭುಸಾರಂಗಮಠದ ಪ್ರಭು ಸಾರಂಗದೇವ ಶಿವಾಚಾರ್ಯರು, ಯುವ ಮುಖಂಡ ರಾಹುಲ್ ನಾಡಗೌಡ, ಕಾಶೀನಾಥ ಮುರಾಳ ಮಾತನಾಡಿದರು.

    ಆಲೂರಿನ ವೇ. ಸಂಗಯ್ಯ ಶಾಸ್ತ್ರಿಗಳು, ಜಂಗಮ ಸಮಾಜದ ಗೌರವಾಧ್ಯಕ್ಷ ರಾಮಲಿಂಗ ಸ್ವಾಮಿಗಳು, ಗಣ್ಯರಾದ ಬಿ.ಎಸ್. ಪಾಟೀಲ್ ಯಾಳಗಿ, ವಿ.ವ. ಸಂಘದ ಅಧ್ಯಕ್ಷ ವಿರೂಪಾಕ್ಷಯ್ಯ (ಹಂಪಿ) ಹಿರೇಮಠ, ಗಂಗಾ ೌಂಡೇಶನ್ ಅಧ್ಯಕ್ಷ ಶ್ರೀಕಾಂತ ಚಲವಾದಿ, ಮುಖಂಡ ಸಂಗನಗೌಡ ಅಸ್ಕಿ, ಎ.ಎಸ್. ಹಿಪ್ಪರಗಿ, ಜಿ.ಎಸ್. ಕಶೆಟ್ಟಿ, ಕಾಶೀನಾಥ ಸಜ್ಜನ, ಶಿವಶಂಕರಗೌಡ ಹಿರೇಗೌಡರ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಬಿರಾದಾರ, ಸಂಗನಗೌಡ ಪಾಟೀಲ್, ಶಿವಲಿಂಗಪ್ಪ ಗಸ್ತಿಗಾರ, ಮಲ್ಲನಗೌಡ ಬಿರಾದಾರ, ರವಿಕುಮಾರ ತನಿಖೆದಾರ, ಸಾಧನಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಿರಿಜಾ ಕಡಿ, ಸಿದ್ಧಮ್ಮ ಒಣರೊಟ್ಟಿ, ಭಾತಿ ಮದ್ದರಕಿ, ಎಂ.ಜಿ. ಗುಂಡಕನಾಳ, ಮುರುಗೆಪ್ಪ ಸರಶೆಟ್ಟಿ, ದಿಗ್ವಿಜಯ ನ್ಯೂಸ್ ಜಿಲ್ಲಾ ವರದಿಗಾರ ಶಶಿಕಾಂತ ಮೆಂಡೇಗಾರ, ವಿಜಯವಾಣಿ ಪ್ರತಿನಿಧಿ ಶಂಕರ ಹೆಬ್ಬಾಳ, ಪಿ.ಜಿ. ಘೋರ್ಪಡೆ ಮೊದಲಾದವರು ಇದ್ದರು.

    ಸಾಧನಾ ಮಹಿಳಾ ಒಕ್ಕೂಟದ ಸದಸ್ಯರು ಪ್ರಾರ್ಥಿಸಿದರು. ಸಿದ್ದು ಹೆಬ್ಬಾಳ ಹಾಗೂ ಮಹಾಂತೇಶ ಮುರಾಳ ನಿರೂಪಿಸಿದರು. ಗುರುಮೂರ್ತಿ ಕಣಕಾಲಮಠ ವಂದಿಸಿದರು.

    ಮಹಾದಾಸೋಹಿ ಪ್ರಶಸ್ತಿ ಪ್ರದಾನ:

    ಕುಮಾರೇಶ್ವರ ಜೀವನ ವಿಕಾಸ ೌಂಡೇಶನ್ ವತಿಯಿಂದ ಜಿ.ಪಂ. ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ್ ಕೂಚಬಾಳ, ಸಮಾಜ ಸೇವಕ ಎಂ.ಎನ್. ಮದರಿ ಅವರಿಗೆ ಕುಂಟೋಜಿ ಚೆನ್ನವೀರ ದೇವರು ಮಹಾದಾಸೋಹಿ ಪ್ರಶಸ್ತಿ ನೀಡಿ ಗೌರವಿಸಿದರು.

    ಸರಳತೆ ತೋರಿದ ಶ್ರೀಗಳು

    ಕಾರ್ಯಕ್ರಮದ ಆರಂಭದಿಂದ ಹಿಡಿದು ಮುಕ್ತಾಯದವರೆಗೂ ನೇತತ್ವ ವಹಿಸಿದ್ದ ಕುಂಟೋಜಿ ಚೆನ್ನವೀರ ದೇವರು ಲವಲವಿಕೆಯಿಂದ ಓಡಾಡಿದರಲ್ಲದೇ ಯಾವುದೇ ಕುಂದು ಕೊರತೆ ಬಾರದಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯುವಂತೆ ನೋಡಿಕೊಂಡರು. ವಿಶೇಷವಾಗಿ ಶ್ರೀಗಳು ವೇದಿಕೆಯಲ್ಲಿ ಕೂರದೇ ಕೆಳಗಡೆ ಪ್ರೇಕ್ಷಕರ ಸಾಲಿನಲ್ಲಿ ಕೂತು ಕಾರ್ಯಕ್ರಮ ನಡೆಸಿಕೊಟ್ಟಿದ್ದು ಅವರ ಸರಳತೆಗೆ ಸಾಕ್ಷಿಯಾಯಿತು.

    ಮನುಷ್ಯ ಅನ್ನಿಸಿಕೊಳ್ಳಬೇಕಾದರೆ ಆತನ ಹೃದಯದಲ್ಲಿ ಮಾನವೀಯ ತತ್ವಗಳಿದ್ದರೆ ಮಾತ್ರ ಆತ ಮನುಷ್ಯ ಎನ್ನಿಸಿಕೊಳ್ಳುತ್ತಾನೆ. ಬಹಳಷ್ಟು ಜನ ಮಾನವೀಯತೆಯಿಂದ ಸ್ವಾರ್ಥ ಬದುಕಿನ ಕಡೆಗೆ ತೆರಳುತ್ತಿರುವ ಈ ದಿನಮಾನಗಳಲ್ಲಿ ನಿಸ್ವಾರ್ಥ ಸೇವೆ ಮಾಡಿದ್ದನ್ನು ಭಗವಂತ ನೋಡುತ್ತಾನೆ. ಇದೊಂದು ಸಂಚಾರಿ ಮಾನವೀಯ ನೆರಳು ಕಲ್ಪಿಸುವ ಕಾರ್ಯ ಮಾಡಿದ್ದೇವೆ. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ನೂರಾರು ಜನರಿಗೆ ಈ ಕೊಡೆಗಳು ಆಸರೆಯಾಗುತ್ತದೆ. ಹಿಂದಿನ ಸರಕಾರದಲ್ಲಿ ಎಷ್ಟೊಂದು ಸೈಕಲ್ ಕೊಟ್ಟಿದ್ದಾರೆಯೋ ಯಾರ ಮನೆಯಲ್ಲೂ ಅವು ಸುರಕ್ಷಿತವಾಗಿಲ್ಲ. ಹಾಗಾಗಿ ಉಚಿತವಾಗಿ ಕೊಟ್ಟಿದ್ದನ್ನು ಬೇಕಾಬಿಟ್ಟಿಯಾಗಿ ಬಳಸದೇ ಜತನದಿಂದ ಕಾಪಾಡಿಕೊಳ್ಳಬೇಕು.
    ಚೆನ್ನವೀರ ದೇವರು, ಸಂಸ್ಥಾನ ಹಿರೇಮಠ, ಕುಂಟೋಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts